ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ವಿದ್ಯಾರಣ್ಯಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಇ ಸ್ವತ್ತುಗಳು ರದ್ದಾದ ಕುರಿತು ಸೂಕ್ತ ತನಿಖೆನಡೆಸಿ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಾರ್ವಜನಿಕರು ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಶೃಂಗೇರಿ : ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಯುವಕ
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ವಿದ್ಯಾರಣ್ಯಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಲವು ಇ - ಸ್ವತ್ತುಗಳು 2022 ರ ಜನವರಿ ತಿಂಗಳಿನಲ್ಲಿ ಡಿಲೀಟ್ ಆಗಿದ್ದು ಈ ಕುರಿತು ಮಾಹಿತಿ ಹಕ್ಕಿನಲ್ಲಿ ಪ್ರಶ್ನಿಸಿದಾಗ ಇ ಸ್ವತ್ತುಗಳನ್ನು ರದ್ದುಪಡಿಸುವ ಸಲುವಾಗಿ ಯಾವುದೇ ಕಡತಗಳು ಬಂದಿಲ್ಲವೆಂದು ಮಾಹಿತಿ ಒದಗಿರುತ್ತದೆ, ಆದರೆ ಕೆಲ ಇ - ಸ್ವತ್ತುಗಳು invalidation ಮಾರ್ಕಿಂಗ್ ನಲ್ಲಿ ಕಂಡಿರುತ್ತದೆ, ಆದರೆ ಈ ಸಲುವಾಗಿ ವ್ಯವಹರಿಸುವ ಅಧಿಕಾರ ಕೇವಲ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳ ಬಳಿ ಮಾತ್ರ ಇರುತ್ತದೆ. ಆದರೆ ಇದುವರೆಗೂ ಈ ಪ್ರಕರಣದ ಕುರಿತಾಗಿ ದೂರು ದಾಖಲು ಮಾಡಿಲ್ಲ ಎಂದು ಅಶ್ವಿನ್ ಎಂಬುವವರು ಪತ್ರದ ಮೂಲಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಾಲೂಕು ಪಂಚಾಯ್ತಿ, ಶೃಂಗೇರಿ ಇವರನ್ನು ಪ್ರಶ್ನಿಸಿದ್ದಾರೆ.
ಈವರೆಗೆ ಅನೇಕ ಇ - ಸ್ವತ್ತುಗಳು ರದ್ದಾಗಿದ್ದರೂ ಕೂಡ ಈ ಕುರಿತು ಗಮನಹರಿಸದೇ ಕಛೇರಿಯ ಗಣಕಯಂತ್ರದ ದುರ್ಬಳಕೆ ಆಗಿದೆಯೇ ಅಥವಾ ಕಾರ್ಯ ನಿರ್ವಹಣಾಧಿಕಾರಿಗಳ ಕೆಳವರ್ಗದ ಅಧಿಕಾರಿಗಳು ಲಾಗಿನ್ ದುರ್ಬಳಕೆ ಮಾಡಿಕೊಂಡು ವ್ಯವಹರಿಸಿದ್ದಾರೆಯೇ ಎಂದು ತನಿಖೆ ನಡೆಸದೇ ಅಥವಾ ವಿದ್ಯಾರಣ್ಯಪುರ ಗ್ರಾಮ ಪಂಚಾಯತ್ ವಿರುದ್ದ ದೂರು ದಾಖಲು ಮಾಡದೇ ಇರುವುದು ಯಾವ ಕಾರಣಕ್ಕಾಗಿ ಎಂದು ಪ್ರಶ್ನಿಸಿದ್ದಾರೆ ಹಾಗೂ ಭ್ರಷ್ಟಾಚಾರ ನಡೆಸುತ್ತಿರುವ ಅಧಿಕಾರಿಗಳನ್ನು ಬಚಾವ್ ಮಾಡುವ ರೀತಿಯಲ್ಲಿ ಈ ನಡೆಗಳು ವ್ಯಕ್ತವಾಗುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಅತಿಶೀಘ್ರವಾಗಿ ಈ ಹಗರಣದ ಕುರಿತು ಸೂಕ್ತ ಕ್ರಮವಹಿಸಿ ತುರ್ತಾಗಿ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು ಮಾಡದೇ ಹೋದಲ್ಲಿ ಈ ಕುರಿತು ಸರ್ಕಾರದ ಸಂಸ್ಥೆಯಾದ ಎಸಿಬಿ ಅಥವಾ ಲೋಕಾಯುಕ್ತದ ಗಮನ ಸೆಳೆದು ಈ ವಿಚಾರದ ಕುರಿತಾಗಿ ದೂರು ದಾಖಲು ಮಾಡುವ ಎಚ್ಚರಿಕೆ ನೀಡಿದ್ದಾರೆ.

0 Comments