ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ರಾಜ್ಯಾದ್ಯಂತ ಹಿಜಾಬ್ ವಿವಾದದ ನಂತರದಲ್ಲಿ ಧರ್ಮ ಸಂಘರ್ಷ ಆರಂಭವಾಗಿದ್ದರೆ ಇತ್ತ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸಾಮರಸ್ಯದ ಮೂಲಕ ದಶಕಗಳ ವಿವಾದಿತ ಸ್ಥಳ ಮುಕ್ತಿ ಕಂಡಿದೆ. 

ಇದನ್ನೂ ಓದಿ : ಕಿಗ್ಗಾ ಜಾತ್ರೆ ; ಸರ್ವಧರ್ಮೀಯರಿಗೆ ಅಂಗಡಿ ಇಡಲು ಗ್ರೀನ್ ಸಿಗ್ನಲ್

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದ ಮುಖ್ಯ ಭಾಗದಲ್ಲಿದ್ದ ಶಿಲುಬೆಯೊಂದನ್ನು ಎರಡೂ ಕೋಮಿನವರುಅಧಿಕಾರಿಗಳಿಗೆ ಸಾಮರಸ್ಯದ ಬೆಂಬಲ ನೀಡಿ ವ್ಯಕ್ತಿಯ ಸಮಾಧಿಯನ್ನು ಹಾಗೂ ಅಲ್ಲಿದ್ದ ಶಿಲುಬೆಯನ್ನು ತೆರೆಯಲು ಸಹಕರಿಸಿದ್ದಾರೆ. ತನ್ಮೂಲಕ ಸಾಮರಸ್ಯಕ್ಕೆ ಸಾಕ್ಷಿಯಾಗಿದ್ದಾರೆ.

ಮೂಡಿಗೆರೆ ಬಸ್ ನಿಲ್ದಾಣದ ಎದುರಿನಲ್ಲಿದ್ದ ಸ್ಯಾಮುಯಲ್ ಸುಸ್ಮಾನ್ ಎಂಬ ವ್ಯಕ್ತಿಯ ಸಮಾಧಿಯ ತೆರವು ಕಾರ್ಯಾಚರಣೆಗೆ ಈ ಹಿಂದೆ ಅನೇಕ ಪ್ರಯತ್ನ ನಡೆದಿತ್ತು. ಆದರೆ ಈ ಸಂದರ್ಭದಲ್ಲಿ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ತೆರವು ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ನಿನ್ನೆ ಸಾಮರಸ್ಯದ ಮೂಲಕ ನಿನ್ನೆ ಈ ತೆರವು ಕಾರ್ಯಾಚರಣೆ ನಡೆಯಿತು. 

ಬಸ್ ನಿಲ್ದಾಣದ ಮುಂಭಾಗದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದ್ದ ಸಮಾಧಿಗೆ ಹಾಗೂ ಶಿಲುಬೆಗೆ ಕ್ರೈಸ್ತರ ಪೂಜಾ ವಿಧಿ ವಿಧಾನದಂತೆ ಕ್ರೈಸ್ತ ಧರ್ಮದವರು ಪೂಜೆ ಸಲ್ಲಿಸಿ ತೆರವು ಮಾಡಲು ಸಹಕಾರ ನೀಡಿದ್ದಾರೆ. 

ಪಟ್ಟಣ ಪಂಚಾಯತ್ ಸಿಬ್ಬಂದಿಗಳು ನಡೆಸಿದ ಈ ಕಾರ್ಯಕ್ಕೆ ಕ್ರೈಸ್ತ ಸಮುದಾಯದವರು ಕೈ ಜೋಡಿಸಿ ದಶಕಗಳ ವಿವಾದವನ್ನು ಸಾಮರಸ್ಯದ ಮೂಲಕ ಯಶಸ್ವಿಯಾಗಿ ಸಮಾಜವನ್ನು ಅಭಿವೃದ್ದಿ ಹಾಗೂ ಮುನ್ನಡೆಸಲು ಸಹಕಾರ ನೀಡಿ ಒಬ್ಬರಿಗೊಬ್ಬರು ಪರಸ್ಪರ ಸ್ಪಂದನೆ ಸಹಕಾರ ನೀಡಿದ್ದಾರೆ. ಈ ಕುರಿತು ಎಲ್ಲೆಡೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿದ್ದು ಈ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ. 

ತನು ಕೊಟ್ಟಿಗೆಹಾರ,ವರದಿಗಾರರು