ಅಜ್ಜಂಪುರ : (ನ್ಯೂಸ್ ಮಲ್ನಾಡ್ ವರದಿ) 17 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ನಿನ್ನೆ ಅಜ್ಜಂಪುರದಲ್ಲಿ ಸಂಪನ್ನಗೊಂಡಿತು. ಈ ಕಾರ್ಯಕ್ರಮದಲ್ಲಿ ಅನೇಕ ಮುಖಂಡರು ಕನ್ನಡದ ಅಭಿಮಾನಿಗಳು ಹಾಗೂ ಭಾಗವಹಿಸಿದ್ದರು.
ಸಾಹಿತ್ಯವು ಮನಸ್ಸನ್ನು ಎಲ್ಲಾ ಚಿಂತೆಗಳಿಂದ ದೂರ ಮಾಡಿ ನೆಮ್ಮದಿ ನೀಡುತ್ತದೆ. ಅತ್ಯಂತ ಖುಷಿಯಿಂದ ಬದುಕಲು ಸಾಹಿತ್ಯ ಹೆಚ್ಚಿನ ಆಸ್ಪದ ನೀಡುತ್ತದೆ. ಕವಿಗಳು ಹೆಚ್ಚಾದಂತೆ ಸಮಾಜದಲ್ಲಿ ಸಾಮರಸ್ಯ ಬೆಳೆಯುತ್ತದೆ ಅಶಾಂತಿ ದೂರವಾಗುತ್ತದೆ ಎಂದು ಪ್ರಾಧ್ಯಾಪಕ ನೆಲ್ಲಿಕಟ್ಟೆ ಸಿದ್ದೇಶ್ ನೆರೆದವರನ್ನುದ್ದೇಶಿಸಿ ಅಜ್ಜಂಪುರದ ಸೂರಿ ವೇದಿಕೆಯಲ್ಲಿ ನಡೆದ ಸಮ್ಮೇಳನದಲ್ಲಿ ಮಾತನಾಡಿದರು.
ಸಾಹಿತ್ಯ ಸಮ್ಮೇಳನವು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತದೆ ಈ ಕುರಿತಾಗಿ ಸಮ್ಮೇಳನ ಕೆಲ ನಿರ್ಣಯಗಳನ್ನು ಕೈಗೊಂಡಿದೆ ಎನ್ನುತ್ತಾ ರೋಪ್ ವೇ ಯೋಜನೆಯನ್ನು ರದ್ದುಮಾಡಬೇಕು, ಅಜ್ಜಂಪುರದ ಕಲಾಶ್ರೀ ರಂಗಮಂದಿರ ಕೆಡವಿ ಹೊಸದಾಗಿ ನಿರ್ಮಾಣ ಮಾಡಬೇಕು. ಇಲ್ಲಿನ ಸುತ್ತಮುತ್ತಲಿನ ಗ್ರಾಮಗಳಿಗೆ ಸಮರ್ಪಕವಾದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂಬ ವಿಚಾರ ಸೇರಿದಂತೆ ಅನೇಕ ವಿಚಾರಗಳ ಕುರಿತಾಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಿರ್ಧಾರ ಕೈಗೊಂಡಿದೆ.
ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಡಾ.ವಿ ನರಹರಿ, ಹೆಚ್.ಎಂ ರುದ್ರಸ್ವಾಮಿ ಅವರಿಗೆ ಸಾಹಿತ್ಯ ಸಿರಿ ಪ್ರಶಸ್ತಿಯನ್ನು ಪ್ರಧಾನ ಮಾಡುವುದರ ಮೂಲಕ ಗೌರವ ಸೂಚಿಸಲಾಯಿತು. ದೇಶದ ಸಂಸ್ಕೃತಿ ಹಾಗೂ ಸಂಸ್ಕಾರದ ಕುರಿತಾಗಿ ಖ್ಯಾತ ಸಾಹಿತಿಗಳಾದ ಬೆಳವಾಡಿ ಮಂಜುನಾಥ್ ಅವರು ವಿಶೇಷ ಉಪನ್ಯಾಸವನ್ನು ನೀಡಿ ಜನರಿಗೆ ಈ ಕುರಿತು ಹೆಚ್ಚಿನ ಮಾಹಿತಿ ನೀಡಿದರು.
ಈ ಸಮ್ಮೇಳನದಲ್ಲಿ ಜಾನಪದ ಕಲಾವಿದರಿಂದ ಜಾನಪದ ಸಂಭ್ರಮವಾದ ಭಜನೆ ನಡೆಯಿತು. ಈ ಸಮ್ಮೇಳನದಲ್ಲಿ ಕನ್ನಡದ ಅನೇಕ ಸಾಹಿತಿಗಳು, ಪ್ರಮುಖರು ಹಾಗೂ ಕನ್ನಡದ ಪ್ರೇಮಿಗಳು ಭಾಗವಹಿಸಿದ್ದರು.





0 Comments