ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಪಟ್ಟಣದಲ್ಲಿ ಇಂದು ನಡೆದ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಿ.ಕೆ ಶಿವಕುಮಾರ್ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಹಿನ್ನಡೆ ಉಂಟಾದ ಕಾರಣ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಚಿಕ್ಕಮಗಳೂರಿನ ಜನ ಅತ್ಯಂತ ವಿದ್ಯಾವಂತರು, ಬುದ್ದಿವಂತರಿದ್ದಾರೆ. ಆದರೆ ನೀವು ನಡೆಸುತ್ತಿರುವ ಸದಸ್ಯತ್ವ ಅಭಿಯಾನದಲ್ಲಿ ಹಿನ್ನಡೆ ಉಂಟಾಗುತ್ತಿದೆ, ಸದಸ್ಯತ್ವ ನೀಡುವುದು ಪಕ್ಷದ ಆಧಾರ ಸ್ತಂಭವಾಗಿದೆ ಎಂದರು, ಹೆಚ್ಚು ಸದಸ್ಯತ್ವ ಮಾಡಿಸಿದವರಿಗೆ ಪಕ್ಷದಲ್ಲಿ ಅವಕಾಶ ಕಲ್ಪಿಸಲಾಗುವುದು, ಸದಸ್ಯತ್ವ ಪಡೆಯದೇ ಜನ ಹೇಗೆ ಮತ ನೀಡುತ್ತಾರೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಮೋಟಮ್ಮ ಹಾಗೂ ಅವರ ಪುತ್ರಿ ನಯನಾ ಮೋಟಮ್ಮ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಮೂಡಿಗೆರೆ ಬಾಳೆಹೊನ್ನೂರು ಚಿಕ್ಕಮಗಳೂರು ಮುಂತಾದ ಭಾಗದಲ್ಲಿ ಸದಸ್ಯತ್ವ ಕಡಿಮೆ ಇದೆ ಈ ಕುರಿತು ಗಮನ ಹರಿಸುವಂತೆ ಎಚ್ಚರಿಸಿದರು.
ಕಾರಿನ ಬಳಿಗೆ ಕ್ಷಮೆಯಾಚಿಸಲು ಆಗಮಿಸಿದ ಮೋಟಮ್ಮ ಅವರಿಗೆ ಮೊದಲು ಸದಸ್ಯತ್ವ ನಂತರ ಉಳಿದದ್ದೆಲ್ಲ ಎಂದರು. ಮತ್ತು ಚಿಕ್ಕಮಗಳೂರಿನ ಕಾಂಗ್ರೆಸ್ ಅಧ್ಯಕ್ಷರ ಕುರಿತು ಮಾತನಾಡಿದ ಅವರು ನಿಮ್ಮ ಮೇಲೆ ಬಲವಾದ ನಂಬಿಕೆ ಇತ್ತು ಅದನ್ನು ಕಳೆದುಕೊಂಡಿದ್ದೀರಿ ಎಂದರು. ಹಾಗೂ ಮುಖಂಡರು ಜಿಲ್ಲೆಯಲ್ಲಿ ಕಳಪೆ ಸಾಧನೆ ತೋರಿದ್ದೀರಿ ಎಂದು ಬೇಸರ ವ್ಯಕ್ತಪಡಿಸಿದರು. ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ.ಡಿ ರಾಜೇಗೌಡ ಅವರ ಮೇಲೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

0 Comments