ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಯಲ್ಲಿ ಬೆಟ್ಟದ ಮಾರಿಕಾಂಬಾ ಮತ್ತು ಪರಿವಾರ ದೇವತೆಗಳ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮತ್ತು ಭೋವಿ ಸಮಾಜದ ಸಭಾಂಗಣದ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.
ಇದನ್ನೂ ಓದಿ : ಲಾರಿ ಹಾಗೂ ಬೈಕ್ ನ ನಡುವೆ ಭೀಕರ ರಸ್ತೆ ಅಪಘಾತ ; ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಪೊಲೀಸ್ ಪೇದೆ ಸಾವು
ಶೃಂಗೇರಿಯ ಮಾರುತಿ ಬೆಟ್ಟದ ಸಮೀಪವಿರುವ ಶ್ರೀ ಬೆಟ್ಟದ ಮಾರಿಕಾಂಬಾ ಮತ್ತು ಪರಿವಾರ ದೇವತೆಗಳ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕದ ಮಹತ್ಕಾರ್ಯವು ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ನೆರವೇರಿತು. ಶ್ರೀಗಳಿಗೆ ಬೋವಿ ಸಮಾಜದ ಪದಾಧಿಕಾರಿಗಳು ಫಲ ಪುಷ್ಪವನ್ನು ಸಮರ್ಪಿಸಿ ಆಶೀರ್ವಾದ ಪಡೆದರು.
ಕಾರ್ಯಕ್ರಮದ ಕುರಿತು ಮಾತನಾಡಿದ ವಿಧುಶೇಖರ ಭಾರತೀ ಮಹಾಸ್ವಾಮೀಜಿಗಳು ದೇವಿಯನ್ನು ಸದಾ ಪ್ರಾರ್ಥಿಸಿದಾಗ ಕಷ್ಟಕಾರ್ಪಣ್ಯಗಳು ದೂರವಾಗಿ ಜಗನ್ಮಾತೆಯ ಅನುಗ್ರಹ ಪ್ರಾಪ್ತವಾಗುತ್ತದೆ, ಮಾರಿಕಾಂಬಾ ದೇವಿಯನ್ನು ಆರಾಧನೆ ಮಾಡಿಕೊಂಡು ಅನೇಕ ಸಮಯಗಳಿಂದ ಭೋವಿ ಸಮಾಜದವರು ಬಂದಿದ್ದಾರೆ. ಸರ್ವರಮೇಲೂ ದೇವಿಯ ಅನುಗ್ರಹವಿರಲಿ, ಜಗನ್ಮಾತೆ ಇಡೀ ಜಗತ್ತಿಗೆ ಒಳಿತನ್ನುಂಟುಮಾಡಲಿ ಎಂದು ಆಶೀರ್ವದಿಸಿದರು.
ಮಾಡುವ ಉತ್ತಮ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಲಿದೆ, ಮಾಡುವ ಪ್ರತಿಯೊಂದು ಕಾರ್ಯವೂ ಇನ್ನೊಬ್ಬರ ಹಿತಕಾಯಬೇಕು ಆಗ ಮಾತ್ರ ಸಮಾಜಕ್ಕೆ ಶ್ರೇಯಸ್ಸು ಉಂಟಾಗಲಿದೆ ಎಂದಿಗೂ ಧರ್ಮದಲ್ಲಿರುವ ಆಚರಣೆ ಹಾಗೂ ಹಿಂದೂ ಸನಾತನ ಧರ್ಮದ ಸಂಪ್ರದಾಯವನ್ನು ಮರೆಯಬಾರದು ಎಂದು ಗುರುಗಳು ನೆರೆದವರನ್ನು ಆಶೀರ್ವದಿಸಿದರು.
ಈ ಕಾರ್ಯಕ್ರಮದಲ್ಲಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಬಿ. ಶಿವಶಂಕರ್ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್, ದೇವಸ್ಥಾನ ಸಮಿತಿ ಅಧ್ಯಕ್ಷ ಅರುಣ, ಭೋವಿ ಸಮಾಜದ ಉಪಾಧ್ಯಕ್ಷ ಸುಬ್ರಮಣ್ಯ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು.





0 Comments