ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಜನಪರ ಒಕ್ಕೂಟದ ವತಿಯಿಂದ ಮಲೆನಾಡಿಗರನ್ನು ಉಳಿಸಿ ಎಂಬ ಶೀರ್ಷಿಕೆಯಡಿ ವಿಶೇಷ ಸಭೆ ನಡೆಯಿತು. ಈ ಸಭೆಯಲ್ಲಿ ಹೋರಾಟದ ಮುಂದಿನ ಹೆಜ್ಜೆಗಳ ಕುರಿತು ಚರ್ಚೆ ನಡೆಯಿತು. ಮುಂಬರುವ ದಿನಗಳಲ್ಲಿ ಜಾಥಾ ಹಾಗೂ ಮುಷ್ಕರ ನಡೆಸುವ ಸಲುವಾಗಿ ಪದಾಧಿಕಾರಿಗಳು ಸಾರ್ವಜನಿಕರ ಅಭಿಪ್ರಾಯದೊಂದಿಗೆ ನಿರ್ಧರಿಸಿದ್ದು, ಸಹಿ ಸಂಗ್ರಹದ ಬೃಹತ್ ಆಂದೋಲನದ ಮೂಲಕ ಈ ಹೋರಾಟ ಚಾಲನೆಗೊಳ್ಳಲಿದೆ.
ಇದನ್ನೂ ಓದಿ : ಹರಿಹರಪುರ : ಮೈಮೇಲೆ ವಾಹನ ಹರಿದು ನರಳಾಡಿ ಸಾವನ್ನಪ್ಪಿದ ಹೆಬ್ಬಾವು
ಮಲೆನಾಡು ಕೇವಲ ನೋಡಲು ಮಾತ್ರ ಚೆಂದ ಆದರೆ ಇಲ್ಲಿನ ಜನರು ಎದುರಿಸುತ್ತಿರುವ ಗಂಭೀರ ಸಮಸ್ಯೆಯನ್ನು ಬಗೆಹರಿಸಲು ಯಾವುದೇ ರಾಜಕೀಯ ವ್ಯಕ್ತಿಗಳಿಗೆ ಸಾಧ್ಯವಾಗಿಲ್ಲ ಈ ಕುರಿತು ಜಾಥಾ ಹಾಗೂ ಮುಷ್ಕರದ ಮೂಲಕ ಸರ್ಕಾರದ ಗಮನ ಸೆಳೆದು ಮಲೆನಾಡಿಗರಿಗೆ ಜೀವನವನ್ನು ಕಟ್ಟಿಕೊಡುವ ಹೋರಾಟವೇ ಮಲೆನಾಡಿಗರನ್ನು ಉಳಿಸಿ ಎಂದು ಈ ಹೋರಾಟದ ನೇತೃತ್ವವಹಿಸಿರುವ ಅನಿಲ್ ಹೊಸಕೊಪ್ಪ ಅವರು ತಿಳಿಸಿದರು.
ಮಲೆನಾಡಿನ ಜನರ ಮೇಲೆ ಅರಣ್ಯ ಇಲಾಖೆ ವ್ಯಾಪಕವಾದ ದೌರ್ಜನ್ಯ ಎಸಗಿದೆ. ಬದುಕು ಕಟ್ಟಿಕೊಳ್ಳಲು ಯಾರೂ ನೆರವಾಗುತ್ತಿಲ್ಲ. ಮುಂಬರುವ ವರ್ಷಗಳಲ್ಲಿ ಈ ಅವೈಜ್ಞಾನಿಕ ಕಾಯ್ದೆ ಹಾಗೂ ಕೃಷಿ ಕ್ಷೇತ್ರದಲ್ಲಿ ಉಂಟಾಗುತ್ತಿರುವ ಈ ಮಾರಕ ರೋಗಗಳಿಂದ ಮಲೆನಾಡಿಗರು ಬೀದಿಗೆ ಬಂದು ಶೃಂಗೇರಿಗೆ ಬರುವ ಪ್ರವಾಸಿಗರ ಬಳಿ ಭಿಕ್ಷೆ ಬೇಡಿ ಜೀವನ ನಡೆಸುವ ದಿನಗಳು ಬರಲಿದೆ ಆದ ಕಾರಣ ಕೂಡಲೇ ಸರ್ಕಾರ ಹಾಗೂ ಅಧಿಕಾರಿಗಳು ಎಚ್ಚೆತ್ತು ಜನರ ಸಮಸ್ಯೆಗಳನ್ನು ಬಗೆಹರಿಸಿ ಜನರ ಧ್ವನಿಯಾಗಬೇಕೆಂದು ಪರಿಸರವಾದಿ ಹಾಗೂ ಹೋರಾಟಗಾರ ಕಲ್ಕುಳಿ ವಿಠ್ಠಲ್ ಹೆಗ್ಡೆ ಅವರು ನೆರೆದವರನ್ನುದ್ದೇಶ್ಸಿಸಿ ಮಲೆನಾಡಿನ ಸಮಸ್ಯೆಗಳ ಕುರಿತು ವಿಸ್ಕೃತವಾಗಿ ಮಾತನಾಡಿದರು.
