ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ಪಟ್ಟಣ ಪಂಚಾಯತ್ ವತಿಯಿಂದ ನಿನ್ನೆ ಟೆಂಡರ್ ಘೋಷಣೆ ಕುರಿತಾಗಿ ಪಟ್ಟಣ ಪಂಚಾಯತ್ ಆವರಣದಲ್ಲಿ ಗೊಂದಲಮಯ ವಾತಾವರಣ ನಿರ್ಮಾಣವಾಯಿತು.
ಇದನ್ನೂ ಓದಿ : ಜಯಪುರ : 438 ಕೆ.ಜಿ ತೂಕದ ಕಾಫಿ ಕಳ್ಳತನ ಮಾಡಿದ್ದ ಖದೀಮ ಅಂದರ್
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣ ಪಂಚಾಯತ್ ನಲ್ಲಿ ನಿನ್ನೆ ಪಟ್ಟಣ ಪಂಚಾಯತ್ ಗೆ ಸಂಬಂಧಿಸಿದ ಸ್ವತ್ತುಗಳ ಹರಾಜು ಪ್ರಕ್ರಿಯೆಯಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಸೇರಿಸಿ ಹರಾಜು ಪ್ರಕ್ರಿಯೆ ನಡೆಸಬೇಕೆಂದು ಪಟ್ಟಣ ಪಂಚಾಯತ್ ನ ಕಾಂಗ್ರೆಸ್ ಸದಸ್ಯರು ಕಾಂಗ್ರೆಸ್ ಮುಖಂಡರು ಹಾಗೂ ಕೆಲ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ಕೊರೋನಾ ಸಂಕಷ್ಟದ ಸಮಯದಲ್ಲಿ ಕೇವಲ ಪಾರ್ಕಿಂಗ್ ಹಣ ವಸೂಲಿ ಮಾಡುವವರಿಗೆ ಮಾತ್ರ ತೊಂದರೆಯಾಗಿಲ್ಲ, ಎಲ್ಲರಿಗೂ ತೊಂದರೆಯಾಗಿದೆ. ಅದಲ್ಲದೆ ಅವರಿಂದ ಪಡೆಯಬೇಕಿದ್ದ 30 ಲಕ್ಷಕ್ಕೂ ಅಧಿಕ ಹಣ ಇನ್ನೂ ಸಂದಾಯವಾಗಿಲ್ಲ ನ್ಯಾಯ ಎಲ್ಲರಿಗೂ ಒಂದೇ ಈ ಕುರಿತ ನಮ್ಮ ಹೋರಾಟ ಮುಂದುವರೆಯುತ್ತದೆ - ರಫೀಕ್ ಅಹಮದ್ ಪಂಚಾಯತ್ ಮೊದಲನೇ ವಾರ್ಡಿನ ಸದಸ್ಯ
ಕೊರೋನಾ ಲಾಕ್ ಡೌನ್ ಅವಧಿಯಲ್ಲಿ ಎಲ್ಲಾ ವರ್ತಕರಿಗೂ ತೊಂದರೆಯಾಗಿದೆ, ಆದ ಕಾರಣ ಪಟ್ಟಣ ಪಂಚಾಯತ್ ನ ಎಲ್ಲಾ ಸ್ವತ್ತುಗಳನ್ನು ಆಧರಿಸಿ ಹರಾಜು ಪ್ರಕ್ರಿಯೆ ನಡೆಸಬೇಕು ಕೆಲವಷ್ಟಕ್ಕೆ ಮಾತ್ರ ಸೀಮಿತಗೊಳಿಸಲು ನಮ್ಮ ವಿರೋಧವಿದೆ ಇದುಸರಿಯಾದ ಕ್ರಮವಲ್ಲ ಎಂದು ಪ್ರತಿಭಟನಾನಿರತರು ಆರೋಪಿಸಿದರು.
ಜಿಲ್ಲಾಧಿಕಾರಿಗಳ ಗಮನಕ್ಕೆ ಈ ಕುರಿತು ತಿಳಿಸಲಾಗಿದೆ ಹಣ ವಸೂಲಾತಿ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಲ್ಲಾ ಸ್ವತ್ತುಗಳ ಹರಾಜು ಪ್ರಕ್ರಿಯೆ ದಿನಾಂಕ ನಿಗದಿಪಡಿಸಿ ಒಮ್ಮೆಲೆ ನಡೆಸಲಿದ್ದೇವೆ - ಅಶೋಕ್ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ (in-charge)
ಪಟ್ಟಣ ಪಂಚಾಯತ್ ಭ್ರಷ್ಟ ಅಧಿಕಾರಿಗಳಿಗೆ ಧಿಕ್ಕಾರ, ಬೇಕೇ ಬೇಕು ನ್ಯಾಯ ಬೇಕು ಎಂಬ ಘೋಷಣೆಗಳನ್ನು ಕೂಗುತ್ತಾ ಪಟ್ಟಣ ಪಂಚಾಯಿತಿ ಹೊರಭಾಗದಲ್ಲಿ ಕುಳಿತು ಸದಸ್ಯರು ಧರಣಿ ನಡೆಸಿದರು. ಟೆಂಡರ್ ಹರಾಜು ಪ್ರಕ್ರಿಯೆಯನ್ನು ಮುಂದೂಡಲಾಗಿದ್ದು ಜಿಲ್ಲಾಧಿಕಾರಿಗಳ ಜೊತೆಗೆ ಈ ಕುರಿತು ಚರ್ಚೆ ನಡೆಸಿ ಸೂಪರ್ ನಿರ್ಣಯ ಕೈಗೊಳ್ಳಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.
ಈ ಪ್ರತಿಭಟನೆಯ ಸಂದರ್ಭದಲ್ಲಿ ಮುರುಳೀಧರ್, ರೂಪಾ, ಲತಾ ಸುಧಾಕರ್, ದಿನೇಶ್ ಶೆಟ್ಟಿ ಹಾಗೂ ಇತರರು ಭಾಗವಹಿಸಿದ್ದರು.






0 Comments