ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆಯ ಪಕ್ಕಕ್ಕೆ ಉರುಳಿದ ಘಟನೆ ವರದಿಯಾಗಿದೆ. 

ಇದನ್ನೂ ಓದಿ : ವಿಶಾಲ್ ಬಸ್ ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ


ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಿಂದ ಕಾರ್ಕಳ, ಕುದುರೆಮುಖ, ಕಳಸ ಸಾಗುವ ಮಾರ್ಗವಾದ ಕೆರೆಕಟ್ಟೆಯ ಗಣಪತಿ ಕಟ್ಟೆ ದೇವಸ್ಥಾನದ ಸಮೀಪದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದ್ದು ವಾಹನದಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಬೇರೆ ವಾಹನಗಳ ಸವಾರರಿಂದ ಹಾಗೂ ಸ್ಥಳೀಯರ ಸಹಕಾರದಿಂದ ವಾಹನದಲ್ಲಿದ್ದವರನ್ನು ಮೇಲಕ್ಕೆತ್ತಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. 

ಈ ರಸ್ತೆಯು ಅತ್ಯಂತ ಕಡಿದಾಗಿದ್ದು ಮತ್ತು ತಿರುವುಮುರುವುಗಳು ಹೆಚ್ಚಿದ್ದು ಅಲ್ಲಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುತ್ತದೆ. 

ಈ ಮಾರ್ಗದ ಮೂಲಕ ವಾಹನಗಳಲ್ಲಿ ಸಂಚಾರ ಮಾಡುವವರು ರಸ್ತೆಯ ಮೇಲೆ ಹೆಚ್ಚಿನ ಗಮನವಿರಿಸಿ ಅತೀ ಕಡಿಮೆ ವೇಗದಲ್ಲಿ ಸುರಕ್ಷಿತವಾಗಿ ಪ್ರಯಾಣ ಮಾಡಬೇಕು. ಇಂದು ಬೆಳಗ್ಗೆಯಷ್ಟೇ ಈ ಮಾರ್ಗದಲ್ಲಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಉಂಟಾಗಿ ಬೈಕಿನಲ್ಲಿದ್ದ ಇಬ್ಬರು ಸವಾರರು ತೀವ್ರವಾಗಿ ಗಾಯಗೊಂಡಿದ್ದರು.