ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ಮನೆಯಿಂದ ರಾತ್ರಿಯ ವೇಳೆಗೆ ಹೊರಗೆ ತೆರಳಿದ್ದ ಯುವಕ ಕೆರೆಗೆ ಬಿದ್ದ ಮೃತಪಟ್ಟಿರುವ ದುರ್ಘಟನೆ ಬೆಳಕಿಗೆ ಬಂದಿದೆ. 

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ನ ಛೇಗು ಗ್ರಾಮದಲ್ಲಿರುವ ಕೆರೆಗೆ ಬಿದ್ದು ಅದೇ ಗ್ರಾಮದ ಯುವಕ ಪ್ರಮೋದ್ (21) ಪ್ರಾಣ ಕಳೆದುಕೊಂಡಿದ್ದಾನೆ. 

ಇದನ್ನೂ ಓದಿ : 15 ವರ್ಷಗಳಿಂದ ಆಸ್ಪತ್ರೆ ಕಾಮಗಾರಿ ಪ್ರಗತಿಯಲ್ಲಿದೆ, ನಿಧಾನವಾಗಿ ಚಲಿಸಿ ! ಮುಖ್ಯಮಂತ್ರಿಗೆ ಶುಭಕೋರಿ ಬ್ಯಾನರ್ ಹಾಕಿದ ಶೃಂಗೇರಿ ಜನ


ಮನೆಯಿಂದ ರಾತ್ರಿ ಹೊರಹೋಗಿದ್ದ ಪ್ರಮೋದ್ ಮನೆಗೆ ಬಾರದೇ ಇದ್ದುದನ್ನು ಕಂಡ ಪೋಷಕರು ಆತಂಕದಿಂದ ಎಲ್ಲೆಡೆ ಹುಡುಕಾಡಿದ್ದಾರೆ. ಆದರೆ ಎಲ್ಲೂ ಆತನ ಸುಳಿವು ಅವರಿಗೆ ಲಭ್ಯವಾಗಲಿಲ್ಲ. 

ನಂತರದಲ್ಲಿ ಛೇಗು ಗ್ರಾಮದ ಕೆರೆಯ ಸಮೀಪದಲ್ಲಿ ಆತನ ಪಾದರಕ್ಷೆಗಳು ದೊರೆತಿದ್ದು ತಕ್ಷಣವೇ ಕುಟುಂಬಸ್ಥರು ಬಣಕಲ್ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಈ ಕುರಿತು ವಿಚಾರ ತಿಳಿಸಿದ್ದಾರೆ. ಬಳಿಕ ಸ್ಥಳೀಯರ ಹಾಗೂ ಪೊಲೀಸರ ಸಹಕಾರದಿಂದ ನಡೆದ ಕಾರ್ಯಾಚರಣೆಯಲ್ಲಿ ಯುವಕನ ಶವವು ಕೆರೆಯಲ್ಲಿ ದೊರೆತಿದೆ.  


ಮೃತ ಪ್ರಮೋದ್ ನದ್ದು ಆತ್ಮಹತ್ಯೆಯೋ, ಆಕಸ್ಮಿಕ ಸಾವೋ ಎಂದು ಪೊಲೀಸರ ತನಿಖೆಯಿಂದ ಇನ್ನಷ್ಟೇ ತಿಳಿಯಬೇಕಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಸಂಬಂಧ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು ಘಟನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. 

ಈ ಸಂದರ್ಭದಲ್ಲಿ ಬಣಕಲ್ ಪೊಲೀಸ್ ಠಾಣೆಯ ಪಿಎಸ್ಐ ಗಾಯತ್ರಿ ಎ.ಎಸ್.ಐ ಶಶಿ, ಸಚಿನ್, ವಿನಯ ಕುಮಾರ್ ಮತ್ತು ವಿಪತ್ತು ನಿರ್ವಹಣಾ ತಂಡದ ಸಂಯೋಜಕ ರವಿಕುಮಾರ್, ಕಾರ್ಯಕರ್ತರಾದ ಜಗದೀಶ್, ಆರೀಫ್, ಅಶ್ವಥ್ ಬೆಟ್ಟಗೆರೆ, ಹಾಗೂ ಅಗ್ನಿಶಾಮಕದಳದ ಸಿಬ್ಬಂದಿಗಳು ಮತ್ತು ಛೇಗು ಗ್ರಾಮದ ಗ್ರಾಮಸ್ಥರು ಸ್ಥಳದಲ್ಲಿದ್ದರು.

