ಕೊಡಗು : (ನ್ಯೂಸ್ ಮಲ್ನಾಡ್ ವರದಿ) ಕಾವೇರಿ ನದಿಯಲ್ಲಿ ಹದಿನೇಳು ವರ್ಷ ಪ್ರಾಯದ ಯುವಕ ಕೊಚ್ಚಿಹೋಗಿ ದಾರುಣ ಅಂತ್ಯವನ್ನು ಕಂಡಿರುವ ಘಟನೆ ಬೆಳಕಿಗೆ ಬಂದಿದೆ.
ಕೊಡಗಿನ ಪ್ರಸಿದ್ದ ತಾಣವಾದ ದುಬಾರೆ ಆನೆ ಶಿಬಿರಕ್ಕೆ ಮಹಾರಾಷ್ಟ್ರ ನಾಸಿಕ್ ಮೂಲದ 23 ಜನ ಕುಟುಂಬ ಸದಸ್ಯರು ಭೇಟಿ ನೀಡಿದ್ದರು. ಅವರು ಕಾವೇರಿ ನದಿಯಲ್ಲಿ ಈಜುತ್ತಿರುವ ಸಂದರ್ಭದಲ್ಲಿ ನೀರಿನ ರಭಸ ಜೋರಾದ ಪರಿಣಾಮ ಪ್ರಥಮ ಪಿಯುಸಿ ಓದುತ್ತಿದ್ದ ಅನಿಕೇತ್ ಎಂಬ ಯುವಕ ನೀರಿನಲ್ಲಿ ಕೊಚ್ಚಿಹೋಗಿ ದಾರುಣವಾಗಿ ಅಂತ್ಯ ಕಂಡಿದ್ದಾನೆ.
ಆತನ ತಂದೆ ದಾದಾಜಿ ಮಹಾಜನ್ ಅವರು ಕೃಷಿಕರಾಗಿದ್ದು ಪ್ರವಾಸ ಬಂದ ಸಂದರ್ಭದಲ್ಲಿ ಉಂಟಾದ ಈ ಘಟನೆಯನ್ನು ನೆನೆದು ಅತೀವ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಯುವಕನನ್ನು ಕಳೆದುಕೊಂಡ ಕುಟುಂಬಸ್ಥರು ಅತೀವವಾದ ನೋವನ್ನು ಹೊರಹಾಕಿದ್ದಾರೆ.
ಮೃತ ಅನಿಕೇತ್ ನ ಮೃತದೇಹವನ್ನು ನದಿಯ ನೀರಿನಿಂದ ಮೇಲಕ್ಕೆತ್ತಲಾಗಿದ್ದು ಕೊಡಗಿನ ಕುಶಾಲನಗರ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಈ ಘಟನೆಯ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.





0 Comments