ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಒಣಗಿಸಲೆಂದು ಕಟಾವು ಮಾಡಿ ಹೊರಗಡೆ ಹರಗಿಸಿಟ್ಟಿದ್ದ ಕಾಳುಮೆಣಸನ್ನು ಕಳ್ಳತನ ಮಾಡಿದ್ದ ಖದೀಮರನ್ನು ಪೊಲೀಸರು ಕಾರ್ಯಾಚರಣೆಯ ಮೂಲಕ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ : ಭೀಕರ ರಸ್ತೆ ಅಪಘಾತ ; ಬೈಕ್ ಸವಾರನ ದುರ್ಮರಣ

ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಹೋಬಳಿಯ ಬಾಳೆಹಳ್ಳಿ ಗ್ರಾಮದ ಗಣೇಶ್ ಎಂ.ಬಿ ಎಂಬುವವರ ತೋಟದಲ್ಲಿ ಕಟಾವು ಮಾಡಿ ದಿನಾಂಕ 10.04.2022 ರಂದು ರಾತ್ರಿ ಎಂಟು ಗಂಟೆ ವೇಳೆಯಲ್ಲಿ ಒಣಗಲೆಂದು ಹೊರಹಾಕಿದ್ದ 2.5 ಕ್ವಿಂಟಾಲ್ ಕಾಳುಮೆಣಸನ್ನು ಕಳ್ಳತನ ನಡೆಸಿದ್ದ ಚಾಲಾಕಿ ಕಳ್ಳರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಈ ಕುರಿತು ಗಣೇಶ್ ಅವರು ಆಲ್ದೂರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ದೂರನ್ನು ಸ್ವೀಕರಿಸಿದ ಪೊಲೀಸರು ಕಾರ್ಯಪ್ರವೃತ್ತರಾಗಿ ನಾಲ್ವರು ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. 

ಬಂಧಿತರಿಂದ 120,000 ರೂಪಾಯಿ ಬೆಲೆ ಬಾಳುವ 2.5 ಕ್ವಿಂಟಾಲ್ ಕಾಳುಮೆಣಸು ಎರಡು ದ್ವಿಚಕ್ರವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದು ಈ ಸಂಬಂಧ ತನಿಖೆ ಆರಂಭಿಸಿದ್ದಾರೆ. ಈ ಕಾರ್ಯಾಚರಣೆಯು ಆಲ್ದೂರು ಸಿಪಿಐ ಅವರ ನೇತೃತ್ವದ ಪೊಲೀಸ್ ತಂಡ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದೆ.