ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಸಲುವಾಗಿ ಕಾಮಗಾರಿ ಪ್ರಕ್ರಿಯೆಗಳು ಆರಂಭವಾಗಿದ್ದು ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಉದ್ಭವ ನಾಗ ಗಣಪತಿ ದೇವಸ್ಥಾನವನ್ನು ತೆರವುಗೊಳಿಸಬಾರದೆಂದು ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಭಿಯಂತರರನ್ನು ಕೋರಿದ್ದಾರೆ.
ಇದನ್ನೂ ಓದಿ : ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿದ ಕೆ.ಎಸ್.ಆರ್.ಟಿ.ಸಿ ಬಸ್, ತಪ್ಪಿದ ಭಾರಿ ಅನಾಹುತ
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ ವಿಭಾಗದಿಂದ ಹೆದ್ದಾರಿ ಅಗಲೀಕರಣ ಪ್ರಕ್ರಿಯೆ ಆರಂಭಗೊಂಡಿದ್ದು, ಶೃಂಗೇರಿಯ ವಿದ್ಯಾರಣ್ಯ ಗ್ರಾಮಪಂಚಾಯತ್ ವ್ಯಾಪ್ತಿಗೆ ಒಳಪಡುವ ಸಂಕ್ಲಾಪುರ ದ ಉದ್ಭವ ನಾಗ ಗಣಪತಿ ದೇವಸ್ಥಾನ ವನ್ನು ರಸ್ತೆ ಅಗಲೀಕರಣದ ಸಲುವಾಗಿ ತೆರವುಗೊಳಿಸಬಾರದೆಂದು ಸ್ಥಳೀಯರು ಹಾಗೂ ಶೃಂಗೇರಿಯ ಸಾರ್ವಜನಿಕರು ಕೋರಿದ್ದಾರೆ.
ಬಹಳ ಹಿಂದಿನಿಂದ ಉದ್ಭವ ನಾಗ ಗಣಪತಿ ದೇವಸ್ಥಾನವನ್ನು ಇಲ್ಲಿನ ಭಕ್ತರು ಶ್ರದ್ಧಾಭಕ್ತಿಯಿಂದ ಪೂಜಿಸುತ್ತಾ ಬಂದಿದ್ದಾರೆ. ರಸ್ತೆ ನಿರ್ಮಾಣದ ಸಲುವಾಗಿ ದೇವಾಲಯವನ್ನು ತೆರವು ಮಾಡುವುದು ಭಕ್ತಾದಿಗಳ ನಂಬಿಕೆಗೆ ನೋವುಂಟು ಮಾಡುತ್ತದೆ. ದೇವಾಲಯವನ್ನು ತೆರವು ಮಾಡದೆ ರಸ್ತೆ ನಿರ್ಮಾಣದ ಕಾರ್ಯವಾಗಬೇಕು - ಪ್ರಶಾಂತ್ ಸ್ಥಳೀಯರು
ಕಳೆದ 35 ವರ್ಷದಿಂದ ಸಂಕ್ಲಾಪುರ ದ ಉದ್ಭವ ನಾಗ ಗಣಪತಿ ದೇವಸ್ಥಾನವನ್ನು ಭಕ್ತರು ನಂಬಿಕೊಂಡು ಪೂಜಿಸುತ್ತಾ ಬಂದಿದ್ದಾರೆ, ರಸ್ತೆಯ ಸಲುವಾಗಿ ದೇವಸ್ಥಾನವನ್ನು ತೆರವು ಮಾಡುವುದರಿಂದ ಭಕ್ತರ ನಂಬಿಕೆಗಳಿಗೆ ಅಡಚಣೆಯಾಗಲಿದೆ. ಈ ಕಾರಣದಿಂದಾಗಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಇಲಾಖೆ ದೇವಸ್ಥಾನಕ್ಕೆ ಯಾವುದೇ ರೀತಿಯ ಹಾನಿಯಾಗದಂತೆ ರಸ್ತೆ ನಿರ್ಮಾಣ ಮಾಡಬೇಕೆಂದು ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರನ್ನು ಕೋರಿದ್ದಾರೆ.
ರಸ್ತೆಯ ಮಧ್ಯದಲ್ಲಿ ಈ ಸ್ಥಳ ಇರುವುದರಿಂದ ತೆಗೆಯಲೇ ಬೇಕಾದ ಅನಿವಾರ್ಯತೆ ಇದೆ. ಭಕ್ತಾದಿಗಳು ಬೇರೆ ಸ್ಥಳವನ್ನು ನಿಗದಿ ಮಾಡಿದಲ್ಲಿ ಉದ್ಭವಮೂರ್ತಿಗೆ ಯಾವುದೇ ರೀತಿಯ ಹಾನಿಯಾಗದಂತೆ ಸ್ಥಳಾಂತರ ಮಾಡಿಕೊಡುತ್ತೇವೆ - ನಟೇಶ್, ಅಸಿಸ್ಟೆಂಟ್ ಇಂಜಿನಿಯರ್






0 Comments