ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಯಲ್ಲಿ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದುರ್ಘಟನೆ ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಹೊರವಲಯವಾದ ಗೋಚವಳ್ಳಿ ಸಮೀಪದ ಶುಂಠಿಹಕ್ಲಿನ ನಿವಾಸಿ ಅನಿಲ ಎಂಬ 23 ವರ್ಷ ಪ್ರಾಯದ ಯುವಕ ಮನೆಯ ಸಮೀಪದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ಈ ಸಂಬಂಧ ಶೃಂಗೇರಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು ಘಟನೆಗೆ ನಿಖರ ಕಾರಣಗಳೇನು ಎಂದು ಇನ್ನಷ್ಟೇ ಮಾಹಿತಿ ದೊರೆಯಬೇಕಿದೆ. 

ಇದನ್ನೂ ಓದಿ : ‘ಸುಸಜ್ಜಿತ ಆಸ್ಪತ್ರೆ ಇಲ್ಲದೆ ಬಡ ಜನರು ಪ್ರಾಣ ಬಿಡುವ ಶೃಂಗೇರಿ ಕ್ಷೇತ್ರಕ್ಕೆ ಸ್ವಾಗತ’ !! ಮುಖ್ಯಮಂತ್ರಿಗಳಿಗೆ ಸ್ವಾಗತ ಕೋರಿ ವಿನೂತನ ಬ್ಯಾನರ್ ಹಾಕಿದ ಗ್ರಾಮಸ್ಥರು