ನರಸಿಂಹರಾಜಪುರ : (ನ್ಯೂಸ್ ಮಲ್ನಾಡ್ ವರದಿ) ನೇಣು ಬಿಗಿದುಕೊಂಡು ಯುವತಿಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಬೆಳಕಿಗೆ ಬಂದಿದೆ. 

ಇದನ್ನೂ ಓದಿ :  ಕೊಪ್ಪ : ಆಕಸ್ಮಿಕ ವಿದ್ಯುತ್ ಅವಘಡ ; ಓರ್ವ ವ್ಯಕ್ತಿಯ ದುರ್ಮರಣ

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ 23 ವರ್ಷ ಪ್ರಾಯದ ಯುವತಿ ತೋಟದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ನರಸಿಂಹರಾಜಪುರದ ಅಜಾದ್ ಗಲ್ಲಿ ನಿವಾಸಿ ರಂಜಾನ್ ಸಾಬ್ ಎಂಬುವವರ ಪುತ್ರಿ ನಾಜನೀನ್ ಬಾನು ಆತ್ಮಹತ್ಯೆಗೆ ಶರಣಾದ ದುರ್ದೈವಿ. ಮೃತ ಯುವತಿಗೆ ಮುಂದಿನ ತಿಂಗಳಿನಲ್ಲಿ ಮದುವೆ ಕೂಡ ನಿಶ್ಚಯವಾಗಿತ್ತು, ಆಕೆಯು ಆತ್ಮಹತ್ಯೆಗೆ ಶರಣಾಗಿರುವುದು ಕುಟುಂಬಕ್ಕೆ ಹಾಗೂ ಪೋಷಕರಿಗೆ ಬೇಸರ ಉಂಟುಮಾಡಿದೆ. 

ಅಭ್ಯರ್ಥಿಗಳು ಈ ಕೆಳಕಂಡ ಲಿಂಕ್ ಮೂಲಕ ರಿಜಿಸ್ಟರ್ ಆಗಬಹುದು : https://forms.gle/PvypXpJerzDzsrfE9

ಮದುವೆ ಸಂಬಂಧ ಕೆಲ ವಸ್ತುಗಳನ್ನು ಖರೀದಿ ಮಾಡಲು ತೆರಳಿದ ಯುವತಿಯು ಅನೇಕ ಸಮಯ ಕಳೆದರೂ ಕೂಡ ಮನೆಗೆ ಹಿಂದಿರುಗದೇ ಇರುವುದನ್ನು ಕಂಡು ಗಾಬರಿಯಾದ ಪೋಷಕರು ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ, ಎಲ್ಲೇ ಹುಡುಕಾಡಿದರೂ ಕೂಡ ಆಕೆ ದೊರೆಯದ ಕಾರಣ ಕೊನೆಗೆ ಅವರ ತೋಟದ ಮನೆಗೆ ಹೋಗಿ ಅಲ್ಲಿ ಹುಡುಕಿದಾಗ ಮನೆಯ ಛಾವಣಿಗೆ ಆಕೆಯು ವೇಲಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಕಂಡು ಬಂದಿರುತ್ತದೆ. 

ಆಕೆಯ ತಂದೆಗೆ ಆರೋಗ್ಯ ಸಮಸ್ಯೆಯಿದ್ದು ಮದುವೆಯ ನಂತರ ತಾಯಿ, ತಂಗಿ, ತಮ್ಮನ ಖರ್ಚು ವೆಚ್ಚವನ್ನು ಭರಿಸುವುದು ಹಾಗೂ ಸಂಸಾರದ ಜವಾಬ್ದಾರಿಯನ್ನು ಹೊರುವುದು ಅತ್ಯಂತ ಕಠಿಣ ಎಂದು ಅವರ ಪರಿಸ್ಥಿತಿಯನ್ನು ನೆನೆದು ಈ ನಿರ್ಧಾರ ಕೈಗೊಂಡಿರಬಹುದು ಎಂದು ಮೃತ ನಾಜನೀನ್ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲುಮಾಡಿಕೊಂಡು ತನಿಖೆ ಆರಂಭಿಸಿದ್ದಾರೆ.