ಹಾಸನ : (ನ್ಯೂಸ್ ಮಲ್ನಾಡ್ ವರದಿ) ಸಾಲ ಪಡೆದ ಮಹಿಳೆಯೋರ್ವರು ಪಡೆದ ಸಾಲವನ್ನು ಹಿಂದಿರುಗಿಸಲಾಗದೆ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ : ಕಡತ ಕಳ್ಳ'ತನದ ಆರೋಪಿ ಪ್ರಕಾಶ ಈಗ ಪೊಲೀಸರ ಅತಿಥಿ. ಸಸ್ಸೆಂಡ್ ಆಗಲು ಕಾರಣವಾಗಿತ್ತು "ಒಂದು ಫೋಟೋವಿನ ಕಥೆ"
ಹಾಸನ ಪಟ್ಟಣದ ಕೆ. ಆರ್ ಪುರಂ ನ ಏಳನೇ ಕ್ರಾಸ್ ನಿವಾಸಿ ಯೋಗೇಶ್ ಅವರ ಪತ್ನಿ ಚಂದ್ರಕಲಾ ಅವರು ಕ್ಯಾಂಟೀನ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರು. ಅವರ ತಮ್ಮ ಪರಿಚಯಸ್ಥರಿಂದ ಹಣ ಪಡೆದಿದ್ದು ಅದನ್ನು ಮರುಳಿಸಲಾಗದೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಾಲ ನೀಡಿದವರು ಹಣವನ್ನು ಹಿಂದಿರುಗಿಸುವಂತೆ ಮನೆಗೆ ಬಂದು ಕೇಳಿದಾಗ ಮರುಪಾವತಿ ಮಾಡಲು ಹಣವಿಲ್ಲದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಅವರ ಮನೆಯಲ್ಲಿ ಡೆತ್ ನೋಟ್ ಕೂಡ ಲಭ್ಯವಾಗಿದ್ದು ಅವರ ಪತಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಕುರಿತು ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಸಂಬಂಧ ತನಿಖೆ ಆರಂಭಿಸಿದ್ದಾರೆ.

0 Comments