ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಭಾರತ ದೇಶಕ್ಕೆ ಸ್ವಾಂತಂತ್ರ್ಯ ಲಭಿಸಿದ ನಂತರದಲ್ಲಿ ರಚನೆಯಾದ ಮೊದಲ ಸರ್ಕಾರ ಭಾರತಕ್ಕೆ ನುಸುಳಿದ ಆಕ್ರಮಣಕಾರರ ಕುರಿತಾಗಿ ಇಡೀ ದೇಶಕ್ಕೆ ತಿಳಿಸಬೇಕಿತ್ತು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಮಾಜಿ ಸಚಿವ ಡಿ.ಎನ್ ಜೀವರಾಜ್ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ಏಕಾತ್ಮವಾದವಾಗಿ ಬೆಳೆದಲ್ಲಿ ಭವ್ಯ ರಾಷ್ಟ್ರದ ನಿರ್ಮಾಣ ಸಾಧ್ಯ ಎಂಬ ಗುರೂಜಿ ಆಶಯ ಸಾಕಾರಗೊಳಿಸುವುದೇ ಬಿಜೆಪಿ ಕಾರ್ಯಕರ್ತರ ಧ್ಯೇಯ : ನಳಿನ್

ಚಿಕ್ಕಮಗಳೂರಿನಲ್ಲಿ ಈ ಕುರಿತು ಮಾತನಾಡಿದ ಅವರು ಎಲ್ಲರೂ ಧರ್ಮದ ಆಧಾರದಲ್ಲಿ ಬದುಕಬೇಕೆಂದು ಪರಮಾತ್ಮ ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಸಾರಿದ್ದಾರೆ. ಮಹಾಭಾರತ ಹಾಗೂ ರಾಮಾಯಣ ಒಂದು ನದಿಯ ಎರಡು ದಂಡೆಯಿದ್ದಂತೆ. ಧರ್ಮದ ಆಧಾರದ ಮೇಲೆ ಬದುಕುವುದು ಸರ್ವ ಶ್ರೇಷ್ಠವಾದುದು ಎಂದರು. 

ಇಂದಿನ ಮಕ್ಕಳು ಯಾವ ರೀತಿಯಾಗಿ ಮುಂದಿನ  ಬದುಕನ್ನು ನಡೆಸಬೇಕೆಂಬುದನ್ನು ಮತ್ತು ಈ ದೇಶ ಯಾವರೀತಿಯಾಗಿ ಧರ್ಮದ ಆಧಾರದ ಮೇಲಿತ್ತು ಎಂಬ ಈ ಎರಡು ಅಂಶಗಳನ್ನು ತಿಳಿದುಕೊಳ್ಳಬೇಕು. ಹಾಗೂ ಪಠ್ಯ ಪುಸ್ತಕಗಳಲ್ಲಿ ರಾಮಾಯಣ ಮಹಾಭಾರತ ಹೊಂದಿರಬೇಕಾದ ವಾಸ್ತವಾಂಶಗಳಿವೆ ತಿಳಿದುಕೊಳ್ಳಲೇಬೇಕಾದ ವಿಷಯಗಳಿವೆ ಈ ಕಾರಣದಿಂದಾಗಿ ಪಠ್ಯ ಪುಸ್ತಕಗಳಲ್ಲಿ ರಾಮಾಯಣ ಮಹಾಭಾರತ ಅಳವಡಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದರು.

ಮಕ್ಕಳಿಗೆ ಭಾರತದ ಇತಿಹಾಸವನ್ನು ತಿಳಿಸಿ :

ಭಾರತದ ನೆಲದಲ್ಲಿ ಅನೇಕ ವೀರ ಭಾರತೀಯರು ತಾಯ್ನಾಡಿಗಾಗಿ ಭಾರತದ ಗೌರವಕ್ಕಾಗಿ ಶ್ರಮಿಸಿದ್ದಾರೆ ಆದರೆ ಅವುಗಳಲ್ಲಿ ಕೆಲ ಅಂಶಗಳು ಮಾತ್ರ ಇದೆಯೇ ಹೊರತು ನಾವು ಗ್ರೇಟ್ ಎನ್ನುವುದು ಅಲೆಕ್ಸಾಂಡರ್ ನನ್ನು ಈ ರೀತಿಯ ಯಾವುದೇ ಪ್ರಮಾದಗಳು ಮುಂದಾಗಬಾರದು. ತಡವಾಗಿಯಾದರೂ ಬದಲಾವಣೆಗೆ ಮುಂದೆ ಬಂದಿರುವ ಈ ಆಲೋಚನೆಯ ನಾಯಕತ್ವಕ್ಕೆ ಧನ್ಯವಾದಗಳನ್ನು ಸಮರ್ಪಿಸುತ್ತೇನೆ. ಕೇವಲ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದಲ್ಲಿ ಈ ಕುರಿತು ಬದಲಾವಣೆಯಾಗಬೇಕು ಎಂದರು.