ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ವ್ಯಕ್ತಿಯೋರ್ವರು ಭೂ ಪರಿವರ್ತನೆ ಮಾಡಿ ನಂತರದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಜಾಗಕ್ಕೆ ಬೇಲಿ ಹಾಕಿದ್ದನ್ನು ಗ್ರಾಮ ಪಂಚಾಯತ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪಿಡಿಓ ಸಮ್ಮುಖದಲ್ಲಿ ತೆರವುಗೊಳಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ವಿದ್ಯಾರಣ್ಯಪುರ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಕಸಬಾ ಹೋಬಳಿಯ ಭಾರತೀ ಕೃಷ್ಣ ಶೆಟ್ಟಿ ಎಂಬುವವರು ಕರ್ನಾಟಕ ಭೂ ಕಂದಾಯ ಅಧಿನಿಯಮದಡಿಯಲ್ಲಿ ಭೂ ಪರಿವರ್ತನೆಯನ್ನು ಮಾಡಿಕೊಂಡಿರುತ್ತಾರೆ, ಆದರೆ ಅದೇ ಜಾಗದಲ್ಲಿ ಬೇಲಿ ನಿರ್ಮಾಣಮಾಡಿ ಸುತ್ತಮುತ್ತಲಿನವರಿಗೆ ರಸ್ತೆಯ ತೊಂದರೆ ಉಂಟಾಗುವಂತೆ ಮಾಡಿದುದರಿಂದ ಹಾಗೂ ಪಂಚಾಯಿತಿ ಸ್ವತ್ತನ್ನು ಬಳಸಿಕೊಂಡ ಕಾರಣ ಗ್ರಾಮ ಪಂಚಾಯತ್ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿಗಳು ಅಡ್ಡಲಾಗಿ ನಿರ್ಮಿಸಿದ್ದ ಬೇಲಿಯನ್ನು ತೆರವು ಕಾರ್ಯಾಚರಣೆ ಮಾಡಿದ್ದಾರೆ.
ಪತ್ರ ಸಂವಹನದ ಮೂಲಕ ಅನೇಕ ಬಾರಿ ಬೇಲಿ ತೆರೆಯುವಂತೆ ಭಾರತಿಯವರಿಗೆ ನೋಟಿಸ್ ನೀಡಿದ್ದು ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಈ ತೆರವು ಕಾರ್ಯಾಚರಣೆಯನ್ನು ಗ್ರಾಮ ಪಂಚಾಯತ್ ನಡೆಸಿದೆ. ಈ ಕಾರ್ಯಕ್ಕೆ ತಗುಲಿದ ವೆಚ್ಚವನ್ನು ಸಂಬಂಧಪಟ್ಟವರಿಂದ ಭರಿಸಲಾಗುವುದು - ಗೋಪಾಲ್ ಹಾಂಡ, ಪಿಡಿಓ ವಿದ್ಯಾರಣ್ಯಪುರ ಗ್ರಾಮ ಪಂಚಾಯತ್
ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಪಿಡಿಓ, ಅಧಿಕಾರಿವರ್ಗ, ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಸ್ಥಳೀಯರು ಇದ್ದರು.






0 Comments