ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಕೇಂದ್ರ ಬಿಜೆಪಿ ಸರ್ಕಾರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಬೆಲೆ ಏರಿಕೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಉಂಟುಮಾಡಿ ಸಾಮಾನ್ಯ ವರ್ಗದ ಜನರು ಬದುಕಲು ಬಿಡದಂತೆ ಮಾಡುತ್ತಿದೆ ಎಂದು ಆರೋಪಿಸಿ ಹಾಗೂ ಸಚಿವ ಕೆ ಎಸ್ ಈಶ್ವರಪ್ಪ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ಇಂದು ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.
ಇದನ್ನೂ ಓದಿ : ಜಯಪುರ : ಭೀಕರ ರಸ್ತೆ ಅಪಘಾತ ; ಓರ್ವ ಮಹಿಳೆ ಸಾವು ಇನ್ನೋರ್ವ ವ್ಯಕ್ತಿಯ ಸ್ಥಿತಿ ಗಂಭೀರ
ಈಶ್ವರಪ್ಪ ಅವರ ರಾಜೀನಾಮೆ ಕುರಿತು ಪ್ರಶ್ನೆ ಮಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಕೆ.ಎಸ್ ಈಶ್ವರಪ್ಪ ಅವರು ಕಮೀಶನ್ ಪಡೆದಿಲ್ಲ ಎಂದಾದರೆ ರಾಜೀನಾಮೆ ನೀಡಿರುವುದಾದರು ಯಾವ ಕಾರಣಕ್ಕೆ, ಈಶ್ವರಪ್ಪ ಹಣ ಪಡೆಯದೇ ಹೋಗಿದ್ದರೆ ಏತಕ್ಕಾಗಿ ಬಿಜೆಪಿ ಹೈಕಮಾಂಡ್ ಅವರಿಗೆ ರಾಜೀನಾಮೆ ನೀಡುತ್ತಿತ್ತು. ಸುಖಾ ಸುಮ್ಮನೆ ಯಾರೂ ಕೂಡ ಈ ರೀತಿಯ ನಿರ್ಧಾರಗಳನ್ನು ಕೈಗೊಳ್ಳುವುದಿಲ್ಲ ಹೈಕಮಾಂಡ್ ರಾಜೀನಾಮೆ ನೀಡಲು ಸೂಚನೆ ನೀಡಿರುವ ಉದ್ದೇಶವೇ ಇದಾಗಿದೆ ಎಂದು ಈಶ್ವರಪ್ಪ ಅವರ ಮೇಲೆ ವಾಗ್ದಾಳಿ ನಡೆಸಿದರು.
ಬಿಜೆಪಿಯವರು ಅಧಿಕಾರಕ್ಕೆ ಬಂದು ಮೂರು ವರ್ಷವೇ ಕಳೆದಿದೆ ಈ ಮಧ್ಯೆ ಕೇಂದ್ರ ಹಾಗೂ ರಾಜ್ಯದಲ್ಲೂ ಬಿಜೆಪಿ ಸರ್ಕಾರವಿದೆ ಆದರೆ ಅವರು ಸಂಪೂರ್ಣವಾಗಿ ನಿಷ್ಕ್ರಿಯವಾಗಿದ್ದಾರೆ ಆದ ಕಾರಣ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕುಟುಕಿದರು.
ಈ ಪ್ರತಿಭಟನಾ ಮೆರವಣಿಗೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಸಿದ್ಧರಾಮಯ್ಯ ಸೇರಿದಂತೆ ಅನೇಕ ಮುಖಂಡರುಗಳು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇಶದಲ್ಲಿ ಬಡವರ ಮೇಲೆ ಬಿಜೆಪಿ ದೌರ್ಜನ್ಯ ಎಸಗುತ್ತಿದೆ, ಪ್ರತಿದಿನವೂ ಕೂಡ ಅಗತ್ಯ ವಸ್ತುಗಳಾದ ಬೆಳೆಕಾಳುಗಳು, ಅಡುಗೆ ಎಣ್ಣೆ, ಪೆಟ್ರೋಲ್ ಡೀಸೆಲ್ ಗ್ಯಾಸ್ ಸೇರಿದಂತೆ ಬಹುತೇಕ ವಸ್ತುಗಳ ಮೇಲೆ ಬೆಲೆಏರಿಕೆ ನಡೆಸುತ್ತಿದೆ ಇದರಿಂದಾಗಿ ಬಡವರು ಅತ್ಯಂತ ಕ್ಲಿಷ್ಟಕರ ಸನ್ನಿವೇಶದಿಂದ ಜೀವನ ನಡೆಸುವಂತಾಗಿದೆ ಎಂದರು.
ಸರ್ಕಾರದ ಕುರಿತು ಮಾತನಾಡಿದ ಅವರು ಬಿಜೆಪಿ ಸರ್ಕಾರದ ಆಡಳಿತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಪ್ರತಿಯೊಂದು ಕೆಲಸಕ್ಕೂ 40% ಕಮಿಷನ್ ನೀಡುವ ಸ್ಥಿತಿ ಎದುರಾಗಿದೆ ಮುಂದಿನ ದಿನಗಳಲ್ಲಿ ಚುನಾವಣೆ ಬರಲಿದೆ ಈ ಸಂದರ್ಭದಲ್ಲಿ ಜನರು ಬಿಜೆಪಿಗೆ ತಕ್ಕ ಶಾಸ್ತಿ ಮಾಡುತ್ತಾರೆ ಎಂದು ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದರು.
