ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಸಣ್ಣ ವಯಸ್ಸಿನಲ್ಲಿ ಕಳ್ಳತನವನ್ನು ಮೈಗೂಡಿಸಿಕೊಂಡು ಅಪಾರ ಮೌಲ್ಯದ ಬೈಕ್ ಗಳನ್ನು ಕಳ್ಳತನ ನಡೆಸಿದ್ದ ಆರೋಪಿಗಳನ್ನು ಸಾಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಪೊಲೀಸರು ನಡೆಸಿರುವ ಈ ಕಾರ್ಯಾಚರಣೆಯಲ್ಲಿ ಹಾವೇರಿ ಪಟ್ಟಣದ ನಾಗೇಂದ್ರಮಟ್ಟಿಯ ಸುದೀಪ್ ಅಲಿಯಾಸ್ ಚೂಪಾ (19), ಅಜೇಯ ಅಲಿಯಾಸ್ ಅಜ್ಜಪ್ಪ (20) ಹಾಗೂ ಹಾವೇರಿ ಸಿದ್ದರಗುಡಿಯ ಗಂಗಾಧರ್ ಅಲಿಯಾಸ್ ಸಂಜು (23) ಎಂಬ ಮೂವರನ್ನು ಬಂಧಿಸಿ ವಿಚಾರಣೆ ನಡೆಸುವ ವೇಳೆ ಕಳ್ಳತನ ನಡೆಸಿರುವ ಕುರಿತಾಗಿ ಬಾಯ್ಬಿಟ್ಟಿದ್ದಾರೆ.
ಈ ಚಾಲಾಕಿ ಖದೀಮರು 30.50 ಲಕ್ಷ ಬೆಲೆ ಬಾಳುವ 22 ಬೈಕ್ ಗಳನ್ನು ಕಳ್ಳತನ ನಡೆಸಿದ್ದರು, ಬಂಧಿತರು ಕಳ್ಳತನ ನಡೆಸಿದ ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಆರೋಪಿಗಳ ವಿಚಾರಣೆ ಮುಂದುವರೆದಿದ್ದು ಆರೋಪಿಗಳು ನಡೆಸಿರುವ ಇನ್ನಿತರ ಕೃತ್ಯಗಳ ಕುರಿತು ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ. ಓದಿ ವಿದ್ಯಾವಂತರಾಗಿ ದುಡಿಮೆ ಮಾಡಬೇಕಿದ್ದ ಯುವಕರು ಕಳ್ಳತನದಂತಹ ಕೃತ್ಯದಲ್ಲಿ ಭಾಗಿಯಾಗಿ ಈ ರೀತಿಯ ಕೃತ್ಯ ನಡೆಸಿರುವುದು ವಿಪರ್ಯಾಸವೇ ಸರಿ.
ಈ ಕಾರ್ಯಾಚರಣೆಯನ್ನು ನಡೆಸಿರುವ ಸಾಗರದ ಕಾರ್ಗಲ್ ಠಾಣೆಯ ಪೊಲೀಸರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ಪೋಲಿಸರನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.

.jpeg)

.jpeg)
.jpeg)

0 Comments