ಬೇಲೂರು : (ನ್ಯೂಸ್ ಮಲ್ನಾಡ್ ವರದಿ) ಬೇಲೂರಿನ ಚೆನ್ನಕೇಶವ ದೇವರಿನ ರಥೋತ್ಸವಕ್ಕು ಹಾಗೂ ಮುಸಲ್ಮಾನರ ಧಾರ್ಮಿಕ ಗ್ರಂಥ ಕುರಾನ್ ಗೂ ಏನು ಸಂಬಂಧ ಎಂದು ಶ್ರೀ ರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. 

ಈ ಕುರಿತು ಬೇಲೂರಿನ ಶ್ರೀ ರಾಮ ಸೇನಾ ತಾಲೂಕು ಘಟಕದ ಉದ್ಘಾಟನಾ ಸಮಯದಲ್ಲಿ ಮಾತನಾಡಿದ ಅವರು ಬೇಲೂರಿನ ರಥೋತ್ಸವಕ್ಕೆ ಹಾಗೂ ಕುರಾನ್ ಅನ್ನು ದೇವರ ರಥೋತ್ಸವದ ಮುಂದೆ ಮಾತನಾಡುವುದಕ್ಕೆ ಏನು ಸಂಬಂಧವಿದೆ ಎಂದು ಪ್ರಶ್ನಿಸಿದ್ದಾರೆ. 

ರಥೋತ್ಸವದ ಸಂದರ್ಭದಲ್ಲಿ ಕುರಾನ್ ಓದುವುದಕ್ಕೆ ನಮ್ಮ ತೀವ್ರ ವಿರೋಧವಿದ್ದು ಈ ಸಂದರ್ಭದಲ್ಲಿ ಕುರಾನ್ ಓದುವುದರ ಅರ್ಥವಾದರೂ ಏನು ರಥೋತ್ಸವ ಹಾಗೂ ಕುರಾನ್ ಗೆ ಎಲ್ಲಿಯ ಸಂಬಂಧ ಎಂದು ಪ್ರಶ್ನಿಸಿದರು. ಹಾಗೂ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಎಚ್ಚರಿಕೆ ನೀಡಿರುವ ಅವರು ಮುಂದಿನ ವರ್ಷದಿಂದ ಬೇಲೂರು ಚನ್ನಕೇಶವ ರಥೋತ್ಸವದ ಸಂದರ್ಭದಲ್ಲಿ ಕುರಾನ್ ಪಠಣವಿದ್ದಲ್ಲಿ ಇದನ್ನು ತಡೆಯಲು ಶ್ರೀ ರಾಮ ಸೇನೆ ಸಿದ್ಧವಿದೆ ಆ ಸಂದರ್ಭದಲ್ಲಿ ನಡೆಯುವ ಪ್ರತಿಭಟನೆ ಹಾಗೂ ಹೋರಾಟಕ್ಕೆ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಎಚ್ಚರಿಸಿದರು.



ಈ ಕುರಿತು ಸರ್ಕಾರ ಚಿಂತಿಸಿ ಹಿಂದೂಗಳ ಪರವಾದ ನಿರ್ಣಯವನ್ನು ಮುಂಬರುವ ದಿನಗಳಲ್ಲಿ ಕೈಗೊಳ್ಳದೇ ಹೋದಲ್ಲಿ ಶ್ರೀ ರಾಮ ಸೇನೆಯ ವತಿಯಿಂದ ಮುಂದಿನ ವರ್ಷಗಳಲ್ಲಿ ಹೋರಾಟ ಕೈಗೆತ್ತಿಕೊಳ್ಳುವ ಎಚ್ಚರಿಕೆ ನೀಡಿದರು. ಧಾರ್ಮಿಕ ದತ್ತಿ ಇಲಾಖೆಯ ವಿರುದ್ಧ ಹರಿಹಾಯ್ದ ಅವರು ಮಂದಿರಗಳ ಸುತ್ತಲಿನ ಸ್ಥಳಗಳಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಬಾರದು ಎಂಬ ನಿಯಮವನ್ನು ಗಾಳಿಗೆ ತೂರಿ ಇಲ್ಲಿ ಅವಕಾಶ ನೀಡಲಾಗಿದೆ. ಚೆನ್ನಕೇಶವ ದೇವರ ಎದುರುಗಡೆಯಲ್ಲಿ ಓರ್ವ ಮುಸಲ್ಮಾನ ವ್ಯಕ್ತಿಯ ಅಂಗಡಿಯಿದೆ ಈ ಕುರಿತು ಅವಕಾಶ ನೀಡದೇ ಆಗಿರುವ ಲೋಪವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು. ಯಾವರೀತಿಯಾಗಿ ಮುಸಲ್ಮಾನರು ತಮ್ಮ ಮಸೀದಿ ಅಥವಾ ಅವರ ಧಾರ್ಮಿಕ ಕ್ಷೇತ್ರಗಳ ಮುಂದೆ ಹಿಂದೂ ಧರ್ಮೀಯರಿಗೆ ಅವಕಾಶ ನೀಡುವುದಿಲ್ಲವೋ ಅಂತೆಯೇ ಹಿಂದೂಗಳ ಧಾರ್ಮಿಕ ಕ್ಷೇತ್ರದ ಬಳಿ ಅವರಿಗೆ ವ್ಯಾಪಾರಕ್ಕೆ ಕಡಿವಾಣ ಹಾಕಬೇಕು ಎಂದರು.