ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ವಿದ್ಯುತ್ ಕಂಬವೊಂದು ಮನೆಯ ಮೇಲೆ ಬೀಳುವ ಅಪಾಯಕರ ಸ್ಥಿತಿಗೆ ತಲುಪಿರುವ ಕಾಮಗಾರಿಯು ಮೂಡಿಗೆರೆಯಲ್ಲಿ ನಡೆದಿದೆ. 

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಮತ್ತು ಚಕ್ ಮಕ್ಕಿ ಮಧ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯು ನಡೆಯುತ್ತಿದ್ದು ಈ ಮಧ್ಯೆ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿರುವ ವಿದ್ಯುತ್ ಕಂಬಗಳು ಮನೆಯ ಮೇಲೆ ಬೀಳುವ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರು ಪ್ರಸ್ತುತ ನಡೆದಿರುವ ಕಾಮಗಾರಿಯು ಕಳಪೆ ಎಂದು ಆರೋಪಿಸಿದ್ದಾರೆ ಹಾಗೂ ಈ ಘಟನೆಗೆ ಹೊಣೆ ಯಾರೆಂದು ಪ್ರಶ್ನೆ ಮಾಡಿದ್ದಾರೆ. 

ಕಳಪೆ ಕಾಮಗಾರಿಯಿಂದ ವಿದ್ಯುತ್ ಕಂಬವಾಲಿದ್ದು ನಮ್ಮ ಮನೆಯ ಕಾಂಪೌಂಡ್ ಗೆ ಹಾನಿಯಾಗಿದೆ. ಸಮರ್ಪಕವಾದ ವ್ಯವಸ್ಥೆಯನ್ನು ಸಂಬಂಧಿಸಿದ ಇಲಾಖೆಯವರು ಮಾಡಿಕೊಡಬೇಕು. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಕಾಮಗಾರಿಗಳನ್ನು ಮಾಡಬೇಕು - AJ ಪೋಲ್ಸನ್ ಸ್ಥಳೀಯರು. 

ವಿದ್ಯುತ್ ಸಂಪರ್ಕ ಹೊಂದಿರುವ ಕರೆಂಟ್ ಕಂಬಗಳು ಮನೆಯ ಮೇಲೆ ಬಿದ್ದು ಯಾವುದಾದರೂ ಅಪಾಯಗಳು ಸಂಭವಿಸಿದಲ್ಲಿ ಈ ಘಟನೆಗೆ ಹೊಣೆ ಯಾರು ಅತೀ ಶೀಘ್ರವಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ಕುರಿತು ಗಮನಹರಿಸಿ ವಿದ್ಯುತ್ ಕಂಬವನ್ನು ಸರಿ ಪಡಿಸಬೇಕೆಂದು ಆಗ್ರಹಿಸಿದ್ದಾರೆ. 

ತನು ಕೊಟ್ಟಿಗೆಹಾರ, ವರದಿಗಾರರು