ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಹಣ ವಿಚಾರಕ್ಕೆ ಸಂಬಂಧಿಸಿದಂತೆ ಓರ್ವ ನನ್ನು ಬರ್ಬರವಾಗಿ ಚೂರಿಯಿಂದ ಹತ್ಯೆ ಗೈದಿರುವ ಘಟನೆ ಚಿಕ್ಕಮಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ನಗರದ ಕೋಟೆ ವೃತ್ತದ ಬಳಿ ಕ್ರಿಕೆಟ್ ಬೆಟ್ಟಿಂಗ್ ಹಣದ ಕುರಿತಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು ಗವನಹಳ್ಳಿ ಮೂಲದ 23 ವರ್ಷ ಪ್ರಾಯದ ಧ್ರುವರಾಜ್ ನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈಯಲಾಗಿದೆ.
ಹಣದ ವಿಚಾರವಾಗಿ ಮಾತನಾಡಲು ಕರೆಸಿ ಮಾರಕಾಸ್ತ್ರದಿಂದ ಬರ್ಬರವಾಗಿ ಯುವಕನನ್ನು ಹತ್ಯೆಗೈಯಲಾಗಿದೆ. ಚಿಕ್ಕಮಗಳೂರಿನ ವಸ್ತಾರೆ ಮೂಲದ ಧ್ರುವ ಅವರನ್ನು ಹತ್ಯೆಗೈದಿದ್ದು ಆತನಿಗಾಗಿ ಶೋಧ ಮುಂದುವರೆದಿದೆ. ಘಟನೆ ನಡೆಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ. ಘಟನೆಯ ಕುರಿತು ಮಾಹಿತಿ ಕಲೆ ಹಾಕುತ್ತಿದ್ದು ತನಿಖೆಯ ನಂತರವಷ್ಟೇ ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಮನೋರಂಜನೆಯ ಕ್ರೀಡೆಯಾಗಿರುವ ಕ್ರಿಕೆಟನ್ನು ನೋಡಿ, ಆಟವಾಡಿ ಆನಂದಿಸುವ ಬದಲು ಅಕ್ರಮವಾಗಿರುವ ಬೆಟ್ಟಿಂಗ್ ನಲ್ಲಿ ಭಾಗಿಯಾಗಿ ಯುವಕನ ಪ್ರಾಣವೇಹೋಗಿದೆ. ಕುಟುಂಬಕ್ಕೆ ಆಸರೆಯಾಗಿ ನಿಲ್ಲಬೇಕಿದ್ದ ಯುವಕನನ್ನು ಕಳೆದುಕೊಂಡಿರುವ ಪೋಷಕರು ಸ್ನೇಹಿತರ ವಲಯದವರು ಅತೀವ ಬೇಸರವನ್ನು ವ್ಯಕ್ತಪಡಿಸಿದ್ದಾರೆ.





0 Comments