ನಡೆದ ಈ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಗ್ಯಾಸ್ ಸಿಲೆಂಡರ್ ಗೆ ಹೂವಿನ ಹಾರ ಹಾಕಿ ನಾಲ್ವರು ಹೊತ್ತೊಯ್ಯುತ್ತಿದ್ದ ದೃಶ್ಯವೂ ಕಂಡುಬಂತು, ಈ ಮೂಲಕ ಬಿಜೆಪಿ ಸರ್ಕಾರವನ್ನು ತೀವ್ರವಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ವಿರೋಧಿಸಿದರು ಹಾಗೂ ಬೆಲೆ ಏರಿಕೆಯ ವಿರುದ್ಧ ಆಕ್ರೋಶ ಹೊರಹಾಕಿದರು. ಬಿಜೆಪಿ ಸರ್ಕಾರವು ಸಂಪೂರ್ಣವಾಗಿ ಜನವಿರೋಧಿ ನೀತಿಯನ್ನು ಅನುಸರಿಸುತ್ತಿದೆ ತಿದ್ದಿಕೊಳ್ಳದೇ ಮುಂದುವರೆದಲ್ಲಿ ತಕ್ಕಶಾಸ್ತಿ ಆಗುತ್ತದೆ ಎಂದು ವಾಗ್ದಾಳಿ ನಡೆಸಿದರು.
ಈ ಪ್ರತಿಭಟನಾ ಮೆರವಣಿಗೆ ಹಾಗೂ ಸಭೆಯಲ್ಲಿ ಕಾಂಗ್ರೆಸ್ ನ ಪ್ರಮುಖ ನಾಯಕರಾದ ಸಿದ್ದರಾಮಯ್ಯ, ಸಿಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಡಿ ರಾಜೇಗೌಡ, ಮಾಜಿ ಸಂಸದ ದೃವನಾರಾಯಣ, ಸಚಿನ್ ಮೀಗ, ಮಾಜಿ ಶಾಸಕ ಶ್ರೀನಿವಾಸ್, ಹಾಗೂ ಕಾಂಗ್ರೆಸ್ ನ ಮುಖಂಡರುಗಳು ಮತ್ತು ಕಾರ್ಯಕರ್ತರು ಅತಿಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಸಂಚು ರೂಪಿಸಿದ್ದ ಗ್ಯಾಂಗ್ ಪೊಲೀಸರ ಬಲೆಗೆ :
ಶಿವಮೊಗ್ಗ : ಬಜರಂಗದಳದ ಕಾರ್ಯಕರ್ತ ಹರ್ಷನ ಕೊಲೆಗೆ ಪ್ರತೀಕಾರವಾಗಿ ಮತ್ತೊಂದು ಕೊಲೆಗೆ ಸಂಚು ನಡೆದಿತ್ತು. ಮುಸ್ಲಿಂ ಯುವಕನ ಕೊಲೆಗೆ ಸಂಚು ರೂಪಿಸಿದ್ದ ಖತರ್ನಾಕ್ ಗ್ಯಾಂಗ್‌ನನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.
ಹರ್ಷನ ಕೊಲೆಯ ನಂತರ ಈ ಗ್ಯಾಂಗ್ ಸೇರಿ ರಾತ್ರೋರಾತ್ರಿ ಮುಸ್ಲಿಂ ಯುವಕನ ಕೊಲೆಗೆ ಸಂಚು ರೂಪಿಸಿದ್ದರು.
ಹಿಂದೂ ಕಾರ್ಯಕರ್ತ ಹರ್ಷನ ಕೊಲೆ ಸಮಯದಲ್ಲಿ ಪತ್ರಕರ್ತರೊಬ್ಬರ ಮೇಲೆ ಹಲ್ಲೆ ನಡೆಸಲಾಗಿತ್ತು. ಅದೇ ವೇಳೆ ಹಲ್ಲೆ ಸಂಬಂಧ ಆರೋಪಿ ಜೇಟ್ಲಿ ಎಂಬಾತನನ್ನು ಶಿವಮೊಗ್ಗ ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಮುಸ್ಲಿಂ ಯುವಕನ ಹತ್ಯೆ ಸಂಚಿನ ಬಗ್ಗೆ ಆತ ಮಾಹಿತಿ ಬಾಯಿ ಬಿಟ್ಟಿದ್ದನು. ಆರೋಪಿ ನೀಡಿದ ಮಾಹಿತಿಯ ಆಧಾರದ ಮೇಲೆ ಸುಮಾರು 13 ಜನರ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಿಸಿಕೊಂಡು ಇದುವರೆಗೂ ಹಲವರನ್ನು ಬಂಧಿಸಲಾಗಿದೆ.
.jpeg)
.jpeg)
.jpeg)




.jpg)
.jpg)

0 Comments