ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಯ ಜೆಸಿಬಿಎಂ ಕಾಲೇಜಿನಲ್ಲಿ ಅಂತರ್ ಕಾಲೇಜು ಚರ್ಚಾ ಸ್ಪರ್ಧೆ ನಡೆಯಿತು. 

ಇದನ್ನೂ ಓದಿ :ಕಾಂಗ್ರೆಸ್ ಡಿಜಿಟಲ್ ಮೆಂಬರ್ಶಿಪ್ ನಲ್ಲಿ ಭಾರೀ ಹಿನ್ನೆಡೆ. ಶಾಸಕ ರಾಜೇಗೌಡ, ಮೋಟಮ್ಮ ವಿರುದ್ಧ ಡಿ. ಕೆ ಶಿವಕುಮಾರ್ ಗರಂ

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿರುವ ಶ್ರೀ ಜೆಸಿಬಿಎಂ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್, ರೋವರ್ಸ್ ಮತ್ತು ರೇಂಜರ್ಸ್ ವತಿಯಿಂದ ಅಂತರ್ ಕಾಲೇಜು ಚರ್ಚಾ ಸ್ಪರ್ಧೆ ನಡೆಯಿತು. ಚರ್ಚಾ ಸ್ಪರ್ಧೆಯ ನೇತೃತ್ವವನ್ನು IQAC ವಹಿಸಿಕೊಂಡಿತ್ತು. 

ಈ ಕಾರ್ಯಕ್ರಮದ ಕುರಿತು ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ ಸ್ವಾಮಿ  ವಿದ್ಯಾರ್ಥಿಗಳು ಈಗಿನಿಂದಲೇ ಓದುವ ಹಾಗೂ ಗೊಂದಲವಿರುವ ವಿಷಯಗಳ ಕುರಿತು ಮುಕ್ತವಾಗಿ ಚರ್ಚೆ ಮಾಡಿದಾಗ ಮಾತ್ರ ಮುಂದಿನ ಜೀವನಕ್ಕೆ ಸಬಲರಾಗುತ್ತಾರೆ. ಇಲ್ಲದೇ ಹೋದಲ್ಲಿ ಪ್ರಶ್ನಿಸುವ ಮನೋಭಾವ ಕಡಿಮೆಯಾಗುತ್ತದೆ.  ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಆಸಕ್ತಿಹೊಂದಿ ಪೋಷಕರಿಗೆ ಹಾಗೂ ಕಾಲೇಜಿಗೆ ಕೀರ್ತಿ ತರಬೇಕೆಂದು ಹಾರೈಸಿದರು.

ಈ ಚರ್ಚಾ ಸ್ಪರ್ದೆಯಲ್ಲಿ ಬಿ.ಎ ವ್ಯಾಸಾಂಗ ನಡೆಸುತ್ತಿರುವ ಮೈತ್ರಿ ಪ್ರಥಮ ಸ್ಥಾನ ಪಡೆದರು, ದ್ವಿತೀಯ  ಬಿಕಾಂ ನ ನಿಶ್ಚಿತ ದ್ವಿತೀಯ ಸ್ಥಾನ ಪಡೆದರೆ, ನಿತೀಶ್ ತೃತೀಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 

ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ ಸ್ವಾಮಿ, IQAC ಮುಖ್ಯಸ್ಥರಾದ ನಾಗಭೂಷಣ್, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಗಳಾದ ಡಾ.ಕೆಪಿ ಪ್ರಕಾಶ್, ಯುವ ರೆಡ್ ಕ್ರಾಸ್ ಘಟಕದ ಮುಖ್ಯಸ್ಥರಾದ ಸಂದೇಶ್ ಜಿ.ಎಸ್, ರೋವರ್ಸ್ ರೇಂಜರ್ಸ್ ಘಟಕದ ಮುಖ್ಯಸ್ಥರಾದ ಸಚಿನ್ ಕೆ.ಎನ್ ಉಪಸ್ಥಿತರಿದ್ದರು.