ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ಪ್ರಸಿದ್ಧ ಪುಣ್ಯಕ್ಷೇತ್ರ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಆಗಮಿಸುತ್ತಾರೆ. ಆದರೆ ಹೀಗೆ ಬರುವ ಪ್ರವಾಸಿಗರು ತಮ್ಮ ವಾಹನಗಳನ್ನು ಅಡ್ಡಾದಿಡ್ಡಿಯಾಗಿ, ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸೋದು ಕಾಮನ್ ಆಗಿಬಿಟ್ಟಿದೆ ಆದ್ರೆ ಇಷ್ಟೇ ಅಲ್ಲ ಇದೀಗ ಫೂಟ್ ಪಾಥ್ ಮೇಲೂ ವಾಹನಗಳನ್ನು ನಿಲ್ಲಿಸಿ ಪಾದಚಾರಿಗಳಿಗೂ ತೊಂದರೆ ಉಂಟುಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ವೀಡಿಯೋ ನೋಡಿ : ಸಹಕಾರ ಸಾರಿಗೆ ಸ್ಥಿತಿ ಈಗ ಯಾವ ಹಂತಕ್ಕೆ ತಲುಪಿದೆ? ನ್ಯೂಸ್ ಮಲ್ನಾಡ್ Special Report

ಪಟ್ಟಣದ ಮುಖ್ಯ ರಸ್ತೆ ಭಾರತಿ ಬೀದಿಯಲ್ಲಿ ಇತ್ತೀಚೆಗೆ ಕೆಲ ಪ್ರವಾಸಿಗಳು ಫ಼ೂಟ್ ಪಾತ್ ನಲ್ಲಿ ತಮ್ಮ ವಾಹನ ನಿಲುಗಡೆ ಮಾಡಿ ಉದ್ಧಟತನ ಪ್ರದರ್ಶಿಸುತ್ತಿದ್ದಾರೆ. ಶೃಂಗೇರಿಗೆ ಬರುವ ಪ್ರವಾಸಿಗರಿಗೆ ಗಾಂಧೀ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದರೂ, ಪಾರ್ಕಿಂಗ್ ಶುಲ್ಕ ತಪ್ಪಿಸಲು ಪಟ್ಟಣದ ಭಾರತೀ ಬೀದಿ, ಸುಭಾಷ್ ಬೀದಿಯಲ್ಲಿ ಅಡ್ಡಾ ದಿಡ್ಡಿ ಪಾರ್ಕಿಂಗ್ ಮಾಡಿ, ಓಡಾಡುವವರಿಗೆ ತೊಂದರೆ ಮಾಡುತ್ತಿದ್ದಾರೆ. ಮುಖ್ಯ ಬೀದಿಯಲ್ಲಿ ವಾಹನ ನಿಲ್ಲಿಸಲು ಯಥೇಚ್ಛ ಜಾಗ ಇದೆ. ಫ಼ೂಟ್ ಪಾತ್ ಇರುವುದು ಪಾದಾಚಾರಿಗಳು ಓಡಾಡಲು ಎಂಬ ಸಾಮಾನ್ಯ ಜ್ಞಾನವೂ ಇಲ್ಲದೆ ಅದರ ಮೇಲೇ ನಿಲ್ಲಿಸುತ್ತಾರೆ. ಇದರಿಂದ ಓಡಾಡುವವರಿಗೆ ಬಹಳ ಕಿರಿಕಿರಿಯಾಗುತ್ತಿದೆ. ಪೋಲೀಸ್ ಇಲಾಖೆ ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. - ಸೂರ್ಯ ಭಾರದ್ವಾಜ್, ಸ್ಥಳೀಯ

ಶೃಂಗೇರಿ ಮಠದ ಮುಂಭಾಗದ ಭಾರತಿ ಬೀದಿಯಲ್ಲಿ ಕೆಲವು ಲಾಡ್ಜ್ ಗಳಿದ್ದು ಇದು ಮಠಕ್ಕೆ ಸಮೀಪದಲ್ಲಿವೆ. ಹೀಗೆ ಶೃಂಗೇರಿಗೆ ಆಗಮಿಸುವ ಭಕ್ತಾದಿಗಳು ಗಾಂಧಿ ಮೈದಾನದಲ್ಲಿರುವ ಪಾರ್ಕಿಂಗ್ ನಲ್ಲಿ ನಿಲ್ಲಿಸದೆ ಅಕ್ಕಪಕ್ಕದ ಫೂಟ್ ಪಾಥ್ ಮೇಲೆ ನಿಲ್ಲಿಸಿ ಪಾದಾಚಾರಿಗಳಿಗೆ, ಸಾರ್ವಜನಿಕರಿಗೆ ಹಾಗೂ ವರ್ತಕರಿಗೂ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಈ ಸಮಸ್ಯೆ ಕೇವಲ ಈಗಿಂದಲ್ಲ ಹಲವು ಬಾರಿ ಈ ರೀತಿ ವಾಹನಗಳನ್ನು ಬೇಕಾಬಿಟ್ಟಿಯಾಗಿ ನಿಲ್ಲಿಸಿ ಸ್ಥಳೀಯರು ಕ್ಲಾಸ್ ತೆಗೆದುಕೊಂಡ ಘಟನೆ ಈ ಹಿಂದೆಯೂ ನಡೆದಿವೆ. ಸಂಬಂಧಪಟ್ಟವರು ಈ ಕುರಿತು ಗಮನಹರಿಸಬೇಕಿದೆ.

ಪ್ರವಾಸಿಗರು ಈ ರೀತಿ ಅವೈಜ್ಞಾನಿಕವಾಗಿ ವಾಹನ ನಿಲುಗಡೆ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಕುರಿತು ಕ್ರಮ ಕೈಗೊಳ್ಳಲಾಗುವುದು. - ರವಿ ಬಿ. ಎಸ್, PI, ಶೃಂಗೇರಿ