ಇದನ್ನೂ ಓದಿ : ಪಿ.ಎಫ್ ಹಣವನ್ನೂ ಕಟ್ಟದೆ ಅನ್ಯಾಯ, ಸಹಕಾರ ಸಾರಿಗೆ ಎಂ.ಡಿ ಅಂದರ್: ಇನ್ನಾದರೂ ಕಾರ್ಮಿಕರ ಹೋರಾಟಕ್ಕೆ ಸಿಗುತ್ತಾ ನ್ಯಾಯ
ಶಿವಮೊಗ್ಗದ ಶಂಕರಮಠ ರಸ್ತೆಯಲ್ಲಿ ಪಾಚಾಖಾನ್ ಎಂಬ ವ್ಯಕ್ತಿಗೆ ಚಾಕುವಿನಿಂದ ಇನ್ನೋರ್ವ ವ್ಯಕ್ತಿ ಇರಿದಿದ್ದಾನೆ. ಪಾಚಾಖಾನ್ ಹಾಗೂ ದಸ್ತಗಿರ್ ಎಂಬ ವ್ಯಕ್ತಿಯ ನಡುವೆ ಹಣಕಾಸಿನ ವಿಚಾರವಾಗಿ ಜಗಳ ನಡೆದಿತ್ತು. ಮೊದಲಿಗೆ ಇಬ್ಬರ ನಡುವೆಯೂ ಗಲಾಟೆ ಸಂಭವಿಸಿ ನಂತರದಲ್ಲಿ ಗಲಾಟೆಯು ಚಾಕು ಇರಿತದ ವರೆಗೆ ತಲುಪಿದೆ.
ಪಾಚಾಖಾನ್ ಎದೆ ಹಾಗೂ ಮುಖದ ಮೇಲೆ ಚಾಕುವಿನಿಂದ ಗಂಭೀರವಾಗಿ ಇರಿಯಲಾಗಿದೆ. ಪಚಾಖಾನ್ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಸಂಬಂಧ ಶಿವಮೊಗ್ಗದ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ವಿಚಾರವಾಗಿ ತನಿಖೆ ನಡೆಸುತ್ತಿದ್ದಾರೆ.

0 Comments