ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಮನೆಯ ಬಳಿ ಆಟವಾಡುತ್ತಿದ್ದ ಬಾಲಕಿಗೆ ವಿದ್ಯುತ್ ಪ್ರವಹಿಸಿ ಮೃತಪಟ್ಟಿರುವ ದುರ್ಘಟನೆ ಸಂಭವಿಸಿದೆ. 

ಇದನ್ನೂ ಓದಿ :  ಎಸ್.ಕೆ.ಬಾರ್ಡರ್ : ಕೆ ಕೆ ಬಿ ಬಸ್ ಹಾಗೂ ಲಾರಿ ನಡುವೆ ರಸ್ತೆ ಅಪಘಾತ

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹಿರಿಯೂರಿನಲ್ಲಿ ಮನೆಯ ಬಳಿ ಆಟವಾಡುತ್ತಿದ್ದ ನಾಲ್ಕು ವರ್ಷಪ್ರಾಯದ ಬಾಲಕಿ ಅಚಾನಕ್ಕಾಗಿ ವಿದ್ಯುತ್ ಕಂಬ ಮುಟ್ಟಿ ಅದರಲ್ಲಿ ಹರಿಯುತ್ತಿದ್ದ ವಿದ್ಯುತ್ ನ ಶಾಕ್ ಗೆ ಒಳಪಟ್ಟು  ಮೃತಪಟ್ಟಿದ್ದಾಳೆ. ಭದ್ರಾವತಿಯ ಹಿರಿಯೂರು ಸಂತೋಷ್ ಹಾಗೂ ಪೂಜಾ ದಂಪತಿಯ ಪುತ್ರಿ ಇಂಚರಾ ಮೃತ ಬಾಲಕಿ. 

ಅಭ್ಯರ್ಥಿಗಳು ಈ ಕೆಳಕಂಡ ಲಿಂಕ್ ಮೂಲಕ ರಿಜಿಸ್ಟರ್ ಆಗಬಹುದು : https://forms.gle/PvypXpJerzDzsrfE9

ಬಟ್ಟೆ ಒಣಗಿಸುವ ಸಲುವಾಗಿ ಮನೆಯ ಸಮೀಪವಿದ್ದ ಕರೆಂಟ್ ಕಂಬಕ್ಕೆ ತಂತಿಯನ್ನು ಕಟ್ಟಲಾಗಿತ್ತು, ಅದರ ಮೇಲೆ ಡಿಶ್ ಕೇಬಲ್ ತುಂಡಾಗಿ ಬಿದ್ದ ಕಾರಣ ಗ್ರೌಂಡ್ ಆಗಿದೆ ಈ ಸಂದರ್ಭದಲ್ಲಿ ವಿದ್ಯುತ್ ಕಂಬವನ್ನು ಮುಟ್ಟಿದ ಬಾಲಕಿ ಕರೆಂಟ್ ಶಾಕ್ ಗೆ ಒಳಪಟ್ಟು ಅಸುನೀಗಿದ್ದಾಳೆ. 

ಮಲೆನಾಡು ಭಾಗದಲ್ಲಿ ನಿರಂತರವಾಗಿ ಗುಡುಗು ಸಹಿತ ಮಳೆಯಾಗುತ್ತಿರುವ ಕಾರಣ ಅಲ್ಲಲ್ಲಿ ಕೆಲ ಅವಘಡಗಳು ಸಂಭವಿಸುತ್ತಿದ್ದು ಜಾಗರೂಕತೆವಹಿಸಿ ಹೊರಾಂಗಣ ಹಾಗೂ ಒಳಾಂಗಣದಲ್ಲಿ ಶ್ರಮಿಸುವ  ಕಾರ್ಮಿಕರು ಕೆಲಸ ನಡೆಸಬೇಕೆಂದು ತಿಳಿಸಲಾಗಿದೆ.

ಬೇಲೂರು ರಥೋತ್ಸವಕ್ಕೂ ಕುರಾನ್ ಗೂ ಏನು ಸಂಬಂಧ?

ಬೇಲೂರು : ಬೇಲೂರಿನ ಚೆನ್ನಕೇಶವ ದೇವರಿನ ರಥೋತ್ಸವಕ್ಕು ಹಾಗೂ ಮುಸಲ್ಮಾನರ ಧಾರ್ಮಿಕ ಗ್ರಂಥ ಕುರಾನ್ ಗೂ ಏನು ಸಂಬಂಧ ಎಂದು ಶ್ರೀ ರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. 

