ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಯುಗಾದಿಯಿಂದ ಆರಂಭವಾದ ಶ್ರೀ ರಾಮೋತ್ಸವ ಕಾರ್ಯಕ್ರಮವು ಅದ್ಧೂರಿಯಾಗಿ ಭಕ್ತಿ ಭಾವಗಳಿಂದ ಆರಂಭವಾಗಿದ್ದು ಇಂದು ಶೃಂಗೇರಿಯ ಕೆರೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ ಜರುಗಿತು.
ಇದನ್ನೂ ಓದಿ : ಚಿಕ್ಕಮಗಳೂರು : ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ರಸ್ತೆಗಿಳಿದ ಕಾಂಗ್ರೆಸ್ ಹಾಗೂ ಸಿಪಿಐ ಕಾರ್ಯಕರ್ತರು ; ರಾಜೀನಾಮೆಗೆ ಆಗ್ರಹ
ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಶೃಂಗೇರಿಯ ಪಟ್ಟಣದಲ್ಲಿರುವ ಚಪ್ಪರದಾಂಜನೇಯ ದೇವಸ್ಥಾನ ಹಾಗೂ ಬಸ್ ನಿಲ್ದಾಣದ ಸಮೀಪದಲ್ಲಿರುವ ಶ್ರೀ ಕೆರೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಭಕ್ತಿ ಭಾವಗಳಿಂದ ಧಾರ್ಮಿಕ ಕಾರ್ಯಕ್ರಮಗಳು ಪೂಜೆ ಪ್ರಸಾದ ವಿನಿಯೋಗ ನಡೆಯುತ್ತಿದೆ. ಅಂತೆಯೇ ನಿನ್ನೆ ಶ್ರೀ ಕೆರೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಶ್ರೀರಾಮತಾರಕ ಜಪ ಯಜ್ಞದ ಪೂರ್ಣಾಹುತಿಯನ್ನು ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತಿಗಳು ನೆರವೇರಿಸಿದರು. ಹಾಗೆಯೇ ನಿನ್ನೆ ಸಾಮೂಹಿಕ ಸತ್ಯನಾರಾಯಣ ವ್ರತ ಕೂಡ ನಡೆಯಿತು. ಈ ಸಂದರ್ಭದಲ್ಲಿ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾ ಸ್ವಾಮಿಗಳವರಿಗೆ ಕೆರೆ ಆಂಜನೇಯ ಸ್ವಾಮಿ ಭಜನಾ ಸಮಿತಿಯಿಂದ ಫಲಪುಷ್ಪ ಸಮರ್ಪಣೆ ಹಾಗೂ ಭಿಕ್ಷಾ ವಂದನೆಯನ್ನು ಕಮಿಟಿಯ ಪದಾಧಿಕಾರಿಗಳು ಸಮರ್ಪಿಸಿದರು. ಪೂಜ್ಯರು ಮಹಾಮಂಗಳಾರತಿಯನ್ನು ನೆರವೇರಿಸಿ ಭಕ್ತಾದಿಗಳನ್ನು ಆಶೀರ್ವದಿಸಿದರು.
ಅಂತೆಯೇ ಶೃಂಗೇರಿ ಪಟ್ಟಣದಲ್ಲಿರುವ ಶ್ರೀ ಚಪ್ಪರದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಭಕ್ತಿ ಭಾವಗಳಿಂದ 108 ಸಾಮೂಹಿಕ ಸತ್ಯನಾರಾಯಣ ವ್ರತ ನಿನ್ನೆ ನಡೆಯಿತು. ಕಳೆದ ಎರಡು ವರ್ಷಗಳಿಂದ ಕರೋನಾ ನಿಯಮಾವಳಿಗಳು ಮಾರ್ಗಸೂಚಿಯಿದ್ದ ಕಾರಣ ಅದ್ಧೂರಿಯಿಂದ ರಾಮೋತ್ಸವದ ಆಚರಣೆ ಸಂಪನ್ನವಾಗಿರಲಿಲ್ಲ. ಈ ಬಾರಿ ಯಾವುದೇ ನಿಯಮಾವಳಿಗಳು ಇಲ್ಲದ ಕಾರಣ ಭಕ್ತಿಭಾವದಿಂದ ಅದ್ದೂರಿಯಾಗಿ ಎರಡು ದೇವಸ್ಥಾನಗಳಲ್ಲಿ ರಾಮೋತ್ಸವದ ಆಚರಣೆ ನಡೆಯುತ್ತಿದೆ. ನಿನ್ನೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಪಾಲ್ಗೊಂಡು ಈ ಕಾರ್ಯಕ್ರಮದಲ್ಲಿ ಭಾಗಿಯಾದರು.
ದಿನಾಂಕ 16.04.2022 ರ ವರೆಗೂ ಧಾರ್ಮಿಕ ಕಾರ್ಯಕ್ರಮಗಳು ಎರಡೂ ದೇವಾಲಯಗಳಲ್ಲಿ ನಡೆಯಲಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನದ ಕಮಿಟಿಯವರು ತಿಳಿಸಿದ್ದಾರೆ.




0 Comments