ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಉಸ್ತುವಾರಿ ಸಚಿವರಿಲ್ಲದೇ ಚಿಕ್ಕಮಗಳೂರು ಜಿಲ್ಲೆಯ ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯುತ್ತಿಲ್ಲ, ಕೇವಲ ಎರಡು ಮೂರು ತಿಂಗಳಿಗೆ ಒಬ್ಬರಂತೆ ಮಾಯವಾಗುತ್ತಿದ್ದಾರೆ ಎಂದು ಕಾಂಗ್ರೆಸ್ ನ ಕಾರ್ತಿಕ್ ಜಿ ಚೆಟ್ಟಿಯಾರ್ ಆರೋಪ ಮಾಡಿದ್ದಾರೆ.
ಇದನ್ನೂ ಓದಿ : 15 ವರ್ಷಗಳಿಂದ ಆಸ್ಪತ್ರೆ ಕಾಮಗಾರಿ ಪ್ರಗತಿಯಲ್ಲಿದೆ, ನಿಧಾನವಾಗಿ ಚಲಿಸಿ ! ಮುಖ್ಯಮಂತ್ರಿಗೆ ಶುಭಕೋರಿ ಬ್ಯಾನರ್ ಹಾಕಿದ ಶೃಂಗೇರಿ ಜನ
ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರು ಕೆಲ ತಿಂಗಳುಗಳಿಗಷ್ಟೆ ಸೀಮಿತವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಯಾವುದೇ ಕಾರ್ಯಗಳನ್ನು ಮಾಡದೇ ಜನರ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ದೊರೆಯದೇ ಜಿಲ್ಲೆಯ ಜನರ ಸ್ಥಿತಿ ಅತ್ಯಂತ ಕಠಿಣವಾಗಿದೆ. ಚಿಕ್ಕಮಗಳೂರು ಜಿಲ್ಲೆಯನ್ನು ಮತ್ತು ಜಿಲ್ಲೆಯ ಜನರನ್ನು ಬಿಜೆಪಿ ಸರ್ಕಾರ ಸಂಪೂರ್ಣ ಮರೆತಿದೆ, ಈ ಜಿಲ್ಲೆಯಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಯೋಜನೆಗಳು ನಡೆಯದೆ ಪ್ರಗತಿಯು ಶೂನ್ಯದ ಕಡೆಗೆ ಸಾಗುತ್ತಿದೆ ಎಂದು ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ಈಗಾಗಲೇ ನಾಲ್ವರು ಜಿಲ್ಲಾ ಉಸ್ತುವಾರಿ ಸಚಿವರು ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿಯಾಗಿ ಬಂದು ಹೋಗಿದ್ದಾರೆ ಆದರೆ ಅವರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ದಿನಸಿ ವಸ್ತುಗಳು, ಆಹಾರ ಪದಾರ್ಥ, ಔಷಧಿಗಳು, ಇಂಧನ, ಪ್ರಯಾಣದರ, ವಿದ್ಯುತ್ ದರ ಸೇರಿದಂತೆ ಎಲ್ಲಾ ವಸ್ತುಗಳ ಬೆಲೆಗಳು ದಿನೇದಿನೇ ಗಗನಕ್ಕೇರುತ್ತಿದೆ. ಇದನ್ನು ಸರಿದೂಗಿಸುವ ಬದಲು ಸರಕಾರದ ಮಂತ್ರಿಗಳು ಒಂದಿಲ್ಲೊಂದು ರೀತಿಯಲ ಆಪಾದನೆಗಳನ್ನು ಹೊತ್ತುಕೊಂಡು ಹೊರನಡೆಯುತ್ತಿರುವುದು ಬಿಜೆಪಿ ಸರಕಾರದ ಹಿನ್ನಡೆಯಾಗಿದೆ ಎಂದು ಅವರು ಆರೋಪಿಸಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ದಿನೇದಿನೆ ಹೆಚ್ಚುತ್ತಿದೆ, ಇದಕ್ಕೆ ಪರಿಹಾರ ಸರ್ಕಾರ ರೂಪಿಸಿಲ್ಲ. ಕಾಡಾನೆಗಳ ಹಾವಳಿಯಿಂದ ಜನ ಕಂಗಾಲಾಗಿದ್ದಾರೆ. ಹುಲಿ ಚಿರತೆ ಕಾಡು ಪ್ರಾಣಿಗಳಿಗೆ ಹೆದರಿ ಜನರು