ಕಡೂರು : ( ನ್ಯೂಸ್ ಮಲ್ನಾಡ್ ವರದಿ) 35 ವರ್ಷ ಪ್ರಾಯದ ವ್ಯಕ್ತಿಯ ಶವವೊಂದು ರೈಲ್ವೇ ಟ್ರಾಕ್ ಬಳಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.
ಇದನ್ನೂ ಓದಿ : ಅಣ್ಣಪ್ಪ ಸ್ವಾಮಿ ದೇವಸ್ಥಾನದ ಹುಂಡಿಯಿಂದ ಹಣ ದೋಚುತ್ತಿದ್ದ ಕಳ್ಳನನ್ನು ಹಿಡಿದು ಧರ್ಮದೇಟು ನೀಡಿದ ಸ್ಥಳೀಯರು
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರು ಸಮೀಪದ ತಿಪ್ಪಗೊಂಡನಹಳ್ಳಿ ರೈಲ್ವೆ ಟ್ರ್ಯಾಕ್ ಬಳಿ ಅನುಮಾನಾಸ್ಪದ ರೀತಿಯಲ್ಲಿ 35 ವರ್ಷ ಪ್ರಾಯದ ಪುರುಷನ ಶವ ಪತ್ತೆಯಾಗಿದೆ.
ಈ ಶವ ಪತ್ತೆಯಾದ ಸ್ಥಳಕ್ಕೆ ಸಖರಾಯಪಟ್ಟಣ ಪಿಎಸ್ಐ ಹರೀಶ್ ಧಾವಿಸಿ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಶವವನ್ನುಜಿಲ್ಲಾಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಸಂಬಂಧ ಹೆಚ್ಚಿನ ತನಿಖೆಯ ಅವಶ್ಯಕತೆಯಿದ್ದು ಮೇಲ್ನೋಟಕ್ಕೆ ನೋಡಿದಾಗ ಕೊಲೆ ಎಂಬ ಅನುಮಾನ ವ್ಯಕ್ತವಾಗಿದೆ, ಪೊಲೀಸರ ಸಂಪೂರ್ಣ ತನಿಖೆಯ ನಂತರವಷ್ಟೇ ಈ ಕುರಿತು ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.
ಹೆಜ್ಜೇನು ದಾಳಿಗೆ ತುತ್ತಾಗಿ ಕೊನೆಯುಸಿರೆಳೆದ ಕಾಫಿ ಮಂಡಳಿ ಅಧ್ಯಕ್ಷ
ಚಿಕ್ಕಮಗಳೂರು : ಹೆಜ್ಜೇನು ದಾಳಿಗೆ ಹಿರಿಯರು ಹಾಗೂ ಕಾಫಿ ಮಂಡಳಿಯ ಅಧ್ಯಕ್ಷರಾದ ಚಿರಪರಿಚಿತ ವ್ಯಕ್ತಿ ಶ್ರೀಯುತ ಬೋಜೆಗೌಡ ಅವರು ಇಂದು ನಿಧನ ಹೊಂದಿದರು.
ಆಲ್ ಇಂಡಿಯಾ ಕಾಫಿ ಮಂಡಳಿಯ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ಹಾಗೂ ಅನೇಕರಿಗೆ ಸಹಾಯ ಹಸ್ತ ಚಾಚಿದ್ದ ಚಿಕ್ಕಮಗಳೂರಿನ ಚಿರಪರಿಚಿತ ವ್ಯಕ್ತಿ ಮೂಗ್ತಿಹಳ್ಳಿ ಬೋಜೆಗೌಡ ಅವರು ಇಂದು ಹೆಜ್ಜೇನು ದಾಳಿಗೆ ತುತ್ತಾಗಿ ಕೊನೆಯುಸಿರೆಳೆದಿದ್ದಾರೆ. ಕಾಫಿನಾಡು ಚಿಕ್ಕಮಗಳೂರಿನ ಅರಶಿನ ಗುಪ್ಪೆ ಸಮೀಪವಿರುವ ಕೃಷ್ಣಗಿರಿ ಕಾಫಿ ಎಸ್ಟೇಟ್ ನಲ್ಲಿ ಆಕಸ್ಮಿಕವಾಗಿ ಹಿಂಡು ಹಿಂಡಾಗಿ ಹೆಜ್ಜೇನುಗಳ ಬೋಜೆಗೌಡ ಅವರ ಮೇಲೆ ದಾಳಿ ನಡೆಸಿದ್ದವು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ದಾಳಿಯ ತೀವ್ರತೆಗೆ ಶ್ರೀಯುತರು ಅಸುನೀಗಿದ್ದಾರೆ. ಅವರು ಎರಡು ಬಾರಿ ಕಾಫಿ ಮಂಡಳಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಅವರ ಅಧ್ಯಕ್ಷಗಿರಿ ಮಾರ್ಚ್ ತಿಂಗಳ ಕೊನೆಯಲ್ಲಿ ಮುಗಿದಿತ್ತು.
ಸಮಾಜದಲ್ಲಿ ಎಲ್ಲರೊಂದಿಗೆ ಸ್ನೇಹ ಹಾಗೂ ಪ್ರೀತಿಯಿಂದಿದ್ದು ಕಷ್ಟದಲ್ಲಿರುವವರಿಗೆ ಸದಾ ಸಹಾಯ ಮಾಡುತ್ತಿದ್ದ ವ್ಯಕ್ತಿಯ ಸಾವು ಕುಟುಂಬವರ್ಗದಲ್ಲಿ, ಬಂಧುಗಳಲ್ಲಿ ಹಾಗೂ ಸ್ನೇಹಿತರಲ್ಲಿ ಬೇಸರ ಉಂಟುಮಾಡಿದೆ. ಮೃತರು ಅಪಾರ ಸಂಖ್ಯೆಯ ಬಂಧುಗಳನ್ನು ಹಾಗೂ ಸ್ನೇಹಿತರನ್ನು ಅಗಲಿದ್ದಾರೆ.

.jpeg)
.jpeg)
.jpeg)
.jpeg)
.jpeg)
.jpeg)

.jpeg)
.jpeg)

0 Comments