ಕೊಡಗು : (ನ್ಯೂಸ್ ಮಲ್ನಾಡ್ ವರದಿ) ತಂದೆಯನ್ನು ಕೆಲಸಕ್ಕೆ ಕಳುಹಿಸುವ ಸಲುವಾಗಿ ಬಾಯ್ ಹೇಳಲು ಬಂದಿದ್ದ ಪುಟ್ಟ ಮಗು ಆಯತಪ್ಪಿ ಮಹಡಿಯಿಂದ ಬಿದ್ದು ದಾರುಣವಾಗಿ ಪ್ರಾಣ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. 

ಇದನ್ನೂ ಓದಿ : ಶೃಂಗೇರಿಯಿಂದ ಮಂಗಳೂರಿಗೆ ತೆರಳುತ್ತಿದ್ದ ನಿಶ್ಮಿತ ಬಸ್ ಪಲ್ಟಿ 20 ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ

ಕೊಡಗಿನ ವಿರಾಜಪೇಟೆ ಸಮೀಪದ ಗೌರಿಕೆರೆ ನಿವಾಸಿಗಳಾದ ಮುನೀರ್ ಹಾಗೂ ಫೌಜಿಯಾ ದಂಪತಿಗಳ ಪುತ್ರ ನಾಲ್ಕು ವರ್ಷ ಪ್ರಾಯದ ಬಾಲಕ ತಸ್ಲೀನ್ ಮೃತ ಪಟ್ಟಮಗು. ಮಗುವು ತನ್ನ ತಂದೆ ಮುನೀರ್ ಕಾರ್ಯನಿಮಿತ್ತ ಹೊರಹೋಗುವ  ಸಂದರ್ಭದಲ್ಲಿ ಬಾಯ್ ಹೇಳಲೆಂದು ಹೊರಬಂದಿದ್ದು ಆಯತಪ್ಪಿ ಮಹಡಿಯಿಂದ ಕೆಳಬಿದ್ದಿದೆ. ಕೂಡಲೇ ರಕ್ಷಣೆ ಮಾಡಲೆಂದು ಮಗುವಿನ ತಂದೆ ಧಾವಿಸಿದರು ಕೂಡ ಯಾವುದೇ ಪ್ರಯೋಜನವಾಗಲಿಲ್ಲ. ಮಗುವಿನ ತಂದೆಯೂ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. 

ಮೊದಲನೇ ಮಹಡಿಯಿಂದ ಬಿದ್ದ ಮಗುವಿನ ತಲೆಯ ಭಾಗಕ್ಕೆ ಗಂಭೀರವಾಗಿ ಗಾಯವಾಗಿದ್ದು ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು ಆದರೂ ಯಾವುದೇ ಪ್ರಯೋಜನವಾಗದೇ ಮಗು ಗಂಭೀರವಾಗಿ ಗಾಯಗೊಂಡ ಕಾರಣ ಕೊನೆಯುಸಿರೆಳೆದಿದೆ.

ಈ ಸಂಬಂಧ ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಸಂಬಂಧ ಮಾಹಿತಿ ಪಡೆಯುತ್ತಿದ್ದಾರೆ. ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಜೋರಾಗಿದ್ದು ಸಂಬಂಧಿಕರು ಹಾಗೂ ನೆರೆಹೊರೆಯವರು ಪೋಷಕರಿಗೆ ಸಾಂತ್ವಾನ ಹೇಳುತ್ತಿದ್ದಾರೆ.