ತರೀಕೆರೆ : (ನ್ಯೂಸ್ ಮಲ್ನಾಡ್ ವರದಿ) ರಷ್ಯಾ ಹಾಗೂ ಉಕ್ರೇನ್ ನಡುವೆ ನಿರಂತರವಾಗಿ ನಡೆಯುತ್ತಿರುವ ಯುದ್ಧದಲ್ಲಿ ಅನೇಕ ಭಾರತೀಯರು ಸಿಲುಕಿದ್ದಾರೆ, ಅದರಲ್ಲೂ ಬಹಳಷ್ಟು ಜನ ಕನ್ನಡಿಗರು ಉಕ್ರೇನ್ ಅಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಈ ರಣ ಭೀಕರ ಯುದ್ಧದ ಮಧ್ಯೆ ತಾಯ್ನಾಡಿಗೆ ಮರಳಿದ ವಿದ್ಯಾರ್ಥಿಯೋರ್ವ ಆತನನ್ನು ಭಾರತದ ತ್ರಿವರ್ಣ ಧ್ವಜ ಕಾಪಾಡಿದ ಪರಿಯನ್ನು ಹಂಚಿಕೊಂಡಿದ್ದಾನೆ.

ಇದನ್ನೂ ಓದಿ : ಹಿಂದು ಕಾರ್ಯಕರ್ತ ಹರ್ಷನ ಮನೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ, ಸಾಂತ್ವನ

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಟಿ ಎನ್ ಲೋಕೇಶ್ ಹಾಗೂ ಎ.ಎಸ್ ಕವಿತಾ ದಂಪತಿಗಳ ಪುತ್ರ ವೈಭವ್ ಎಲ್ ಸಪ್ತಗಿರಿ ಉಕ್ರೇನ್ ನ ಬೋಕವೇನಿಯಾ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದ. ರಷ್ಯಾ ಹಾಗೂ ಉಕ್ರೇನ್ ದೇಶಗಳ ನಡುವೆ ಯುದ್ಧ ಆರಂಭವಾದ ಬಳಿಕ ಉಕ್ರೇನ್ ನ ಪರಿಸ್ಥಿತಿ ಅತ್ಯಂತ ಕಠಿಣವಾಗುತ್ತಾ ಹೋಯಿತು, ಈ ಸಂದರ್ಭದಲ್ಲಿ ನಮ್ಮನ್ನು ಸುರಕ್ಷಿತವಾಗಿರಿಸಲು ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ಹಾಸ್ಟೆಲ್ ಗಳಿಂದ ವಿದ್ಯಾರ್ಥಿಗಳು ಸುರಕ್ಷಿತವಾಗಿರುವ ಸ್ಥಳಗಳಿಗೆ ತೆರಳಬೇಕೆಂದು ಸೂಚಿಸಿದರು ಆದ ಕಾರಣ ನಾವು ಹಾಸ್ಟೆಲ್ನಿಂದ (ಶಿಮಿರ್ಸ್ಟಿ ನಗರದಿಂದ) ರೊಮೇನಿಯಾ ಗಡಿ ಪ್ರದೇಶಕ್ಕೆ ತೆರಳಲು ಸೂಚನೆ ಬಂತು ಈ ಸಂದರ್ಭದಲ್ಲಿ ಭಾರತದ ತ್ರಿವರ್ಣ ಧ್ವಜ ನಮ್ಮನ್ನು ಸುರಕ್ಷಿತವಾಗಿ ಒಂದೆಡೆಯಿಂದ ಇನ್ನೊಂದೆಡೆಗೆ ಕೊಂಡೊಯ್ಯಿತು ಇದರಿಂದಾಗಿ ನಮ್ಮ ದೇಶಕ್ಕೆ ವಿದೇಶಿಗರು  ನೀಡುವ ಗೌರವ ಹಾಗೂ ಮನ್ನಣೆ ಆ ಸಂದರ್ಭದಲ್ಲಿ ನಮ್ಮೆಲ್ಲರಿಗೂ ತಿಳಿಯಿತು ಎಂದರು.

ವಿದ್ಯಾರ್ಥಿ ವೈಭವ್ ಸಿಲುಕಿದ್ದ ಸ್ಥಳದಿಂದ ರೊಮೇನಿಯಾ ಬಾರ್ಡರ್ ಗೆ ತಲುಪಲು ಅದಾಗಲೇ ಭಾರತೀಯ ರಾಯಭಾರ ಕಚೇರಿ ವ್ಯವಸ್ಥೆ ಕಲ್ಪಿಸಿತ್ತು, ನಾವಿದ್ದ ಬಸ್ಸಿಗೆ ಭಾರತೀಯರು ಬಸ್ಸಿನಲ್ಲಿ ಇದ್ದಾರೆ ಎಂದು ಬೋರ್ಡ್ ಹಾಕಲಾಗಿತ್ತು ಹಾಗೂ ಭಾರತದ ತ್ರಿವರ್ಣ ಧ್ವಜವನ್ನು ಹಾಕಲಾಗಿತ್ತು ಈ ಕಾರಣದಿಂದಾಗಿ ನಮಗೆ ಕಿಂಚಿತ್ತು ತೊಂದರೆಯಾಗದಂತೆ ಸುರಕ್ಷಿತವಾಗಿ ರೊಮೇನಿಯಾ ಗಡಿಗೆ ತಲುಪಿದೆವು. ಇದೊಂದು ಘಟನೆ ನಮ್ಮ ದೇಶದ ಮೇಲೆ ವಿದೇಶಿಗರಿಗಿರುವ ಬದ್ಧತೆ ಹಾಗೂ ಗೌರವವನ್ನು ತೋರುತ್ತದೆ ಎಂದು ಹೆಮ್ಮೆಯನ್ನು ವ್ಯಕ್ತಪಡಿಸಿದರು.

ಭಾರತದ ರಾಯಭಾರ ಕಚೇರಿಗೆ ಮನಸ್ಪೂರ್ವಕ ಕೃತಜ್ಞತೆ :

ಉಕ್ರೇನ್ ನಲ್ಲಿ ಸಿಲುಕಿರುವ ಭಾರತದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಹಾಗೂ ಅತೀ ಹೆಚ್ಚಿನ ಕಾಳಜಿಯಿಂದ ಭಾರತಕ್ಕೆ ಕರೆತರಲು ಭಾರತೀಯ ರಾಯಭಾರ ಕಚೇರಿ ಹಾಗೂ ಭಾರತ ಸರ್ಕಾರ ದಿನದ 24 ಗಂಟೆಯೂ ತುರ್ತಾಗಿ ಕಾರ್ಯ ನಿರ್ವಹಣೆ ಮಾಡುತ್ತಿದೆ ಅಧಿಕಾರಿಗಳ ಕಾರ್ಯ ಶ್ಲಾಘನೀಯ ಎಂದು ಅಧಿಕಾರಿಗಳ ಹಾಗೂ  ಕಛೇರಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.