ಈ ಕುರಿತು ಬೇಲೂರಿನ ಶ್ರೀ ರಾಮ ಸೇನಾ ತಾಲೂಕು ಘಟಕದ ಉದ್ಘಾಟನಾ ಸಮಯದಲ್ಲಿ ಮಾತನಾಡಿದ ಅವರು ಬೇಲೂರಿನ ರಥೋತ್ಸವಕ್ಕೆ ಹಾಗೂ ಕುರಾನ್ ಅನ್ನು ದೇವರ ರಥೋತ್ಸವದ ಮುಂದೆ ಮಾತನಾಡುವುದಕ್ಕೆ ಏನು ಸಂಬಂಧವಿದೆ ಎಂದು ಪ್ರಶ್ನಿಸಿದ್ದಾರೆ. 

ರಥೋತ್ಸವದ ಸಂದರ್ಭದಲ್ಲಿ ಕುರಾನ್ ಓದುವುದಕ್ಕೆ ನಮ್ಮ ತೀವ್ರ ವಿರೋಧವಿದ್ದು ಈ ಸಂದರ್ಭದಲ್ಲಿ ಕುರಾನ್ ಓದುವುದರ ಅರ್ಥವಾದರೂ ಏನು ರಥೋತ್ಸವ ಹಾಗೂ ಕುರಾನ್ ಗೆ ಎಲ್ಲಿಯ ಸಂಬಂಧ ಎಂದು ಪ್ರಶ್ನಿಸಿದರು. ಹಾಗೂ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಎಚ್ಚರಿಕೆ ನೀಡಿರುವ ಅವರು ಮುಂದಿನ ವರ್ಷದಿಂದ ಬೇಲೂರು ಚನ್ನಕೇಶವ ರಥೋತ್ಸವದ ಸಂದರ್ಭದಲ್ಲಿ ಕುರಾನ್ ಪಠಣವಿದ್ದಲ್ಲಿ ಇದನ್ನು ತಡೆಯಲು ಶ್ರೀ ರಾಮ ಸೇನೆ ಸಿದ್ಧವಿದೆ ಆ ಸಂದರ್ಭದಲ್ಲಿ ನಡೆಯುವ ಪ್ರತಿಭಟನೆ ಹಾಗೂ ಹೋರಾಟಕ್ಕೆ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಎಚ್ಚರಿಸಿದರು.

ಈ ಕುರಿತು ಸರ್ಕಾರ ಚಿಂತಿಸಿ ಹಿಂದೂಗಳ ಪರವಾದ ನಿರ್ಣಯವನ್ನು ಮುಂಬರುವ ದಿನಗಳಲ್ಲಿ ಕೈಗೊಳ್ಳದೇ ಹೋದಲ್ಲಿ ಶ್ರೀ ರಾಮ ಸೇನೆಯ ವತಿಯಿಂದ ಮುಂದಿನ ವರ್ಷಗಳಲ್ಲಿ ಹೋರಾಟ ಕೈಗೆತ್ತಿಕೊಳ್ಳುವ ಎಚ್ಚರಿಕೆ ನೀಡಿದರು. ಧಾರ್ಮಿಕ ದತ್ತಿ ಇಲಾಖೆಯ ವಿರುದ್ಧ ಹರಿಹಾಯ್ದ ಅವರು ಮಂದಿರಗಳ ಸುತ್ತಲಿನ ಸ್ಥಳಗಳಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಬಾರದು ಎಂಬ ನಿಯಮವನ್ನು ಗಾಳಿಗೆ ತೂರಿ ಇಲ್ಲಿ ಅವಕಾಶ ನೀಡಲಾಗಿದೆ. ಚೆನ್ನಕೇಶವ ದೇವರ ಎದುರುಗಡೆಯಲ್ಲಿ ಓರ್ವ ಮುಸಲ್ಮಾನ ವ್ಯಕ್ತಿಯ ಅಂಗಡಿಯಿದೆ ಈ ಕುರಿತು ಅವಕಾಶ ನೀಡದೇ ಆಗಿರುವ ಲೋಪವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು. ಯಾವರೀತಿಯಾಗಿ ಮುಸಲ್ಮಾನರು ತಮ್ಮ ಮಸೀದಿ ಅಥವಾ ಅವರ ಧಾರ್ಮಿಕ ಕ್ಷೇತ್ರಗಳ ಮುಂದೆ ಹಿಂದೂ ಧರ್ಮೀಯರಿಗೆ ಅವಕಾಶ ನೀಡುವುದಿಲ್ಲವೋ ಅಂತೆಯೇ ಹಿಂದೂಗಳ ಧಾರ್ಮಿಕ ಕ್ಷೇತ್ರದ ಬಳಿ ಅವರಿಗೆ ವ್ಯಾಪಾರಕ್ಕೆ ಕಡಿವಾಣ ಹಾಕಬೇಕು ಎಂದರು.