ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಶ್ರೀಕ್ಷೇತ್ರ ಶಕಟಪುರದಲ್ಲಿ ಜ್ಞಾನಾರ್ಜನೆಯ ಹಾಗೂ ಧರ್ಮವನ್ನು ಪ್ರಸರಿಸುವ ಸಲುವಾಗಿ ಧರ್ಮ ಪ್ರಬೋಧನ ಸಭೆ ನಡೆಯಿತು.

ಇದನ್ನೂ ಓದಿ : ಬಾಳೆಹೊನ್ನೂರು: ಹಿಂದೂ ರಾಜಕೀಯ ನಾಯಕರ ಆಯ್ಕೆ ಮಾಡುವ ಉದ್ಧೇಶದಿಂದ ಹಿಂದೂ ಬ್ರಿಗೇಡ್ ಸ್ಥಾಪನೆ

ಈ ಧಾರ್ಮಿಕ ಸಭೆಯಲ್ಲಿ ಪ್ರವಚನ ನೀಡಿದ ಶ್ರೀ ಕೃಷ್ಣಾನಂದತೀರ್ಥ ಮಹಾಸ್ವಾಮಿಗಳು ಮನುಷ್ಯನು ಮುಖ್ಯವಾಗಿ ಪಂಚೇಂದ್ರಿಯಗಳನ್ನು ನಿಗ್ರಹಿಸಿ ಕಾರ್ಯತತ್ಪರನಾದಾಗ ಮಾತ್ರ ಸಾಧನೆ ಮಾಡಬಲ್ಲ. ಹುಟ್ಟಿನಿಂದ ಸಾವಿನವರೆಗೂ ನಾವು ನಡೆಸುವುದು ಯಾತ್ರೆ, ಆ ಯಾತ್ರೆಯಲ್ಲಿ ಸಫಲರಾಗಬೇಕಾದರೆ ಉತ್ತಮ ಕಾರ್ಯಗಳೆಡೆಗೆ ಮನಸ್ಸನ್ನು ಸಂಪೂರ್ಣವಾಗಿ ಕೇಂದ್ರೀಕರಿಸಿ ಆದರ್ಶಪ್ರಾಯರಾಗಿ ಬದುಕಬೇಕು ಎಂದರು. ಮರ್ಯಾದಾ ಪುರುಷೋತ್ತಮ ಶ್ರೀ ರಾಮ ಹಾಗೂ ಭಗವಾನ್ ಶ್ರೀಕೃಷ್ಣನ ಸನ್ನಿಧಾನ ಈ ಶಕಟಪುರವಾಗಿದೆ ಈ ಕ್ಷೇತ್ರವು ಸದಾ ಧರ್ಮದ ರಕ್ಷಣೆಗಾಗಿ, ಧರ್ಮ ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯನಿರ್ವಹಿಸುತ್ತದೆ ಎಂದರು. 

ಅಭ್ಯರ್ಥಿಗಳು ಈ ಕೆಳಕಂಡ ಲಿಂಕ್ ಮೂಲಕ ರಿಜಿಸ್ಟರ್ ಆಗಬಹುದು :https://forms.gle/PvypXpJerzDzsrfE9

ಈ ಧರ್ಮ ಪ್ರಬೋಧನಾ ಸಭೆಯಲ್ಲಿ ಮಾತನಾಡಿದ ಗುಜರಾತಿನ ರಾಜಕೋಟದ ಆರ್ಷ ವಿದ್ಯಾ ಮಂದಿರದ ಆಶ್ರಮಾಧೀಶ ಶ್ರೀ ಪರಮಾತ್ಮಾನಂದ ಸರಸ್ವತಿ ಸ್ವಾಮಿಗಳು ಭಾರತವು ಇಡೀ ಜಗತ್ತಿಗೆ ಧರ್ಮವನ್ನು ಸಾರಿದ ಪವಿತ್ರ ಭೂಮಿ, ಹಿಂದೂಗಳಾಗಿ ಹುಟ್ಟುವುದೇ ಏಳೇಳು ಜನ್ಮಗಳ ಪುಣ್ಯದ ಫಲ, ಹಿಂದೂ ಧರ್ಮದಲ್ಲಿರುವ ಎಲ್ಲಾ ಬೋಧನೆ ಹಾಗೂ ಗ್ರಂಥಗಳ ಅಧ್ಯಯನ ಮಾಡುತ್ತಾ ಸಮಾಜಕ್ಕೆ ನಮ್ಮದೇ ಆದ ಕೊಡುಗೆಯನ್ನು ನೀಡಿ ಧರ್ಮರಕ್ಷಣೆಗೆ ಎಲ್ಲರೂ ಮುಂದಾಗಬೇಕು ಈ ನಿಟ್ಟಿನಲ್ಲಿ ಜ್ಞಾನಾರ್ಜನೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದರು.

ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಪ್ರವಚನ ನೀಡಿದ ಶ್ರೀ ಆದಿಚುಂಚನಗಿರಿ ಪೀಠದ  ಜಗದ್ಗುರು ಶ್ರೀ ನಿರ್ಮಲಾನಂದ ಸ್ವಾಮೀಜಿಗಳು ಧರ್ಮದ ರಕ್ಷಣೆಗಾಗಿ ಜ್ಞಾನಾರ್ಜನೆ ಹಾಗೂ ಧರ್ಮದ ಕುರಿತಾದ ವಿಚಾರವನ್ನು ಮನದಟ್ಟು ಮಾಡಿಕೊಳ್ಳುವುದು ಪ್ರತಿಯೊಬ್ಬ ಹಿಂದೂವಿನ ಕೆಲಸ. ಧರ್ಮಪ್ರಸಾರಕ್ಕಾಗಿ, ಧರ್ಮದ ಗ್ರಹಿಕೆಗಾಗಿ ನಾವು ಕೆಲ ಸಮಯವನ್ನಿಟ್ಟುಕೊಂಡಾಗ ಮಾತ್ರ ಸುಲಭವಾಗಿ ಧರ್ಮದ ಪ್ರಸರಣ ಜಗತ್ತಿನಾದ್ಯಂತ ಆಗುತ್ತದೆ ಎಂದರು. ಜ್ಞಾನವನ್ನು ಪಡೆಯಲು ಹಾಗೂ ಹೆಚ್ಚಿಸಿಕೊಳ್ಳಲು ಗುರುಗಳ ಅಗತ್ಯತೆಯಿದೆ ಅವರ ಮಾರ್ಗದರ್ಶನವೇ ಜೀವನದ ಬದಲಾವಣೆಗೆ ಪೂರಕವಾದುದು, ಈ ನಿಟ್ಟಿನಲ್ಲಿ ಗುರುವಿಗೆ ಎಲ್ಲಾ ವಿಚಾರಗಳಲ್ಲಿಯೂ ಮೊದಲ ಪ್ರಾಶಸ್ತ್ಯವನ್ನಿಟ್ಟು ಶರಣಾದಾಗ ಮಾತ್ರ ಸಕಲವೂ ಸುಲಭವಾಗಿ ಲಭಿಸುತ್ತದೆ ಎಂದರು ಹಾಗೂ ನೆರೆದಿದ್ದವರನ್ನು ಆಶೀರ್ವದಿಸಿದರು. 

ಈ ಧಾರ್ಮಿಕ ಸಭೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದ ಭಕ್ತ ಸಮೂಹ ಶ್ರೀಗಳ ಆಶೀರ್ವಚನಕ್ಕೆ ಅನುಗ್ರಹಿತರಾದರು. ಈ ಪ್ರವಚನದ ಅವಧಿಯಲ್ಲಿ ದೆಹಲಿ ಸರ್ವೋಚ್ಚ ನ್ಯಾಯಾಲಯದ ವಕೀಲರಾದ ಆರ್ ವೆಂಕಟರಮಣಿ, ವಿಜಯಲಕ್ಷ್ಮಿ, ಶ್ರೀ ಮಠದ ಆಡಳಿತಾಧಿಕಾರಿ ಚಂದ್ರಮೌಳೀಶ್ವರ, ಕಾರ್ಯದರ್ಶಿಗಳಾದ ಡಾ.ಉದಯಶಂಕರ್, ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿಡಿ ರಾಜೇಗೌಡ, ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾದ ಡಿ.ಎನ್ ಜೀವರಾಜ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.