ತನು ಕೊಟ್ಟಿಗೆಹಾರ, ವರದಿಗಾರರು

ಅಣ್ಣಪ್ಪ ಸ್ವಾಮಿ ದೇವಸ್ಥಾನದ ಹುಂಡಿಯಿಂದ ಹಣ ದೋಚುತ್ತಿದ್ದ ಕಳ್ಳನನ್ನು ಹಿಡಿದು ಧರ್ಮದೇಟು ನೀಡಿದ ಸ್ಥಳೀಯರು :

ಚಿಕ್ಕಮಗಳೂರು : ಅಣ್ಣಪ್ಪ ಸ್ವಾಮಿ ದೇವಾಲಯದಿಂದ ಹಣ ಕದಿಯುವ ವೇಳೆ ಸ್ಥಳೀಯರ ಕೈಗೆ ಕಳ್ಳನೋರ್ವ ಸಿಕ್ಕಿಬಿದ್ದು ಧರ್ಮದೇಟು ತಿಂದ ಘಟನೆ ನಡೆದಿದೆ. 

ಚಿಕ್ಕಮಗಳೂರು ಹಾಗೂ ದಕ್ಷಿಣಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್ ನಲ್ಲಿರುವ ಶ್ರೀ ಅಣ್ಣಪ್ಪ ಸ್ವಾಮಿ ದೇಗುಲದಲ್ಲಿದ್ದ ಕಾಣಿಕೆ ಹುಂಡಿಯಿಂದ ಹಣ ಕದಿಯುವಾಗ ಬೇಲೂರು ಮೂಲದ ವ್ಯಕ್ತಿ ಸಿಕ್ಕಿಬಿದ್ದಿದ್ದು ಆತನಿಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ. 


ಈ ದಾರಿಯಲ್ಲಿ ಸಾಗುವ ಅನೇಕರು ವಾಹನ ನಿಲ್ಲಿಸಿ ದೇವರಿಗೆ ಕಾಣಿಕೆ ರೂಪದಲ್ಲಿ ಹಣವನ್ನು ಕಾಣಿಕೆ ಹುಂಡಿಗೆ ಹಾಕಿ ತೆರಳುತ್ತಾರೆ, ಅಪಾರವಾದ ಭಕ್ತಿಯನ್ನು ಅಣ್ಣಪ್ಪ ಸ್ವಾಮಿಯ ಮೇಲೆ ಹೊಂದಿರುವ ಭಕ್ತರು ಕಳ್ಳ ನಡೆಸಿರುವ ಈ ಕೃತ್ಯವನ್ನು ಕಂಡು ಸಿಟ್ಟಾಗಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. 

ಆದರೆ ಈ ಕುರಿತು ವೀಡಿಯೋ ಮುಖಾಂತರ ಮಾತನಾಡಿರುವ ಹಲ್ಲೆಗೊಳಗಾದ ವ್ಯಕ್ತಿ ಮೊದಲಿಗೆ ಹುಂಡಿಗೆ ಒಂದಷ್ಟು ಹಣ ಹಾಕಿದ್ದೆ ನಂತರದಲ್ಲಿ ಇನ್ನೊಂದಷ್ಟು ಹಣವನ್ನು ಹಾಕಲೆಂದು ಕೈಯಲ್ಲಿ ಹಿಡಿದುಕೊಂಡಿದ್ದೆ ಆದರೆ ಇದನ್ನು ಸ್ಥಳೀಯರು ತಪ್ಪಾಗಿ ಅರ್ಥೈಸಿಕೊಂಡು ಹೊಡೆದಿದ್ದಾರೆ ಎಂದಿದ್ದಾನೆ ಹಾಗೂ ಯುವಕರ ಬಳಿ ಹೋಗಲಿ ಬಿಡಿ ನನ್ನದೇ ತಪ್ಪು ಎಂದು ಒಪ್ಪಿಕೊಂಡಿದ್ದಾನೆ. ನಾಲ್ಕು ಬಾರಿಸಿದ ಯುವಕರು ಮುಂದಿನ ದಿನಗಳಲ್ಲಿ ಈ ರೀತಿಯ ಕಳ್ಳತನ ನಡೆಸದೇ ಉತ್ತಮವಾಗಿ ಬಾಳುವಂತೆ ಆತನಿಗೆ ತಿಳಿಸಿದ್ದಾರೆ.