ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಆನೆ ದಂತದಲ್ಲಿ ಚದುರಂಗದ ಪಾನ್ ತಯಾರಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವ ವ್ಯಕ್ತಿಯನ್ನು ಚಿಕ್ಕಮಗಳೂರಿನ ಕಲ್ಲುದೊಡ್ಡಿ ಸಿಐಡಿ ಪೊಲೀಸ್ ಅರಣ್ಯ ಸಂಚಾರಿದಳದ ಪೊಲೀಸರು ಬಂಧಿಸಿ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ : ಶೃಂಗೇರಿ/ಕೊಪ್ಪ: ಅರಣ್ಯ ಪ್ರದೇಶಕ್ಕೆ ಹಾಕಿದ್ದ ಬೇಲಿ ತೆರವಿಗೆ ತೆರಳಿದ್ದ ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ, ಪ್ರಕರಣ ದಾಖಲು
ಚಿಕ್ಕಮಗಳೂರು ನಗರದ ಖಾಸಗಿ ಬಸ್ ನಿಲ್ದಾಣದ ಸಮೀಪದಲ್ಲಿ ಸಕಲೇಶಪುರದ ಮೂಲದ ವ್ಯಕ್ತಿಯೋರ್ವ ಅಕ್ರಮವಾಗಿ ಆನೆದಂತದಿಂದ ಮಾಡಲ್ಪಟ್ಟ ಚದುರಂಗದಾಟದ ಪಾನ್ ಗಳನ್ನು, ಜಿಂಕೆಯ ತಲೆ ಬುರುಡೆ ಹಾಗೂ ಕೋಡುಗಳನ್ನು ಹೊಂದಿರುವುದು ಕಂಡುಬಂದಿದ್ದು ಆತನನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಸಂಚಾರಿದಳದ ಅಧಿಕರುವರ್ಗ ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಅಭ್ಯರ್ಥಿಗಳು ಈ ಕೆಳಕಂಡ ಲಿಂಕ್ ಮೂಲಕ ರಿಜಿಸ್ಟರ್ ಆಗಬಹುದು
https://forms.gle/PvypXpJerzDzsrfE9
ಚೆಸ್ ಆಟಕ್ಕೆ ಬಳಸುವ ಕಪ್ಪು ಬಿಳಿ ಬಣ್ಣದ 32 ಪಾನುಗಳು, ಜಿಂಕೆಯ ತಲೆ ಬುರುಡೆ ಹಾಗೂ ಅದರ ಕವಲೊಡೆದ ಜಿಂಕೆಯ ಕೊಂಬು, ಆನೆಯ ದಂತದಲ್ಲಿ ಕೆತ್ತಿರುವ ಪಾನ್ ಇಡುವ ಬಾಕ್ಸ್ ಹಾಗೂ ಪ್ಲಾಸ್ಟಿಕ್ ಚೀಲವನ್ನು ಅರಣ್ಯ ಸಂಚಾರಿದಳದ ಪೊಲೀಸರು ಬಂಧಿತನಿಂದ ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯನ್ನು ಸಕಲೇಶಪುರದ ಚಂಪಕ ನಗರದ ಮೆಲ್ವಿನ್ ಎಂದು ಗುರುತಿಸಲಾಗಿದ್ದು ಈತ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಈತನು ಅಕ್ರಮವಾಗಿ ಆನೆದಂತ ಹಾಗೂ ಜಿಂಕೆಯ ತಲೆಬುರುಡೆ, ಕೊಂಬನ್ನು ಹೊಂದಿದ್ದು ಆತನನ್ನು ವಶಕ್ಕೆ ಪಡೆದುಕೊಂಡು ಈ ಸಲುವಾಗಿ ಅರಣ್ಯ ಸಂಚಾರಿದಳದ ಸಿಐಡಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬಂಧಿತನಿಂದ ವಶಕ್ಕೆ ಪಡೆದ ಸ್ವತ್ತನ್ನು ಚಿಕ್ಕಮಗಳೂರು ಆರ್ ಎಫ್ ಓ ಅವರಿಗೆ ಹಸ್ತಾಂತರ ಮಾಡಲಾಗಿದ್ದು ಪ್ರಕರಣದ ಸಂಬಂಧ ತನಿಖೆ ಆರಂಭವಾಗಿದೆ. ಈ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಿಬ್ಬಂದಿಗಳಾದ ಹೆಚ್. ದೇವರಾಜ್, ದಿನೇಶ್, ಕೆ. ದಿವಾಕರ, ದಿಲೀಪ, ಹಾಲೇಶ, ಹೇಮಾವತಿ, ತಿಮ್ಮಶೆಟ್ಟಿ ಇದ್ದರು.
ತನು ಕೊಟ್ಟಿಗೆಹಾರ, ವರದಿಗಾರರು





0 Comments