ಬಾಳೆಹೊನ್ನೂರು : (ನ್ಯೂಸ್ ಮಲ್ನಾಡ್ ವರದಿ) ಹಿಂದೂ ಧರ್ಮದ ಪ್ರತಿಪಾದನೆಗಾಗಿ ಧರ್ಮದ ಉಳಿವಿಗಾಗಿ ಧಾರ್ಮಿಕ ಕೇಂದ್ರಗಳ ರಕ್ಷಣೆಗಾಗಿ ರಾಜಕೀಯ ಶಕ್ತಿ ಅನಿವಾರ್ಯ, ಈ ಕಾರಣದಿಂದಾಗಿ ಹಾಗೂ ಹಿಂದೂ ಕಾರ್ಯಕರ್ತರ ರಕ್ಷಣೆಗಾಗಿ ಹಿಂದೂ ಬ್ರಿಗೇಡ್ ಸ್ಥಾಪನೆ ಮಾಡಿರುವುದಾಗಿ ಗೋರಿಗಂಡಿ ಚಂದ್ರಶೇಖರ್ ತಿಳಿಸಿದರು.
ಈ ಕುರಿತು ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು ಹಿಂದೂ ಧರ್ಮದ ಪ್ರತಿಪಾದನೆ ಮಾಡುವ ಹಿಂದೂಗಳ ರಕ್ಷಣೆಗೆ, ಹಿಂದೂಗಳ ಧಾರ್ಮಿಕ ಕೇಂದ್ರಗಳ ರಕ್ಷಣೆಗೆ ಹಾಗೂ ಕಾರ್ಯಕರ್ತರ ಉಳಿವಿಗೆ ರಾಜಕೀಯ ಶಕ್ತಿಯು ಅತ್ಯಾವಶ್ಯಕ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಖರ ಹಿಂದೂ ಪ್ರತಿಪಾದಕರನ್ನು ಆಯ್ಕೆಯಾಗುವಂತೆ ಮಾಡಿ, ನಡೆಸುವ ಆಡಳಿತದಲ್ಲಿ ಪ್ರಖರ ಹಿಂದುತ್ವಕ್ಕೆ ಒತ್ತು ನೀಡುವುದು ಈ ಮೂಲಕ ಹಿಂದೂ ಧರ್ಮದ ಪ್ರತಿಪಾದನೆ ಮಾಡುವುದು ಹಿಂದೂ ಬ್ರಿಗೇಡ್ ನ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.
ಅಭ್ಯರ್ಥಿಗಳು ಈ ಕೆಳಕಂಡ ಲಿಂಕ್ ಮೂಲಕ ರಿಜಿಸ್ಟರ್ ಆಗಬಹುದು :https://forms.gle/PvypXpJerzDzsrfE9
ಹಿಂದೂ ಧರ್ಮವು ಯಾವ ಸಮಯದಲ್ಲಿ ಕ್ಷೀಣಿಸುವ ಹಂತಕ್ಕೆ ತಲುಪಿತ್ತೋ ಆ ಸಂದರ್ಭದಲ್ಲಿ ಧರ್ಮೋದ್ಧಾರಕರು ಪುಣ್ಯಭೂಮಿ ಶೃಂಗೇರಿಯಿಂದಲೇ ಅವತಾರ ತಳೆದ ಅದೆಷ್ಟೋ ಉದಾಹರಣೆಗಳು ನಮ್ಮ ಮುಂದಿದೆ, ಆದ ಕಾರಣ ಅವರ ಹಾದಿಯಲ್ಲೇ ನಾವು ಮುಂದುವರಿಯುತ್ತಿದ್ದೇವೆ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಧ್ಯೇಯೋದ್ದೇಶವನ್ನು ಪ್ರತಿನಿಧಿಸುವುದು, ಬಜರಂಗದಳ, ಹಿಂದೂ ಜಾಗರಣ ವೇದಿಕೆ ಶ್ರೀರಾಮಸೇನೆಯಂತಹ ಹಿಂದೂ ಕಾರ್ಯಕರ್ತರ ರಕ್ಷಣೆಗೆ ನಿಲ್ಲುವುದು ನಮ್ಮ ಸಂಘಟನೆಯ ಮುಖ್ಯ ಉದ್ದೇಶವಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು ಮತ್ತು ಈ ಉದ್ದೇಶದಿಂದಾಗಿ ಕ್ಷೇತ್ರ ಮಟ್ಟದ ಸಮಿತಿ ರಚನೆಯಾಗಿದ್ದು ಈ ಸಮಿತಿಯ ಅಧ್ಯಕ್ಷರಾಗಿ ನಾರಾಯಣ್ ಬೆಂಡೆಹಕ್ಲು, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ್ ಗೌರಿಗಂಡಿ, ವಕ್ತಾರರಾಗಿ ಸುರಗೋಡು ಕೃಷ್ಣಮೂರ್ತಿ, ಸಂಚಾಲಕರಾಗಿ ಶ್ರೀಪತಿ ಪ್ರಭು, ಉಪಾಧ್ಯಕ್ಷರಾಗಿ ಶ್ರೀನಿವಾಸ ಶೆಟ್ಟಿ, ರಜಿತ್ ಗುಡ್ಡೆಕೊಪ್ಪ, ಕಾರ್ಯದರ್ಶಿಯಾಗಿ ಹೊಸೂರು ವೆಂಕಟೇಶ್ ಭಟ್, ಮೋಹನ್ ಕೊಪ್ಪ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ ಎಂದು ಸಮಿತಿಯ ವತಿಯಿಂದ ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲಿ ರಾಜಕೀಯ ರಂಗದಲ್ಲಿ ಹಿಂದುತ್ವ ಜಾಗೃತಿ, ಪ್ರಬಲ ಹಿಂದೂ ನಾಯಕರನ್ನು ಸೃಷ್ಟಿಸುವುದು ಹಾಗೂ ಆಯ್ಕೆ ಮಾಡುವುದು ಸಮಿತಿಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಮುಂದಿನ ವಿಧಾನಸಭಾ ಚುನಾವಣೆ ಸಹ ಸಮೀಪಿಸುತ್ತಿದ್ದು ಈ ಸಮಿತಿಯ ರಚನೆಯಿಂದ ಒಟ್ಟಾರೆಯಾಗಿ ಶೃಂಗೇರಿ ಕ್ಷೇತ್ರದ ರಾಜಕೀಯ ವಲಯದಲ್ಲಿ ಮತ್ತೆ ಬಂಡಾಯದ ಅಲೆ ಎದ್ದಿದೆಯಾ ಎಂಬ ಅನುಮಾನಗಳು ವ್ಯಕ್ತವಾಗುತ್ತಿದೆ.
ಈ ಹಿಂದೆ 2018ರಲ್ಲಿ ಸಹ ಹಿಂದೂ ನಾಯಕತ್ವಕ್ಕೆ ಒತ್ತಾಯಕ್ಕೆ ಪ್ರಯತ್ನ ನಡೆದು ನಂತರ ಬಂಡಾಯ ಅಭ್ಯರ್ಥಿ ಕಣಕ್ಕಿಳಿದಿದ್ದರು. ಇದು ಚುನಾವಣೆ ಮೇಲೆ ಸಹ ಸಾಕಷ್ಟು ಪರಿಣಾಮ ಬೀರಿತ್ತು.





0 Comments