ಈ ಸಭೆಯ ಕುರಿತು ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕರಾದ ಮಧು ಬಂಗಾರಪ್ಪ ನಿಮ್ಮ ಹೋರಾಟಕ್ಕೆ ಸದಾ ನಾನು ಬೆಂಬಲ ನೀಡುತ್ತೇನೆ ಈ ಸಮಸ್ಯೆ ಚಿಕ್ಕಮಗಳೂರು, ಶಿವಮೊಗ್ಗ,ಹಾಸನ,ಕೊಡಗು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ವ್ಯಾಪಿಸಿದೆ. ನಾವು ಒಗ್ಗಟ್ಟಾಗಿ ಹೋರಾಟ ನಡೆಸಿದಾಗ ಮಾತ್ರ ಈ ಸಮಸ್ಯೆಗಳು ಬಗೆಹರಿಯಲು ಸಾಧ್ಯ ಈ ನಿಟ್ಟಿನಲ್ಲಿ ನಡೆಯುವ ಎಲ್ಲಾ ಕಾರ್ಯಗಳಿಗೂ ಮತ್ತು ಹೋರಾಟಕ್ಕೂ ಸಿದ್ಧವಿರುವುದಾಗಿ ನೆರೆದವರಲ್ಲಿ ತಿಳಿಸಿದರು.
ಈ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ ಹೋರಾಟ ನಡೆಸಿದಾಗ ಮಾತ್ರ ಅತೀ ಚುರುಕಾಗಿ ಸಮಸ್ಯೆಗಳಿಗೆ ಉತ್ತರ ಲಭಿಸುತ್ತಾ ಹೋಗುತ್ತದೆ ಈ ಹಿಂದೆಯೂ ರಸ್ತೆಗಿಳಿದು ಒಗ್ಗಟ್ಟಿನಿಂದ ಹೋರಾಟ ನಡೆಸಿ ಪಡೆದುಕೊಂಡ ವಿಜಯದ ನಿದರ್ಶನಗಳಿವೆ. ಸರ್ಕಾರವನ್ನು ಬಡಿದೆಬ್ಬಿಸುವ ಕೆಲಸವನ್ನು ನಿರಂತರವಾಗಿ ಮಾಡಿದಾಗ ಮಾತ್ರ ಈ ಭಾಗದ ಜ್ವಲಂತ ಸಮಸ್ಯೆಗಳು ಪರಿಹಾರವಾಗಲಿದೆ ಈ ನಿಟ್ಟಿನಲ್ಲಿ ತನು,ಮನ,ಧನ ಈ ಮೂರನ್ನು ಅರ್ಪಣೆ ಮಾಡಿ ಹೋರಾಟದಲ್ಲಿ ಭಾಗಿಯಾಗುವುದಾಗಿ ತಿಳಿಸಿದರು.
ಮಲೆನಾಡು ಜನಪರ ಒಕ್ಕೂಟದ ಮುಖ್ಯ ಬೇಡಿಕೆಗಳು :
- ಮಲೆನಾಡಿನಲ್ಲಿ ಹೈನುಗಾರಿಕೆಗೆ ಒತ್ತು ನೀಡಲು ಕೆ.ಎಂ.ಎಫ್ ಹಾಲು ಶೇಖರಣಾ ಘಟಕವನ್ನು ಸ್ಥಾಪಿಸಬೇಕು.
