ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಲೆಫ್ಟಿನೆಂಟ್ ಜನರಲ್ ಬಿಎಸ್ ರಾಜು ಅವರು ಭಾರತೀಯ ಸೇನೆಯ ನೂತನ ಉಪ ಮುಖ್ಯಸ್ಥರಾಗಿ ನೇಮಕಗೊಂಡಿದ್ದು, ಮೇ 1 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ : ಎಸ್.ಕೆ.ಬಾರ್ಡರ್ : ಕೆ ಕೆ ಬಿ ಬಸ್ ಹಾಗೂ ಲಾರಿ ನಡುವೆ ರಸ್ತೆ ಅಪಘಾತ

ಸೇನಾ ಉಪ ಮುಖ್ಯಸ್ಥರಾಗಿದ್ದ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅವರು ನೂತನ ಸೇನಾ ಮುಖ್ಯಸ್ಥರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರಿಂದ ತೆರವಾದ ಸ್ಥಾನಕ್ಕೆ ರಾಜು ಅವರನ್ನು ನೇಮಕ ಮಾಡಲಾಗಿದೆ.

ಅಭ್ಯರ್ಥಿಗಳು ಈ ಕೆಳಕಂಡ ಲಿಂಕ್ ಮೂಲಕ ರಿಜಿಸ್ಟರ್ ಆಗಬಹುದು : https://forms.gle/PvypXpJerzDzsrfE9

ಬಿ ಎಸ್ ರಾಜು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಸಮೀಪದ ಬಗ್ಗವಳ್ಳಿ ಗ್ರಾಮದ ಮೂಲದವರು. ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ದಾವಣಗೆರೆಯಲ್ಲಿ ಮಾಡಿದ ರಾಜು, ಬಿಜಾಪುರದ ಸೈನಿಕ ಶಾಲೆ ಮತ್ತು ಪುಣೆಯ National Defences Academyಯಲ್ಲಿ ಟ್ರೈನಿಂಗ್ ಪಡೆದು ಸೇನಾ ಜೀವನ ಆರಂಭಿಸಿದರು.

ಲೆಫ್ಟಿನೆಂಟ್ ಜನರಲ್ ರಾಜು ಅವರಿಗೆ ಸಂದ ಪ್ರಶಸ್ತಿಗಳು

• ಉತ್ತಮ ಯುದ್ಧ ಸೇವಾ ಪದಕ 

• ಅತಿ ವಿಶಿಷ್ಟ ಸೇವಾ ಪದಕ 

• ಯುದ್ಧ ಸೇವಾ ಪದಕ

• ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್, 

• ಸೌತ್ ವೆಸ್ಟರ್ನ್ ಕಮಾಂಡ್ ಕಮೆಂಡೇಶನ್ ಕಾರ್ಡ್

ಲೆಫ್ಟಿನೆಂಟ್ ಜನರಲ್ ರಾಜು ಅವರ ಕುರಿತಂತೆ ಒಂದಿಷ್ಟು..

• ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಸಮೀಪದ ಬಗ್ಗವಳ್ಳಿ ಗ್ರಾಮದದಲ್ಲಿ (Oct, 19, 1963) ಜನಸಿದರು. 

• ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜ್ , ವೆಲ್ಲಿಂಗ್ಟನ್ ಮತ್ತು ಯುನೈಟೆಡ್ ಕಿಂಗ್‌ಡಂನ ರಾಯಲ್ ಕಾಲೇಜ್ ಆಫ್ ಡಿಫೆನ್ಸ್ ಸ್ಟಡೀಸ್‌ನ ಪದವಿ ಪಡೆದಿದ್ದಾರೆ.

• ಕ್ಯಾಲಿಫೋರ್ನಿಯಾದ ಮಾಂಟೆರೆಯಲ್ಲಿ ನೌಕಾಪಡೆಯ ಸ್ನಾತಕೋತ್ತರ ಶಾಲೆಯಲ್ಲಿ ವ್ಯಾಸಂಗ

• ಭಯೋತ್ಪಾದನೆ ನಿಗ್ರಹದಲ್ಲಿ ಸ್ನಾತಕೋತ್ತರ ಪದವಿ

• ಡಿಸೆಂಬರ್ 1984 ರಲ್ಲಿ ಜಾಟ್ ರೆಜಿಮೆಂಟ್ ನ 11ನೇ ಬೆಟಾಲಿಯನ್ ಗೆ ನಿಯೋಜಿನೆಗೊಂಡರು.

• ನಂತರ ಅವರು ಜಾಟ್ ರೆಜಿಮೆಂಟ್ ನ 15 ನೇ ಬೆಟಾಲಿಯನ್ ಗೆ ಕಮಾಂಡರ್ ಆಗಿದ್ದರು

• 1984 ರಿಂದ ಐದು ವರ್ಷಗಳ ಕಾಲ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ್ದರಿಂದ ಆ ಭಾಗದ ಕುರಿತಂತೆ ಸಾಕಷ್ಟು ಅನುಭವ ಹೊಂದಿದ್ದಾರೆ.

• ಚಿನಾರ್ ಕಾರ್ಪ್ಸ್ ನ 49 ನೇ ಕಮಾಂಡರ್ ಆಗಿ 1, 2020 ರಿಂದ 17 ಮಾರ್ಚ್ 2021 ರವರೆಗೆ ಸೇವೆ ಸಲ್ಲಿಸಿದ್ದರು.

