ಕೊಟ್ಟಿಗೆಹಾರ : (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಕಳ್ಳಭಟ್ಟಿ ಯನ್ನು ಸಂಗ್ರಹಣೆ ಮಾಡಿದ್ದ ಮನೆಯ ಮೇಲೆ ಖಚಿತ ಮಾಹಿತಿಯನ್ನು ಆಧರಿಸಿ ಪೊಲೀಸರು ದಾಳಿ ಮಾಡಿ ಕಳ್ಳ ಪಟ್ಟಿಯನ್ನು ಪಡೆದಿದ್ದಾರೆ. 

ಇದನ್ನೂ ಓದಿ : ತೀರ್ಥಹಳ್ಳಿ: ಗುಂಡೇಟು ತಗುಲಿ ಬಿಜೆಪಿ ನಾಯಕ ಸಾವು, ಗೃಹ ಸಚಿವರ ಭೇಟಿ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಳಗೂರು ಗ್ರಾಮದ ರಾಬರ್ಟ್ ಪ್ರವೀಣ ಫರ್ನಾಂಡಿಸ್ ಅವರ ಮನೆಯ ಬಳಿ ದಾಳಿ ನಡೆಸಿದ ಪೊಲೀಸರು ಕಳ್ಳಭಟ್ಟಿ ಹಾಗೂ ಸಾರಾಯಿ ತಯಾರಿಕೆಗೆ ಬಳಸುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಆರೋಪಿಯು ಹೊಂದಿದ್ದ 50ಲೀಟರ್ ಬೆಲ್ಲದಕೊಳೆ, 17 ಲೀಟರ್ ಕಳ್ಳಭಟ್ಟಿ, ಸಾರಾಯಿ ಹಾಗೂ ಬೈಕಿನಲ್ಲಿರಿಸಿದ್ದ 3 ಲೀಟರ್ ನಷ್ಟು ಕಳ್ಳಭಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕರಾದ ಎ.ಆರ್ ಅಪೂರ್ವ, ರಮೇಶ್, ಶಿವಣ್ಣ, ವಾಹನ ಚಾಲಕ ಸತೀಶ್, ಮಲ್ಲಪ್ಪ ಇದ್ದರು. 

ತನು ಕೊಟ್ಟಿಗೆಹಾರ, ವರದಿಗಾರರು