ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಬಾಳೆಹೊನ್ನೂರಿನಿಂದ ಹೊರಹೊಮ್ಮುವ ಎಲ್ಲಾ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯವಾಗಲಿದೆ ಎಂಬ ಮಾಹಿತಿ ದೊರೆತಿದೆ. 

ಇದನ್ನೂ ಓದಿ : ಹಾಸನ : ಗಂಧದ ಮರ ಕಡಿದು ಕಳವು ಮಾಡಲು ಯತ್ನಿಸಿದ ಕಳ್ಳರು ; ನಾಯಿಯ ಎಚ್ಚರಿಕೆ ಮನೆಯವರ ಸಮಯಪ್ರಜ್ಞೆಯಿಂದ ತಪ್ಪಿದ ಕಳ್ಳತನ

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು 66/33/11 ಕೆವಿ ವಿ.ವಿ ಕೇಂದ್ರದಲ್ಲಿ 2021 -22 ನೇ ಸಾಲಿನ ನಾಲ್ಕನೇ ತ್ರೈಮಾಸಿಕ ನಿರ್ವಹಣೆಯನ್ನು ದಿನಾಂಕ 25.03.2022 ರ ಶುಕ್ರವಾರ ಹಮ್ಮಿಕೊಂಡಿರುವುದರಿಂದ ಬಾಳೆಹೊನ್ನೂರಿನಿಂದ ಹೊರಹೊಮ್ಮುವ ಎಲ್ಲಾ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ. 

ದಿನಾಂಕ 25 ಮಾರ್ಚ್ 2022ರ ಶುಕ್ರವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.