ಬಾಳೆಹೊನ್ನೂರು : (ನ್ಯೂಸ್ ಮಲ್ನಾಡ್ ವರದಿ) ಬೇಟೆಗಾರರ ಮನೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕಾಡುಪ್ರಾಣಿಗಳ ಮಾಂಸ ಹಾಗೂ ಬೇಟೆಗೆ ಬಳಸಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. 

ಇದನ್ನೂ ಓದಿ : ಶಿವಮೊಗ್ಗ : ಒಬ್ಬಳನ್ನು ಪ್ರೇಮಿಸಿ ಬೇರೊಬ್ಬಳೊಂದಿಗೆ ಮದುವೆಯಾದ ಉಪನ್ಯಾಸಕ ! ಮನನೊಂದು ನೇಣಿಗೆ ಶರಣಾದ ಯುವತಿ

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ವ್ಯಾಪ್ತಿಯ ಖಾಂಡ್ಯ ಹೋಬಳಿಯ ಒಳಗೋಡು ಕಾಡಮನೆ ನಿವಾಸಿಗಳಾದ ವೆಂಕಟೇಶ್ ಹಾಗೂ ಲೋಕೇಶ್ ಎಂಬ ಇಬ್ಬರು ಬೇಟೆಗಾರರ ಮನೆಗೆ ನುಗ್ಗಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.

ಬೇಟೆ ಮಾಡಿ ಮನೆಯಲ್ಲಿರಿಸಿದ್ದ 06 ಕೆಜಿ ಕಾಡು ಹಂದಿ ಮಾಂಸ, 3.600 ಕೆಜಿ ತೂಕದ ಕುರಿ ಮಾಂಸ ಹಾಗೂ ಬೇಟೆಗೆ ಬಳಸಿದ್ದ ಕತ್ತಿ ಮತ್ತು 2 ನಾಡ ಬಂದೂಕನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದು ಈ ಸಂಬಂಧ ಅಧಿಕಾರಿಗಳು ಆರೋಪಿಗಳನ್ನು ಸೆರೆ ಹಿಡಿಯುವ ಸಲುವಾಗಿ ಬಲೆ ಬೀಸಿದ್ದಾರೆ. 

ಈ ಕಾರ್ಯಾಚರಣೆಯಲ್ಲಿ ಬಾಳೆಹೊನ್ನೂರು RFO ನಿರಂಜನ್, ಕಡಬಗೆರೆಯ DRF ಮಂಜುನಾಥ್, ಸಿಬ್ಬಂದಿಗಳಾದ ಯೋಗಾನಂದ, ಕಾರ್ತೀಕ್, ಹನುಮಂತ, ಉಮೇಶ್, ದೀಕ್ಷಿತ್, ಪ್ರಕಾಶ್ ಹಾಗೂ ಇನ್ನಿತರರು ಪಾಲ್ಗೊಂಡು ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದಾರೆ.