ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಅಂದ್ರೆ ಮೊದಲು ನೆನೆಪಿಗೆ ಬರೋದೇ ಪ್ರಕೃತಿ, ಹಸಿರು, ಮರ-ಗಿಡಗಳು. ಮಲೆನಾಡಿನ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗದವರು ಯಾರಿದ್ದಾರೆ ಹೇಳಿ. ಪ್ರವಾಸ ಅಂತ ಬಂದ್ರೆ ಹೆಚ್ಚಿನವರ ಮೊದಲ ಚಾಯ್ಸ್ ಮಲೆನಾಡಿನ ಭಾಗಗಳೇ. ಇನ್ನು ಸಿನಿಮಾ, ಶೂಟಿಂಗ್ ಅಂತ ಬಂದ್ರೂ ಕೂಡ ಮಲೆನಾಡನ್ನ ಪ್ರಿಫರ್ ಮಾಡೋ ನಿರ್ದೇಶಕರ ಪಟ್ಟಿಯೇ ಕೊಡಬಹುದು. ಚಿಕ್ಕಮಗಳೂರಿನ ಗಿರಿ ವನಗಳ ಮಧ್ಯೆ ಅದೆಷ್ಟೋ ಚಿತ್ರಗಳ ಚಿತ್ರೀಕರಣ ನಡೆದಿವೆ. ಕನ್ನಡ ಮಾತ್ರವಲ್ಲ, ಇತರೆ ಭಾಷೆಗಳಲ್ಲೂ ನಮ್ಮ ಮಲೆನಾಡಿನ ಪ್ರಕೃತಿ ಸೌಂದರ್ಯವನ್ನ ತೋರಿಸಲಾಗಿದೆ. ಈಗ ಮಲೆನಾಡಿನಲ್ಲಿ ಚಿತ್ರೀಕರಣ ನಡೆಸಲು ಮತ್ತೊಬ್ಬ ನಿರ್ದೇಶಕರು ತುದಿಗಾಲಲ್ಲಿ ನಿಂತಿದ್ದಾರೆ.
ಅಂದ್ಹಾಗೇ ಈ ಡೈರೆಕ್ಟರ್ ಬೇರೆ ಯಾರೂ ಅಲ್ಲ, ಪ್ರಸಾದ್ ಕಂಠೀರವ. ಚಿಕ್ಕ ವಯಸ್ಸಿಂದ್ಲೂ ನಿರ್ದೇಶಕನಾಗೋ ಕನಸು ಕಂಡಿದ್ದ ಪ್ರಸಾದ್, ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪಿಆರ್‌ಕೆ ಯೂಟ್ಯೂಬ್ ಚಾನೆಲ್ ಸಬ್‌ಸ್ಕ್ರೈಬರ್‌ಗಳಿಗೆ ಇವರ ಪರಿಚಯ ಇದ್ದೇ ಇರುತ್ತೆ. ಇತ್ತೀಚೆಗಷ್ಟೇ ಇವರ ನಿರ್ದೇಶನದ, ಶೈನ್ ಶೆಟ್ಟಿ ಅಭಿನಯದ "ಥ್ಯಾಂಕ್ಯೂ" ಕಿರುಚಿತ್ರ ಪಿಆರ್‌ಕೆ ಬ್ಯಾನರ್‌ನಲ್ಲಿ ರಿಲೀಸ್ ಆಗಿ ಮನ್ನಣೆ ಗಳಿಸಿತ್ತು. "ಟ್ಯಾಕ್ಸಿ" , "ಟ್ರಾನ್ಸ್ಪರೆಂಟ್" , "ಮಾಸ್ಕ್" ಇವರ ಪ್ರಮುಖ ಕಿರುಚಿತ್ರಗಳು. ತಾವೇ ನಿರ್ದೇಶಿಸಿ ನಟಿಸಿದ್ದ ಹಾಸ್ಟೆಲ್ ಡೇಸ್ ಎಂಬ ವಿಡಿಯೋ ಸಾಂಗ್ ಕೂಡ ಭಾರಿ ಸದ್ದು ಮಾಡಿತ್ತು. ಅದರಲ್ಲಿ ಅವರ ಅಧ್ಯಾಪಕರೂ ನಟಿಸಿದ್ರು.
ಇತ್ತೀಚೆಗಷ್ಟೇ ರಿಲೀಸ್ ಆದ "ಸಂಗಮ ಸಮಾಗಮ" ಕಿರುಚಿತ್ರದಿಂದ ಹೆಸರುವಾಸಿಯಾಗಿರೋ ಇವರು ಈಗ ಮಲೆನಾಡಿನತ್ತ ಮುಖ ಮಾಡ್ತಿದ್ದಾರೆ. ಒಂದು ವಿನೂತನ ವಿಡಿಯೋ ಸಾಂಗ್ ಶೂಟ್‌ಗಾಗಿ ಮಲೆನಾಡಿನಲ್ಲಿ ಲೊಕೇಶನ್ ಹಂಟ್ ನಡೆದಿದೆ. ಸಂಚಾರಿಯೊಬ್ಬನ ಕಥೆ ಇದಾಗಿದೆ. ಮುಂಗಾರಿನ ಆರಂಭದಲ್ಲಿ ಚಿತ್ರೀಕರಣಕ್ಕೆ ತಯಾರಿ ನಡೆದಿದೆ. ಅಷ್ಟೇ ಅಲ್ಲದೇ ಇದೇ ವರ್ಷ ಫ್ಯೂಚರ್ ಫಿಲ್ಮ್ ನಿರ್ದೇಶಿಸೋ ಕನಸು ಕಂಡಿರೋ ಪ್ರಸಾದ್, ಮಲೆನಾಡಿನಲ್ಲೇ ಚಿತ್ರೀಕರಣಕ್ಕೆ ಸಿದ್ಧತೆ ನಡೆಸಿದ್ದಾರೆ.
ಅದೆಷ್ಟೋ ಕಥೆಗಾರರಿಗೆ ಮಲೆನಾಡೇ ಸ್ಫೂರ್ತಿಯ ಸೆಲೆ. ಕಾನನಗಳಲ್ಲೇ ಅದೆಷ್ಟೋ ಕಥೆ ಹುಟ್ಟಿವೆ. ಮಲೆನಾಡಿನ ಸೊಬಗು ಜನರನ್ನ ಹಿಡಿದಿಡುತ್ತೆ ಅನ್ನೋದ್ರಲ್ಲಿ ಇನ್ನೊಂದು ಮಾತಿಲ್ಲ. ಪದಗಳಲ್ಲಿ ವರ್ಣಿಸಲಾಗದ ಈ ಪ್ರಕೃತಿ ಮಡಿಲಲ್ಲಿ ಯಾವ್ಯಾವ ಚಿತ್ರಗಳು ಚಿತ್ರೀಕರಣ ಆಗುತ್ತೋ ಕಾದು ನೋಡ್ಬೇಕು.


.jpeg)
.jpeg)


0 Comments