ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ವಿವಾಹಿತ ಮಹಿಳೆ ಮಧ್ಯರಾತ್ರಿಯ ಸಮಯದಲ್ಲಿ ಕಾಣೆಯಾಗಿರುವ ಘಟನೆ ವರದಿಯಾಗಿದೆ.
ಇದನ್ನೂ ಓದಿ : ಜಟ್ಕಾ/ಹಲಾಲ್ ಮಾಂಸ ವಿವಾದ : ಅಭಿಯಾನಕ್ಕೆ ಜನರ ಸ್ಪಂದನೆ, ಹಿಂದೂ ಸಂಘಟಕರ ಅಂಗಡಿಯಲ್ಲಿ ಭರ್ಜರಿ ವ್ಯಾಪಾರ
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ನಾರ್ವೆ ನರಸೀಪುರ ಗ್ರಾಮದ ನಿವಾಸಿ ಪ್ರಶಾಂತ್ ಡಿಸೋಜ ಎಂಬುವವರು ನಾಲ್ಕು ವರ್ಷಗಳ ಹಿಂದೆ ಕೊರಡಹಿತ್ಲು ಗ್ರಾಮದ ಶೇಖರ್ ಪೂಜಾರಿ ಅವರ ಪುತ್ರಿಯಾದ ಶೃತಿಯನ್ನು ಪ್ರೀತಿಸಿ ವಿವಾಹವಾಗಿದ್ದು ಈ ದಂಪತಿಗೆ ಎರಡೂವರೆ ವರ್ಷದ ಒಂದು ಹೆಣ್ಣು ಮಗುವಿದ್ದು, ಈ ಮಗುವನ್ನು ನೋಡಿಕೊಂಡು ಮನೆಯಲ್ಲಿರುತ್ತಿದ್ದ ಪತ್ನಿ ಏಕಾಏಕಿ ಮಧ್ಯರಾತ್ರಿಯ ವೇಳೆ ಕಾಣೆಯಾಗಿದ್ದಾಳೆ ಎಂದು ಪ್ರಶಾಂತ್ ಡಿಸೋಜ ದೂರು ದಾಖಲಿಸಿದ್ದಾರೆ.
ಎಂದಿನಂತೆಯೇ ದಿನಾಂಕ 30.03.2022 ರಂದು ಪ್ರಶಾಂತ್ ಅವರು ಮನೆಗೆ ಬಂದಾಗ ಮನೆಯಲ್ಲಿದ್ದ ಪತ್ನಿ ರಾತ್ರಿ 11 ಗಂಟೆಯ ವರೆಗೆ ಮನೆಯಲ್ಲಿದ್ದು ಮನೆಯ ಕೆಲಸವನ್ನೆಲ್ಲಾ ಮಾಡಿ 11.30 ಕ್ಕೆ ರೂಮಿನಲ್ಲಿ ಮಲಗಿದ್ದ ಪತ್ನಿ ರಾತ್ರಿ 12.45 ರ ಹೊತ್ತಿನಲ್ಲಿ ಮನೆಯಿಂದ ಕಾಣೆಯಾಗಿದ್ದಾಳೆ ಎಂದು ಪ್ರಶಾಂತ್ ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಶೃತಿ ಅವರ ಬಟ್ಟೆಗಳೂ ಮನೆಯಿಂದ ನಾಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ, ಶೃತಿ ಅವರು 5 ಅಡಿ ಎತ್ತರವಿದ್ದು ತುಳು ಹಾಗೂ ಕನ್ನಡ ಭಾಷೆಯನ್ನು ಮಾತನಾಡುತ್ತಾರೆ ಮನೆಯಿಂದ ಹೋಗುವ ದಿನ ನೀಲಿಬಣ್ಣದ ಮಿಡಿಯನ್ನು ಧರಿಸಿರುತ್ತಾರೆ ಅತೀ ಶೀಘ್ರವಾಗಿ ಶೃತಿ ಅವರನ್ನು ಹುಡುಕಿ ಕೊಡಬೇಕೆಂದು ಪ್ರಶಾಂತ್ ಅವರು ಇಲಾಖೆಯ ಅಧಿಕಾರಿಗಳನ್ನು ಕೋರಿದ್ದಾರೆ.







0 Comments