ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 131 ನೆ ಜಯಂತಿಯ ಅಂಗವಾಗಿ ಇಂದು ಚಿಕ್ಕಮಗಳೂರಿನ ಅಜಾದ್ ಪಾರ್ಕ್ ನಲ್ಲಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ನಡೆಯಿತು.
ಇದನ್ನೂ ಓದಿ: ಹರಿಹರಪುರ : ಮೈಮೇಲೆ ವಾಹನ ಹರಿದು ನರಳಾಡಿ ಸಾವನ್ನಪ್ಪಿದ ಹೆಬ್ಬಾವು
ಚಿಕ್ಕಮಗಳೂರು ನಗರದ ಕೆ.ಇ.ಬಿ ಸರ್ಕಲ್ ನಿಂದ ನಗರದ ಅಜಾದ್ ಪಾರ್ಕ್ ವರೆಗೆ ಅಪಾರ ಸಂಖ್ಯೆಯ ಜನರೊಂದಿಗೆ ಮೆರವಣಿಗೆ ಸಾಗಿತು. ಬಾಬಾ ಸಾಹೇಬ್ ಅಂಬೇಡ್ಕರ್ ಗೆ ಜೈ, ಸಂವಿಧಾನ ಶಿಲ್ಪಿ ಗೆ ಜೈ ಎಂಬ ಘೋಷಣೆ ಗಳನ್ನು ಕೂಗುತ್ತಾ ಮೆರವಣಿಗೆಯುದ್ಧಕ್ಕೆ ಜನ ಸಾಗಿದರು. ಈ ಮೆರವಣಿಗೆಯಲ್ಲಿ ನಟ ಅಹಿಂಸಾ ಚೇತನ್, ಪ್ರೊ ಬಿ.ಪಿ ಚಂದ್ರಗುರು, ಜ್ಞಾನ ಪ್ರಕಾಶ ಸ್ವಾಮೀಜಿ, ಡಾ ಕುಂ ವೀರಭದ್ರಪ್ಪ, ಶ್ರೀ ಬಂಥೇ ಬೋದಿದತ್ತ ಥೇರಾ, ಮುಸ್ಲಿಂ ಮುಖಂಡ ಶಾಫಿ ಬೆಳ್ಳಾರೆ ಸೇರಿದಂತೆ ದಲಿತ ಸಂಘರ್ಷ ಸಮಿತಿಯ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಮೆರವಣಿಗೆಯ ನಂತರದಲ್ಲಿ ಆರಂಭವಾದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಚೇತನ್ ಇದು ಸಮಾನ ಮನಸ್ಕರ ಕಾರ್ಯಕ್ರಮವಾಗಿದ್ದು ಬುದ್ಧ, ಬಸವ ಅಂಬೇಡ್ಕರ್ ಅವರ ಅನುಯಾಯಿಗಳು ಈ ಕಾರ್ಯಕ್ರಮದ ಆಯೋಜನೆ ಮಾಡಿ ಆಚರಣೆಯಲ್ಲಿ ಭಾಗಿಯಾಗಿದ್ದಾರೆ. ಅಂಬೇಡ್ಕರ್ ಓರ್ವ ಧೀಮಂತ ನಾಯಕ ಅವರ ಅದರ್ಶಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಾವು ಸಧೃಡ ಹಾಗೂ ಸಶಕ್ತರಾಗಾಲು ಸಾಧ್ಯ ಎಂದರು.
ಈ ಬೃಹತ್ ಸಮಾವೇಶ ಕೇವಲ ಅಂಬೇಡ್ಕರ್ ಅವರ ಜಯಂತಿಯ ಆಚರಣೆ ಮಾತ್ರವಲ್ಲ ಇದು ದಲಿತರ ಜಾಗೃತಿಯ ಸಮಾವೇಶವಾಗಿದೆ. ಮೂವತ್ತಕ್ಕೂ ಪ್ರಮುಖ ಸಂಘಟನೆಗಳು ಸೇರಿ ಈ ಸಮಾವೇಶದ ಆಯೋಜನೆ ಮಾಡಿದೆ. ಇದೊಂದು ಐತಿಹಾಸಿಕ ಸಮಾವೇಶವಾಗಿದೆ ಮುಖ್ಯವಾಗಿ ದಲಿತರ ಏಳಿಗೆ ಅವರಿಗೆ ಲಭಿಸಬೇಕಾದ ಹಕ್ಕುಗಳನ್ನು ಈ ಸಮಾವೇಶದಲ್ಲಿ ಪ್ರಸ್ತಾಪಿಸಿ ಈ ಕುರಿತು ಗಮನ ನೀಡುವಂತೆ ಒತ್ತಾಯ ಮಾಡಲಾಗುತ್ತದೆ ಎಂದರು.
ಚಿಕ್ಕಮಗಳೂರು ನಗರವನ್ನು ನೀಲಿ ಬಂಟಿಂಗ್ಸ್ ಹಾಗೂ ಬಾವುಟಗಳಿಂದ ಅಲಂಕಾರ ಮಾಡಿ ಮೆರವಣಿಗೆಯ ಉದ್ದಕ್ಕೂ ನೀಲಿ ಬಾವುಟಗಳನ್ನು ಹಾರಿಸುತ್ತ ಈ ಮೆರವಣಿಗೆಯಲ್ಲಿ ದಲಿತ ಸಂಘಟನೆಗಳ ಮುಖಂಡರು, ಸಾಹಿತಿಗಳು, ಮುಸ್ಲಿಂ ಸಮುದಾಯದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಚಿಕ್ಕಮಗಳೂರು : ಅನಾಥ ವ್ಯಕ್ತಿಯ ಮೃತದೇಹ ಪತ್ತೆ :
ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಅನಾಥ ವ್ಯಕ್ತಿಯ ಮೃತದೇಹವೊಂದು ಪತ್ತೆಯಾಗಿರುವ ಘಟನೆ ಆಲ್ದೂರಿನಲ್ಲಿ ವರದಿಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ತಾಲೂಕಿನ ಕಬ್ಬಿನ ಸೇತುವೆ ಕೆಳಗೂರು ಎಂಬಲ್ಲಿ 55 ವರ್ಷ ಪ್ರಾಯದ ಅನಾಥ ವ್ಯಕ್ತಿಯ ಶವ ಪತ್ತೆಯಾಗಿದ್ದು ಈ ವ್ಯಕ್ತಿಯ ಸಂಬಂಧಿಕರು ಅಥವಾ ಪರಿಚಯಸ್ಥರು ಯಾರಾದರೂ ಇದ್ದಲ್ಲಿ ಆಲ್ದೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ವ್ಯಕ್ತಿಯ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ವ್ಯಕ್ತಿಯ ಮೃತದೇಹವನ್ನು ಚಿಕ್ಕಮಗಳೂರಿನ ಜಿಲ್ಲಾ ಶವಾಗಾರದಲ್ಲಿರಿಸಲಾಗಿದ್ದು ವ್ಯಕ್ತಿಯ ಪರಿಚಯ ಹೊಂದಿದವರು ಯಾರಾದರೂ ಇದ್ದಲ್ಲಿ ಆಲ್ದೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದಾಗಿದೆ.

.jpeg)


.jpeg)


.jpg)

.jpeg)


0 Comments