ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಯ ಬಜರಂಗದಳದ ಕಾರ್ಯಕರ್ತರು ಶೃಂಗೇರಿಯ ಮಾರಿಕಾಂಬಾ ದೇಗುಲಕ್ಕೆ ಬಣ್ಣ ಬಳಿಯುವ ಮೂಲಕ ಸೇವಾಕಾರ್ಯವನ್ನು ಮಾಡಿದರು.
ಇದನ್ನೂ ಓದಿ : ಚಿಕ್ಕಮಗಳೂರು : ಬೈಕ್ ಹಾಗೂ ಕಾರ್ ನಡುವೆ ಮುಖಾಮುಖಿ ಅಪಘಾತ ದಂಪತಿಗಳ ದುರ್ಮರಣ
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಬಸ್ಟಾಂಡ್ ಸಮೀಪದ ಕೆರೆದಂಡೆಯ ಮಾರಿಕಾಂಬಾ ದೇವಾಲಯ (ಮಾರಿಗುಡಿಗೆ) ಬಣ್ಣ ಬಳಿಯುವ ಮೂಲಕ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಒಂದು ದಿನದ ಸೇವಾ ಕಾರ್ಯವನ್ನು ಮಾಡಿದರು.
ನಿರಂತರವಾಗಿ ಸೇವಾ ಕಾರ್ಯಗಳನ್ನು ಮಾಡುತ್ತಾ ಹಿಂದೂ ದೇವಾಲಯಗಳ ಮತ್ತು ಹಿಂದೂ ಸಂಸ್ಕೃತಿಯ ಉಳಿವಿಗಾಗಿ ಹಿಂದಿನಿಂದಲೂ ಬಜರಂಗದಳ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದೆ. ಮುಂಬರುವ ದಿನಗಳಲ್ಲೂ ಈ ರೀತಿಯ ಸೇವಾ ಕಾರ್ಯ ಮಾಡಿ ಹಿಂದೂ ಸಮಾಜವನ್ನು ಒಗ್ಗೂಡಿಸುವ ಎಲ್ಲಾ ಕೆಲಸವನ್ನು ಮಾಡಲಿದ್ದೇವೆ - ನಾಗೇಶ್ ಶೆಟ್ಟಿ ಶೃಂಗೇರಿ, ತಾಲೂಕು ಗೋರಕ್ಷಾ ಪ್ರಮುಖ್ ಶೃಂಗೇರಿ
ಬಜರಂಗದಳದ ಪ್ರಮುಖರು ಹಾಗೂ ಕಾರ್ಯಕರ್ತರು ಸೇರಿ ದೇವಾಲಯಕ್ಕೆ ಬಣ್ಣ ಬಳಿಯುವ ಮೂಲಕ ಈ ಸೇವಾ ಚಟುವಟಿಕೆಯನ್ನು ನಡೆಸಿದರು. ಈ ಸೇವಾಕಾರ್ಯಕ್ಕೆ ಶೃಂಗೇರಿ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾದ ಹಾಗೂ ಬಜರಂಗದಳದ ಹಿರಿಯ ಕಾರ್ಯಕರ್ತರಾದ ಹರೀಶ್ ವಿ ಶೆಟ್ಟಿ ಅವರು ದೇವಾಲಯಕ್ಕೆ ಬೇಕಾಗುವ ಬಣ್ಣದ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.
ಸಮಾಜದ ಒಳಿತಿಗೆ ಸೇವೆಯೂ ಒಂದು ಅಂಗವಾಗಿದೆ ಈ ನಿಟ್ಟಿನಲ್ಲಿ ಸೇವಾ ಕಾರ್ಯಗಳನ್ನು ನಡೆಸುತ್ತಾ ಮುಂಬರುವ ದಿನಗಳಲ್ಲಿ ಈ ರೀತಿಯ ಅನೇಕ ಸೇವಾ ಚಟುವಟಿಕೆಗಳನ್ನು ಮಾಡಲಾಗುವುದು ಎಂದರು.

0 Comments