ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಭಾಗದ ಯುವಕ ಯುವತಿಯರಿಗೆ ಉದ್ಯೋಗ ಸೃಷ್ಟಿಸುವ ಸಲುವಾಗಿ ಅಮ್ಮ ಫೌಂಡೇಶನ್ ಮುಖಾಂತರ ಶ್ರೀ ಸುಧಾಕರ್ ಎಸ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯುವ ಬೃಹತ್ ಉದ್ಯೋಗ ಮೇಳದ ಅಂಗವಾಗಿ ವ್ಯಕ್ತಿತ್ವ ವಿಕಸನ ಹಾಗೂ ಇಂಟರ್ವ್ಯೂ ಸ್ಕಿಲ್ಸ್ ಶಿಬಿರ ಇಂದು ಶೃಂಗೇರಿ, ಕೊಪ್ಪ, ಹಾಗೂ ನರಸಿಂಹರಾಜಪುರದಲ್ಲಿ ನಡೆಯಿತು. 

ಅಮ್ಮ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಸುಧಾಕರ್ ಎಸ್ ಶೆಟ್ಟಿ ಅವರು ಮಲೆನಾಡು ಭಾಗದ ಯುವಕ ಯುವತಿಯರಿಗೆ ಹಾಗೂ ಉದ್ಯೋಗಾಸಕ್ತರಿಗೆ ಉದ್ಯೋಗ ನೀಡುವ ಸಲುವಾಗಿ ಆಯೋಜನೆ ಮಾಡಿರುವ ಈ ಬೃಹತ್ ಉದ್ಯೋಗ ಮೇಳದಲ್ಲಿ ಉದ್ಯೋಗ ಪಡೆಯುವ ಸಲುವಾಗಿ ಅನೇಕ ಉದ್ಯೋಗಾಸಕ್ತರು ಇಂದು ನಡೆದ ತರಬೇತಿ ಶಿಬಿರದಲ್ಲಿ ಪಾಲ್ಗೊಂಡರು.

ಮೂರು ತಾಲೂಕುಗಳಲ್ಲಿ ನಡೆದ ಈ ಶಿಬಿರದಲ್ಲಿ ಒಟ್ಟಾರೆ 500 ಕ್ಕೂ ಅಧಿಕ ಉದ್ಯೋಗಾಸಕ್ತರು ಪಾಲ್ಗೊಂಡು ಶಿಬಿರದ
ಸದುಪಯೋಗವನ್ನು ಪಡೆದುಕೊಂಡರು. ಈ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಇಂಟರ್ವ್ಯೂ ಸ್ಕಿಲ್ಸ್, ವ್ಯಕ್ತಿತ್ವ ವಿಕಸನ, ಪ್ರಸ್ತುತ ಇರುವ ಉದ್ಯೋಗಾವಕಾಶಗಳ ಕುರಿತು ಇನ್ಫೋಸಿಸ್ ಸಂಸ್ಥೆಯ ಹಿರಿಯ HRD ಆದ ಶ್ರೀಮತಿ ಇಂದು ರಾವ್ ಅವರು ನೀಡಿದರು. ಉದ್ಯೋಗಾವಕಾಶಗಳ ಕುರಿತು ಹಾಗೂ ಕಂಪನಿಗಳಲ್ಲಿ ಆಯ್ಕೆಗೊಳ್ಳುವ ಕುರಿತು ತಮಗಿದ್ದ ಗೊಂದಲಗಳನ್ನು ವಿದ್ಯಾರ್ಥಿಗಳು ತರಬೇತುದಾರರಲ್ಲಿ ಕೇಳಿ ಪರಿಹರಿಸಿಕೊಂಡರು. 

ಈ ಕುರಿತು ಮಾತನಾಡಿದ ಅಮ್ಮ ಫೌಂಡೇಶನ್ ಸಂಸ್ಥಾಪಕರಾದ ಸುಧಾಕರ್ ಎಸ್ ಶೆಟ್ಟಿ ಅವರು ವಿದ್ಯಾರ್ಥಿಗಳು ಉತ್ತಮವಾದ ಗುಣಗಳನ್ನು ಮೈಗೂಡಿಸಿಕೊಂಡು ಸಮಾಜದ ಉನ್ನತಿಗಾಗಿ ಶ್ರಮಿಸಬೇಕು, ಅಮ್ಮನ ಹೆಸರಿನಲ್ಲಿ ಫೌಂಡೇಶನ್ ಮಾಡಿರೋದು ಒಂದು ಹೆಮ್ಮೆಯ ವಿಚಾರವಾದರೆ ನಮ್ಮೂರಿನ ಒಂದಿಷ್ಟು ಯುವಕರಿಗೆ ಕೆಲಸ ಸಿಕ್ಕರೆ ನನಗೆ ಆತ್ಮ ತೃಪ್ತಿ ಸಿಗುತ್ತದೆ. ನಮ್ಮ ಹಳ್ಳಿ ಕಡೆಗಳ ವಿದ್ಯಾರ್ಥಿಗಳು ಕೃಷಿ ಕೆಲಸ ಮಾಡಿ ಶಾಲೆ ಕಾಲೇಜುಗಳಿಗೆ ತೆರಳುತ್ತಾರೆ ಆದರೆ ನಗರಗಳ ವಿದ್ಯಾರ್ಥಿಗಳು ಅವರದ್ದೇ ರೀತಿಯಲ್ಲಿ ಬದುಕುತ್ತಾರೆ ಎಂದರು.

ಈ ಭಾಗದ ಯುವ ಜನತೆಗೆ ಅತೀ ಶೀಘ್ರವಾಗಿ ಉದ್ಯೋಗ ದೊರಕಿಸುವ ಸಲುವಾಗಿ ಎಲ್ಲಾ ಪ್ರಯತ್ನಗಳನ್ನು ನಡೆಸಲಾಗುವುದು ವಿದ್ಯಾರ್ಥಿಗಳು ಉದ್ಯೋಗ ಪಡೆದುಕೊಳ್ಳುವ ಸಲುವಾಗಿ ಪೂರ್ವ ತಯಾರಿ ನಡೆಸಿ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬೇಕು.


 ಉದ್ಯೋಗ ಹುಡುಕುವವರು ಮೊದಲು ಅವರ ಮೇಲೆ ಅವರು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು, ವಿಷಯದ ಮೇಲಿನ ತಯಾರಿ ಹಾಗೂ ಸಾಮಾನ್ಯ ಜ್ಞಾನ ಇದ್ದಲ್ಲಿ ಯಶಸ್ಸು ಸಾಧ್ಯ ಎಂದರು. ಮೇಲೆ ತಿಂಗಳ 08 ರ ಭಾನುವಾರದಂದು ಕೊಪ್ಪದ ವೆಂಕಟೇಶ್ವರ ವಿದ್ಯಾಮಂದಿರ (ಬಿಜಿಎಸ್) ಇಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜನೆಗೊಂಡಿದ್ದು ಉದ್ಯೋಗ ಪಡೆಯಲು ಅಪೇಕ್ಷೆ ಹೊಂದಿರುವವರು ಈ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಈ ಬೃಹತ್ ಉದ್ಯೋಗ ಮೇಳದ ಅಧಿಕೃತ ಮೀಡಿಯಾ ಪಾರ್ಟ್ನರ್ ಆಗಿ ನ್ಯೂಸ್ ಮಲ್ನಾಡ್ ಕಾರ್ಯನಿರ್ವಹಿಸಲಿದೆ.