- ಅಡಿಕೆಗೆ ಬಂದಿರುವ ಹಳದಿ ಎಲೆ ರೋಗಕ್ಕೆ ಔಷಧಿ ಕಂಡುಹಿಡಿಯಬೇಕು ಹಾಗೂ ಗೋರಕ್ ಸಿಂಗ್ ವರದಿ ಜಾರಿ ಮಾಡಿ ಪರಿಹಾರ ನೀಡಬೇಕು.
- ಫಾರಂ 53, 57, 94ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಜನರಿಗೆ ಹಕ್ಕು ಪತ್ರಗಳನ್ನು ನೀಡಬೇಕು. • ಸೊಪ್ಪಿನ ಬೆಟ್ಟವನ್ನು ಅರಣ್ಯ ವ್ಯಾಪ್ತಿಯಿಂದ ಕೈಬಿಟ್ಟು, ಆ ಪ್ರದೇಶದಲ್ಲಿ ವಾಸಿಸುವ ಹಾಗೂ ವ್ಯವಸಾಯ ಮಾಡುತ್ತಿರುವವರಿಗೆ ಹಕ್ಕು ಪತ್ರ ನೀಡಬೇಕು.
- ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಖಾಸಗಿ ಭೂಮಿಯನ್ನು ಖರೀದಿಸಿ ಅಥವಾ ಸರ್ಕಾರದ ಭೂಮಿಯಲ್ಲಾಗ ನಿವೇಶನ ರಹಿತರಿಗೆ ಬಡಾವಣೆ ನಿರ್ಮಿಸಬೇಕು.
- ಮಲೆನಾಡಿನ ಕೆಲವು ತಾಲ್ಲೂಕುಗಳಲ್ಲಿ ಕಂದಾಯ ಭೂಮಿಯನ್ನು ಸಂಪೂರ್ಣವಾಗಿ ಅರಣ್ಯ ಇಲಾಖೆ ಹಸ್ತಾಂತರ ಮಾಡಿದೆ. ಹಾಗಾಗಿ ಎಲ್ಲಿಯೂ ಒಂದು ಮನೆ ನಿರ್ಮಿಸಿ ಕೊಡಲು ಸರಕಾರಕ ಕಷ್ಟವಾಗಿರುವುದರಿಂದ ಅರಣ್ಯ ಇಲಾಖೆಯಿಂದ ಕಂದಾಯ ಭೂಮಿಯನ್ನು ಬಿಡಿಸಿಕೊಡಬೇಕು.
- ಕಸ್ತೂರಿರಂಗನ್ ವರದಿ ಹಾಗೂ ಹೆಚ್ಚುವರಿ ಹುಲಿ ಯೋಜನೆ, ಸ್ನೇಕ್ ಪಾರ್ಕ್ ಈ ರೀತಿಯ ಯೋಜನೆಗಳನ್ನು ಕೈಬಿಡಬೇಕು.
- ಜನ ವಾಸಿಸುವ ಸ್ಥಳದಲ್ಲಿ ಸರ್ಕಾರ ಹಾಗೂ ಎನ್.ಜಿ.ಓಗಳು ಹುಲಿ, ಚಿರತೆ, ಹಾವುಗಳನ್ನು ತಂದ ಬಿಡುವುದನ್ನು ನಿಲ್ಲಿಸಬೇಕು.
- ಮಲೆನಾಡಿನ ಯುವಕ ಯುವತಿಯರಿಗೆ ಉದ್ಯೋಗವನ್ನರಿಸಿಕೊಂಡು ಊರು ಬಿಡುತ್ತಿರುವುದರಿಂದ ಸರ್ಕಾರ ಮಲೆನಾಡಿನಲ್ಲೇ ಉದ್ಯಮಗಳಿಗೆ ಪ್ರೋತ್ಸಾಹಿಸಿ, ಉದ್ಯೋಗ ಸೃಷ್ಟಿ ಮಾಡಬೇಕು.
- ಜಿಲ್ಲಾ ಕೇಂದ್ರಗಳು ತಾಲ್ಲೂಕುಗಳಿಂದ ತುಂಬಾ ದೂರದಲ್ಲಿರುವುದರಿಂದ ತಾಲ್ಲೂಕಿನಲ್ಲಿ ಉಪ ಕೇಂದ್ರಗಳನ್ನು ತೆರೆಯಬೇಕು.


.jpeg)



.jpg)
.jpeg)

.jpeg)


0 Comments