ದಿನ ದುಡುತ್ತಿದ್ದಾರೆ. ಅಲ್ಲದೆ, ಜಿಲ್ಲೆಯ ಬಹುತೇಕ ರಸ್ತೆಗಳು ಹದಗೆಟ್ಟು ಹೋಗಿವೆ. ಹಲವೆಡೆ ಕುಡಿಯುವ ನೀರಿಗಾಗಿ ಜನರು ಆಹಾಕಾರ ಎಬ್ಬಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರು ಇಲ್ಲದೆ ಚಿಕ್ಕಮಗಳೂರು ಜಿಲ್ಲೆಯು ಅನಾಥವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮುಂಬರುವ ದಿನಗಳಲ್ಲಿ ಜನ ವಿರೋಧಿನಡೆ ನಡೆಸುತ್ತಿರುವ ಬಿಜೆಪಿ ಸರ್ಕಾರಕ್ಕೆ ಮತದಾರರು ಪಾಠ ಕಲಿಸುತ್ತಾರೆ ಎಂದರು.
ಶೃಂಗೇರಿ : ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಸಲುವಾಗಿ ಹಾಗೂ ಅವರ ಕೌಶಲ್ಯವನ್ನು ವೃದ್ಧಿಸುವ ಸಲುವಾಗಿ ಹಿಂದೂ ಸೇವಾ ಪ್ರತಿಷ್ಠಾನದ ವತಿಯಿಂದ ಉಚಿತ ಎಂಬ್ರಾಯ್ಡರಿ ತರಬೇತಿ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮ ಶೃಂಗೇರಿಯಲ್ಲಿ ನಡೆಯಿತು.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಿಂದೂ ಸೇವಾ ಪ್ರತಿಷ್ಠಾನ ಶೃಂಗೇರಿ ತಾಲೂಕು ಇವರ ವತಿಯಿಂದ ನಡೆದ ಉಚಿತ ಎಂಬ್ರಾಯ್ಡರಿ ತರಬೇತಿ ಕೇಂದ್ರ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಮಹಿಳೆಯರ ಸ್ವಾವಲಂಬನೆಯ ದೃಷ್ಟಿಯಿಂದ ಹಿಂದೂ ಸೇವಾ ಪ್ರತಿಷ್ಠಾನ ಈ ಹಿಂದಿನಿಂದಲೂ ಕೂಡ ವಿವಿಧ ತರಬೇತಿಗಳನ್ನು ನೀಡುತ್ತಾ ಬಂದಿದ್ದು ಅಂತೆಯೇ ಈ ಬಾರಿ ಮಹಿಳೆಯರ ಸ್ವಾವಲಂಬನೆಯ ಜೊತೆಗೆ ಅತ್ಯುತ್ತಮ ಕೌಶಲ್ಯಗಳನ್ನು ವೃದ್ಧಿಸುವ ಸಲುವಾಗಿ ಹಾಗೂ ವೈಯುಕ್ತಿಕ ಹಾಗೂ ಸಮಾಜದ ನೆಲೆಗಟ್ಟಿನಲ್ಲಿ ಅವರನ್ನು ಸದೃಢವಾಗಿಸುವ ಸಲುವಾಗಿ ಹಿಂದೂ ಸೇವಾ ಪ್ರತಿಷ್ಠಾನ ಎಂಬ್ರಾಯ್ಡರಿ ತರಬೇತಿ ಆರಂಭಿಸಿದೆ ಎಂಬುದಾಗಿ ಸಂಘಟಕರು ತಿಳಿಸಿದರು. ಮಹಿಳೆಯರು ಸ್ವಾವಲಂಬಿ ಜೀವನದ ಜೊತೆಗೆ ಸಮಾಜದ ಒಳಿತಿಗಾಗಿ ಹೆಜ್ಜೆಯಿಡುವುದು ಹಿಂದೂ ಸೇವಾ ಪ್ರತಿಷ್ಠಾನದ ಆಶಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ವ್ಯವಸ್ಥಾ ಪ್ರಮುಖರಾದ ಶ್ರೀ ಕೃಷ್ಣಮೂರ್ತಿ, ಹಿರಿಯರಾದ RI ಕೃಷ್ಣಪ್ಪನವರು, ಮಹಾಬಲ ಬೀಡೆಯವರು, ತಾಲೂಕು ಸಂಯೋಜಕರಾದ ನೂತನ ಸೂರ್ಯ, ಅನಿರುಧ್ ಕೊರಡಕಲ್, ಸುಮಂಗಲ ಕಲ್ಕಟ್ಟೆ, ಹಿರಿಯ ಸ್ವಯಂಸೇವಕರಾದ ಎ.ಎಸ್ ನಯನ, ಸನಾತನ ಸುನೀಲ್ ಖಾಂಡ್ಯ ಉಪಸ್ಥಿತರಿದ್ದರು.

.jpeg)
.jpeg)
.jpeg)
.jpeg)
.jpeg)

.jpeg)

.jpeg)
.jpeg)

0 Comments