ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಮುಸ್ಲಿಂ ವರ್ತಕರು ಚಿಕ್ಕಮಾಗರಹಳ್ಳಿಯಲ್ಲಿ ಜರುಗುವ ದೇವಿರಮ್ಮನ ಸುಗ್ಗಿ ಹಬ್ಬದಲ್ಲಿ ಮುಸ್ಲಿಮರಿಗೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಬಾರದು ಎಂಬ ಆಗ್ರಹ ಎದುರಾಗಿದೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಕ್ಷೇತ್ರದ ಶಾಸಕ ಸಿ.ಟಿ ರವಿ ಅವರ ಹುಟ್ಟೂರಾದ ಚಿಕ್ಕಮಾಗರಹಳ್ಳಿಯಲ್ಲಿ ನಡೆಯುವ ದೇವಿರಮ್ಮನ ಸುಗ್ಗಿ ಹಬ್ಬ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಂ ಸಮುದಾಯದ ವರ್ತಕರಿಗೆ ಅಂಗಡಿ ತೆರೆಯಲು ಅವಕಾಶ ನೀಡಬಾರದು ಎಂಬ ಆಗ್ರಹ ಸ್ಥಳೀಯರಿಂದ ಎದುರಾಗಿದೆ. ಈ ಜಾತ್ರೆಯಲ್ಲಿ ಮುಸ್ಲಿಮರಿಗೆ ವ್ಯಾಪಾರ ನಡೆಸಲು ಅವಕಾಶವಿಲ್ಲ ಎಂದು ಬೋರ್ಡ್ ಒಂದನ್ನು ಊರಿನ ಆರಂಭದಲ್ಲೇ ಅಳವಡಿಸಲಾಗಿದೆ. 

ಈ ನೆಲದ ಕಾನೂನನ್ನು ಗೌರವಿಸಿದ, ಹಿಂದೂಗಳು ಪೂಜಿಸುವ ಗೋವನ್ನು ಕೊಂದು ಆಹಾರವನ್ನಾಗಿ ಬಳಸಿಕೊಳ್ಳುವ ಹಾಗೂ ದೇಶದ ಅಖಂಡತೆಗೆ ಸವಾಲು ಎಸೆಯುವ ಮುಸ್ಲಿಂರ ಜೊತೆಗೆ ನಾವು ವ್ಯವಹಾರ ನಡೆಸುವುದಿಲ್ಲ ನಡೆಸಲು ಬಿಡುವುದಿಲ್ಲ ಎಂದು ಊರಿನ ಆರಂಭದಲ್ಲಿ ಬ್ಯಾನರ್ ಅಳವಡಿಕೆ ಮಾಡಲಾಗಿದೆ. 

ಹಿಂದಿನ ವರ್ಷಗಳ ಜಾತ್ರಾ ಅವಧಿಯಲ್ಲಿ ಈ ಭಾಗದ ಹಳ್ಳಿಗಳಲ್ಲಿ ಮುಸ್ಲಿಮರು ವ್ಯಾಪಾರ ವಹಿವಾಟು ನಡೆಸಿಕೊಂಡು ಬಂದಿದ್ದರು ಆದರೆ ಅಂದು ಹಿಜಾಬ್ ತೀರ್ಪನ್ನು ವಿರೋಧಿಸಿ ಬಂದ್ ಮಾಡಿದ ಕಾರಣ ಈ ಬಾರಿಯ ಜಾತ್ರೆಯಲ್ಲಿ ವ್ಯಾಪಾರ ವಹಿವಾಟಿಗೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಸ್ಥಳೀಯರು ನಿರ್ಬಂಧ ಹಾಕಿದ್ದಾರೆ.

ಒಟ್ಟಾರೆ ಹಿಜಾಬ್ ಗೊಂದಲದ ನಂತರ ಹಿಂದೂ ಮುಸ್ಲಿಮರ ನಡುವೆ ಒಂದಿಲ್ಲೊಂದು ವಿಚಾರವಾಗಿ ವ್ಯಾಪಾರ ನಿರ್ಬಂಧ, ಹಲಾಲ್ ನಿಷೇಧ ಹಿಂದೂಗಳ ಜೊತೆಗೆ ಮಾತ್ರ ವ್ಯಾಪಾರ ನಡೆಸಬೇಕೆಂಬ ಅಭಿಯಾನಗಳು ಆರಂಭವಾಗಿದೆ.