• 15 ಚಿನಾರ್ ಕೋರ್ ನ ಜನರಲ್ ಕಮಾಂಡಿಂಗ್ ಅಫೀಸರ್ ಆಗಿ ಸೇವೆ ಸಲ್ಲಿಸಿದ್ದಾರೆ. (ಪ್ರಸ್ತುತ ಶ್ರೀನಗರದಲ್ಲಿದಲ್ಲಿ ಹಾಗೂ ಕಾಶ್ಮೀರ ಕಣಿವೆಯಲ್ಲಿಯಲ್ಲಿರುವ ಈ ಪಡೆ ಮಿಲಿಟರಿ ಕಾರ್ಯಾಚರಣೆಗಳ ಜವಬ್ದಾರಿಯನ್ನು ಹೊತ್ತುಕೊಂಡಿದೆ)

ಸದ್ಯ ಲೆಫ್ಟಿನೆಂಟ್ ಜನರಲ್ ರಾಜು ಅವರು ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ನೇಮಕಗೊಂಡಿದ್ದು ನಾಳೆಯಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈಗಾಗಲೇ ಭೂಸೇನಾ ಮುಖ್ಯಸ್ಥರಾಗಿ ಜನರಲ್ ಪಾಂಡೆ ನೇಮಕಗೊಂಡಿದ್ದು ಅವರಿಂದ ತೆರವಾದ ಉಪ ಮುಖ್ಯಸ್ಥರ ಸ್ಥಾನಕ್ಕೆ Lt. Gen. ರಾಜು ನೇಮಕಗೊಂಡಿದ್ದಾರೆ. ನಮ್ಮ ಚಿಕ್ಕಮಗಳೂರಿನವರಾದ ಇವರು ಸೇನೆಯಲ್ಲೇ ಅತ್ಯನ್ನತ ಸ್ಥಾನಕ್ಕೇರಿದ್ದು ಇಡೀ ಕರುನಾಡೇ ಹೆಮ್ಮೆ ಪಡುವ ವಿಷಯ.

ವಿದ್ಯುತ್ ಶಾಕ್ ಗೆ ಒಳಪಟ್ಟು ಅಸುನೀಗಿದ 4 ವರ್ಷದ ಬಾಲಕಿ

ಶಿವಮೊಗ್ಗ : ಮನೆಯ ಬಳಿ ಆಟವಾಡುತ್ತಿದ್ದ ಬಾಲಕಿಗೆ ವಿದ್ಯುತ್ ಪ್ರವಹಿಸಿ ಮೃತಪಟ್ಟಿರುವ ದುರ್ಘಟನೆ ಸಂಭವಿಸಿದೆ. 

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹಿರಿಯೂರಿನಲ್ಲಿ ಮನೆಯ ಬಳಿ ಆಟವಾಡುತ್ತಿದ್ದ ನಾಲ್ಕು ವರ್ಷಪ್ರಾಯದ ಬಾಲಕಿ ಅಚಾನಕ್ಕಾಗಿ ವಿದ್ಯುತ್ ಕಂಬ ಮುಟ್ಟಿ ಅದರಲ್ಲಿ ಹರಿಯುತ್ತಿದ್ದ ವಿದ್ಯುತ್ ನ ಶಾಕ್ ಗೆ ಒಳಪಟ್ಟು  ಮೃತಪಟ್ಟಿದ್ದಾಳೆ. ಭದ್ರಾವತಿಯ ಹಿರಿಯೂರು ಸಂತೋಷ್ ಹಾಗೂ ಪೂಜಾ ದಂಪತಿಯ ಪುತ್ರಿ ಇಂಚರಾ ಮೃತ ಬಾಲಕಿ. 

ಬಟ್ಟೆ ಒಣಗಿಸುವ ಸಲುವಾಗಿ ಮನೆಯ ಸಮೀಪವಿದ್ದ ಕರೆಂಟ್ ಕಂಬಕ್ಕೆ ತಂತಿಯನ್ನು ಕಟ್ಟಲಾಗಿತ್ತು, ಅದರ ಮೇಲೆ ಡಿಶ್ ಕೇಬಲ್ ತುಂಡಾಗಿ ಬಿದ್ದ ಕಾರಣ ಗ್ರೌಂಡ್ ಆಗಿದೆ ಈ ಸಂದರ್ಭದಲ್ಲಿ ವಿದ್ಯುತ್ ಕಂಬವನ್ನು ಮುಟ್ಟಿದ ಬಾಲಕಿ ಕರೆಂಟ್ ಶಾಕ್ ಗೆ ಒಳಪಟ್ಟು ಅಸುನೀಗಿದ್ದಾಳೆ. 

ಮಲೆನಾಡು ಭಾಗದಲ್ಲಿ ನಿರಂತರವಾಗಿ ಗುಡುಗು ಸಹಿತ ಮಳೆಯಾಗುತ್ತಿರುವ ಕಾರಣ ಅಲ್ಲಲ್ಲಿ ಕೆಲ ಅವಘಡಗಳು ಸಂಭವಿಸುತ್ತಿದ್ದು ಜಾಗರೂಕತೆವಹಿಸಿ ಹೊರಾಂಗಣ ಹಾಗೂ ಒಳಾಂಗಣದಲ್ಲಿ ಶ್ರಮಿಸುವ  ಕಾರ್ಮಿಕರು ಕೆಲಸ ನಡೆಸಬೇಕೆಂದು ತಿಳಿಸಲಾಗಿದೆ.