ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ರಾಜ್ಯದ ಅನೇಕ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದ್ದು ಅಂತೆಯೇ ಇನ್ನು ಕೆಲ ದಿನಗಳ ಕಾಲ ಮಳೆ ಮುಂದುವರೆಯುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

ಇದನ್ನೂ ಓದಿ : ಶಿವಮೊಗ್ಗ : ಹರ್ಷನ ಹತ್ಯೆಯ ನಂತರ ಮತ್ತೋರ್ವ ಭಜರಂಗದಳ ಕಾರ್ಯಕರ್ತನ ಹತ್ಯೆಗೆ ರೂಪಿಸಿದ್ದ ಸ್ಕೆಚ್ ನ್ನು ವಿಫಲಗೊಳಿಸಿದ ಪೊಲೀಸರು

ಕಳೆದ ಕೆಲದಿನಗಳಿಂದ ಮಲೆನಾಡು ಭಾಗದಲ್ಲಿ ಭಾರಿ ಗುಡುಗು-ಸಿಡಿಲಿನ ಸಹಿತ ಮಳೆಯಾಗಿದ್ದು ಅಲ್ಲಲ್ಲಿ ಕೆಲ ಅವಘಡಗಳು ಸಂಭವಿಸಿದೆ. ಗುಡುಗು ಸಿಡಿಲಿನ ಆರ್ಭಟಕ್ಕೆ ಕೆಲವೆಡೆ ಪ್ರಾಣಿಗಳು ಸಾವನ್ನಪ್ಪಿದ್ದರೆ ಇನ್ನೂ ಕೆಲವೆಡೆಗಳಲ್ಲಿ ವಿದ್ಯುತ್, ಟಿವಿ ಕೇಬಲ್ ಸೇರಿದಂತೆ ಅನೇಕ ಸಮಸ್ಯೆಗಳನ್ನು ಸಾರ್ವಜನಿಕರು ಎದುರಿಸುವಂತಾಗಿದೆ. 

ಅಭ್ಯರ್ಥಿಗಳು ಈ ಕೆಳಕಂಡ ಲಿಂಕ್ ಮೂಲಕ ರಿಜಿಸ್ಟರ್ ಆಗಬಹುದು : https://forms.gle/PvypXpJerzDzsrfE9

ಮೇ 1ರವರೆಗೂ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವ ವನ್ನು ಇಲಾಖೆ ನೀಡಿದೆ, ಕೆಲ ಜಿಲ್ಲೆಗಳಲ್ಲಿ ಗಾಳಿ ಮಳೆಯು ಜೋರಾಗುವ ನಿರೀಕ್ಷೆಯಿದ್ದರೆ ಚಿಕ್ಕಮಗಳೂರು, ಕೊಡಗು ಸೇರಿದಂತೆ ಮಲೆನಾಡು ಭಾಗಗಳಲ್ಲಿ ಗುಡುಗು-ಮಿಂಚಿನ ಆರ್ಭಟ ಜೋರಾಗಿರಲಿದೆ ಎಂಬ ಮುನ್ಸೂಚನೆ ಲಭ್ಯವಾಗಿದೆ.

ಗುಡುಗು ಸಿಡಿಲಿನ ಆರ್ಭಟ ಜೋರಾಗಿರಲಿದ್ದು ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಈ ಸಮಯದಲ್ಲಿ ಬಯಲು ಪ್ರದೇಶಗಳಲ್ಲಿರದೆ ಮನೆಗಳನ್ನು ಆಶ್ರಯಿಸಿ ರಕ್ಷಣೆ ಪಡೆಯಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಮೇ ತಿಂಗಳ ಒಂದನೇ ತಾರೀಖಿನ ವರೆಗೆ ಮಳೆಯ ಮುನ್ಸೂಚನೆಯಿದೆ ಎಂಬ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.