ಶಿವಮೊಗ್ಗ/ಬೆಂಗಳೂರು : (ನ್ಯೂಸ್ ಮಲ್ನಾಡ್ ವರದಿ) ಬಿಜೆಪಿ ಮುಖಂಡ, ಹಿಂದೂ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಕುಟುಂಬಸ್ಥರ ದೂರಿನ ಆಧಾರ ಹಾಗೂ ವಾಟ್ಸಾಪ್ ಡೆತ್ ನೋಟ್ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದು ಕೇಸ್ ನಲ್ಲಿ ಈಶ್ವರಪ್ಪ ಎ1 ಆರೋಪಿಯಾದರೂ ತಾನು ರಾಜೀನಾಮೆ ನೀಡೋದಿಲ್ಲ, ಡೆತ್ ನೋಟ್ ಸಹ ಸುಳ್ಳು ಅದನ್ನು ಸೃಷ್ಟಿ ಮಾಡಲಾಗಿದೆ, ತನ್ನ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ಮಾಡಲಾಗಿದೆ ಎಂದು ಸಮರ್ಥನೆ ಮಾಡಿಕೊಳ್ಳುವ ಮೂಲಕ ಆರೋಪಿ ಭಂಡತನ ಪ್ರದರ್ಶಿಸುತ್ತಿದ್ದು. 40% ಕಮೀಷನ್ ಆರೋಪಿ ಈಶ್ವರಪ್ಪ ಗೆ ಬೆಂಬಲವಾಗಿ ಹಲವು ಬಿಜೆಪಿ ಸಚಿವರು ಸಹ ನಿಂತಿದ್ದಾರೆ.
ಇದನ್ನೂ ಓದಿ : ಭೀಕರ ರಸ್ತೆ ಅಪಘಾತ ; ಬೈಕ್ ಸವಾರನ ದುರ್ಮರಣ
ಈಶ್ವರಪ್ಪ ಕಮೀಷನ್ ದಂಧೆ ವಿಚಾರ ಈ ಹಿಂದೆ ಸಹ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಯಲ್ಲಿತ್ತು. ಆದರೆ ಈಗ ಹಿಂದೂಪರ ಕಾರ್ಯಕರ್ತ ಹಾಗೂ ಗುತ್ತಿಗೆದಾರರಾದ ಸಂತೋಷ್ ಆತ್ಮಹತ್ಯೆ ನಂತರ ಭಾರೀ ದೊಡ್ಡ ವಿವಾದವಾಗಿ ಮಾರ್ಪಟ್ಟಿದೆ.
ಈ ಹಿಂದೆ ಡಿವೈಎಸ್ಪಿ ಗಣಪತಿ ಕೇಸ್ ನಲ್ಲಿ ಅಂದಿನ ಗೃಹಸಚಿವ ಜಾರ್ಜ್ ವಿರುದ್ಧ ಆರೋಪ ಬಂದಿತ್ತು. ಬಿಜೆಪಿ ಸಾಕಷ್ಟು ಪ್ರತಿಭಟನೆ ನಡೆಸಿ ಆ ನಂತರ ಅಂದಿನ ಗೃಹ ಸಚಿವ ಕೆ.ಜೆ ಜಾರ್ಜ್ ರಾಜೀನಾಮೆ ನೀಡಿದ್ದರು. ಆದರೆ ಇಂದು ಸ್ವತಃ ಬಿಜೆಪಿ ಮುಖಂಡರು ನೈತಿಕತೆ ಬಿಟ್ಟು ಭ್ರಷ್ಟಾಚಾರ, ಕೊಲೆಗೆ ಪ್ರಚೋದನೆ ಆರೋಪಿಯ ಸಮರ್ಥನೆಗೆ ಇಳಿದಿರುವುದನ್ನು ಜನತೆ ಪ್ರಶ್ನಿಸುತ್ತಿದ್ದಾರೆ.
ಮೋದಿ, ಅಮಿತ್ ಶಾ ಗೆ ದೂರು ನೀಡಿದ್ದರೂ ಸೂಕ್ತ ತನಿಖೆ ಆಗಿರಲಿಲ್ಲ:
ಒಂದೆಡೆ ಸಂತೋಷ್ ಸಾವಿನ ಬೆಳವಣಿಗೆ ನಂತರ ಈಶ್ವರಪ್ಪ ತನಗೆ ಸಂತೋಷ್ ಯಾರೆಂದೇ ತಿಳಿದಿಲ್ಲ, ನಾನು ಯಾವುದೇ ಕೆಲಸ ಸಂತೋಷ್ ಗೆ ನೀಡಿಲ್ಲ ಎಂದರೆ. ಮತ್ತೊಂದೆಡೆ ಸರ್ಕಾರವು ಈಗ ಸಂತೋಷ್ ಸಾವಿನ ನಂತರ ತನಿಖೆ ನಡೆಸುವುದಾಗಿ ತಿಳಿಸುತ್ತಿದೆ ಆದರೆ ಈ ಹಿಂದೆ ಮೋದಿ, ಅಮಿತ್ ಷಾ ಅವರಿಗೆ ಕಮಿಷನ್ ಕಿರುಕುಳದ ಕುರಿತು ದೂರು ನೀಡಿದ್ದರೂ ಸಹ ರಾಜ್ಯಸರ್ಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಸಹ ನೇರವಾದ ಆರೋಪ ಮಾಡಿತ್ತು.




0 Comments