ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ಪ್ರಯಾಣಿಕರೊಬ್ಬರಿಗೆ ಕಾಡಾನೆಯೊಂದು ರಸ್ತೆಯಲ್ಲಿ ಕಾಣಿಸಿಕೊಂಡು ಅತೀ ಸಮೀಪದ ಅಂತರದಿಂದ ಕಾಡಾನೆಯಿಂದ ಅವರು ಪಾರಾಗಿರುವ ಘಟನೆ ನಡೆದಿದೆ.

ಇದನ್ನೂ ಓದಿ : ತೀರ್ಥಹಳ್ಳಿ : ದಾಂಪತ್ಯ ಕಲಹ ಹಿನ್ನೆಲೆ ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ; ಆಸ್ಪತ್ರೆಗೆ ದಾಖಲು

ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವರಮನೆ ದೇವಸ್ಥಾನಕ್ಕೆ ಕುಟುಂಬದವರೊಂದಿಗೆ ತೆರಳಿ ಹಿಂಬರುತ್ತಿದ್ದ ಸಮಯದಲ್ಲಿ ಬಕ್ಕಿ ಗ್ರಾಮದ ಸುರೇಂದ್ರ ಎಂಬುವವರಿಗೆ ಕಾಡಾನೆ ಕಾಣಿಸಿಕೊಂಡಿದೆ.

ಕಾರಿನಲ್ಲಿದ್ದ ಅವರು ಕೂಡಲೇ ಕಾರಿನ ಹೆಡ್ ಲೈಟ್ ಆಫ್ ಮಾಡಿ ಕೆಲಸಮಯ ಸುಮ್ಮನೆ ಕಾರಿನಲ್ಲಿ ಕುಳಿತಿದ್ದಾರೆ, ಕಾರಿನ ಸಮೀಪವೇ ಬಂದು ಕೆಲಕಾಲ ನಿಂತಿದ್ದ ಆನೆಯು ಪುನಃ ಕಾಡಿಗೆ ಮರಳಿದೆ. ಅದೃಷ್ಟವಶಾತ್ ಯಾವುದೇ ತೊಂದರೆಗೆ ಸಿಲುಕದೆ ಸುರೇಂದ್ರ ಸೇರಿದಂತೆ ಕುಟುಂಬಸ್ಥರು ಆನೆ ದಾಳಿಗೊಳಗಾಗದೇ ಬಚಾವ್ ಆಗಿದ್ದಾರೆ. 

ಮಲೆನಾಡು ಭಾಗದಲ್ಲಿ ಆನೆದಾಳಿಯು ನಿರಂತರವಾಗಿದ್ದು ಅನೇಕರನ್ನು ಬಲಿಪಡೆದುಕೊಂಡಿದೆ. ಹೆಚ್ಚಾಗಿರುವ ಆನೆ ಸೇರಿದಂತೆ ಕಾಡು ಪ್ರಾಣಿಗಳ ದಾಳಿಗೆ ಗ್ರಾಮಸ್ಥರು ಚಿಂತೆಗೀಡಾಗಿದ್ದಾರೆ. ಆನೆಯಿಂದ ಯಾವುದೇ ಅಪಾಯಗಳು ಸಂಭವಿಸುವ ಮುನ್ನ ಅರಣ್ಯ ಇಲಾಖೆಯ ಅಧಿಕಾರಿಗಳು ಎಚ್ಚೆತ್ತು ಈ ಕುರಿತು ಸೂಕ್ತವಾದ ಹಾಗೂ ಪರಿಣಾಮಕಾರಿಯಾದಂತಹ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಕೋರಿದ್ದಾರೆ.