ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಶಾಲೆಯಲ್ಲಿ ಮಕ್ಕಳಿಗೆ ನಮಾಜ್ ಮಾಡಲು ಅನುಮತಿ ನೀಡಿದ ಶಾಲಾ ಮುಖ್ಯೋಪಾದ್ಯಾಯಿನಿಯನ್ನು ಅಮಾನತುಗೊಳಿಸಿ ಡಿಡಿಪಿಐ ಆದೇಶ ಹೊರಡಿಸಿದ್ದಾರೆ.
ಶಿವಮೊಗ್ಗದ ಗೋಪಾಲಗೌಡ ಬಡಾವಣೆಯ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಶಾಲಾ ಮುಖ್ಯೋಪಾದ್ಯಾಯಿನಿ ಮಕ್ಕಳಿಗೆ ನಮಾಜ್ ಮಾಡಲು ಅನುಮತಿ ನೀಡಿ ಅದಕ್ಕಾಗಿಯೇ ಪ್ರತ್ಯೇಕವಾದ ರೂಂ ಒಂದನ್ನು ಮೀಸಲಿರಿಸಿದ್ದಾರೆ. ಈ ಕುರಿತಾದ ವೀಡಿಯೋ ಹಾಗೂ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಶಾಲೆಯ ಮುಖ್ಯೋಪಾದ್ಯಾಯಿನಿ ಜಬೀನಾ ಪರ್ವೀನ್ ಅಮಾನತುಗೊಂಡಿದ್ದಾರೆ.
ಆದರೆ ಈ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವವರು ಬಿಜೆಪಿ ಕಾರ್ಪೊರೇಟರ್ ವಿಶ್ವನಾಥ್ ಎಂಬುವವರಾಗಿದ್ದಾರೆ.ಈ ಕುರಿತು ಮಾಹಿತಿ ನೀಡಿರುವ ಸಾರ್ವಜನಿಕರು ಶಾಲೆಯಲ್ಲಿ ನಿತ್ಯವೂ ನಮಾಜ್ ಮಾಡಲು ಅವಕಾಶ ಕಲ್ಪಿಸಲಾಗಿತ್ತು ಎಂದಿದ್ದಾರೆ. ಶಾಲೆಗೆ ಆಗಮಿಸುವ ಎಲ್ಲಾ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಟೋಪಿ ತರುವುದನ್ನು ಗಮನಿಸಿದ ಸ್ಥಳೀಯರು ಈ ಕುರಿತು ಮಾಹಿತಿ ಪಡೆಯಲು ಮುಂದಾಗಿದ್ದಾರೆ ಅಂತೆಯೇ ಶಾಲೆಯ ರೂಂ ಒಂದರಲ್ಲಿ ಪ್ರತಿದಿನ ವಿದ್ಯಾರ್ಥಿಗಳು ನಮಾಜ್ ಮಾಡುವುದು ಸ್ಥಳೀಯರಿಗೆ ಗೊತ್ತಾಗಿದೆ ಈ ಹಿನ್ನೆಲೆ ವೀಡಿಯೋ ಮಾಡಿ ಪೊಲೀಸರಿಗೆ ಈ ಸಂಬಂಧ ಮಾಹಿತಿ ನೀಡಿದ್ದಾರೆ.
ಆದರೆ ಈ ವಿಚಾರಗಳು ಪೊಲೀಸ್ ಅಧಿಕಾರಿಗಳ ವ್ಯಾಪ್ತಿಗೆಬಾರಾದ ಕಾರಣ ಡಿಡಿಪಿಐ ಅವರಿಗೆ ಈ ದೂರನ್ನು ವರ್ಗಾಯಿಸಿದ್ದಾರೆ. ಈ ಕುರಿತು ಇಲಾಖೆಯ ಅಧಿಕಾರಿಗಳಿಗೆ ಸೂಚಿಸದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾಗಿ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಆಡಳಿತ ಮಂಡಳಿಗೆ ಈ ಕುರಿತು ಕ್ರಮಕ್ಕೆ ಸೂಚಿಸಿದ್ದಾರೆ.
ಆಡಳಿತ ಮಂಡಳಿಯು ಕೈಗೊಂಡ ನಿರ್ಧಾರದಂತೆ ಜಬೀನಾ ಪರ್ವೀನ್ ಅಮಾನತಾಗಿದ್ದಾರೆ. ಎಲ್ಲರೂ ಒಂದೇ ಎಂಬ ಮನೋಭಾವನೆಯಿಂದ ವಿದ್ಯೆಯನ್ನು ಕಲಿಯಬೇಕಾದ ಆಲಯದಲ್ಲಿ ಈ ರೀತಿಯ ಘಟನೆಗಳು ನಡೆಯತ್ತಿರುವುದನ್ನು ಕಂಡು ಸಾರ್ವಜನಿಕರು ಆತಂಕ ಕ್ಕೀಡಾಗಿದ್ದಾರೆ.





0 Comments