ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಯುವತಿಯೋರ್ವಳಿಗೆ ಅತಿಯಾದ ಶ್ರೀಮಂತಿಕೆ ಇರುವಂತೆ ಪ್ರದರ್ಶಿಸಿ ಆಕೆಯನ್ನು ಬಲೆಗೆ ಬೀಳಿಸಿಕೊಂಡು ವಂಚಿಸಿ ಮದುವೆಯಾಗಿ ಬಳಿಕದಲ್ಲಿ ಆಕೆಯ ಅಕ್ಕನನ್ನು ಕೂಡ ವಂಚಿಸಿದ ಚಾಲಾಕಿ ವ್ಯಕ್ತಿಯ ಅಸಲಿ ಮುಖ ಇದೀಗ ಬಯಲಿಗೆ ಬಂದಿದೆ.
ಇದನ್ನೂ ಓದಿ : ಸಾಮರಸ್ಯದ ಮೂಲಕ ದಶಕಗಳ ವಿವಾದ ಅಂತ್ಯ ; ಹಿಂದೂ ಕ್ರೈಸ್ತ ಧರ್ಮೀಯರ ಸಹಕಾರದೊಂದಿಗೆ ಶಿಲುಬೆ ತೆರವುಗೊಳಿಸಿದ ಸಿಬ್ಬಂದಿಗಳು
ಶಿವಮೊಗ್ಗದ ಅಚ್ಚುತರಾವ್ ಲೇಔಟ್ ನಲ್ಲಿ ವಾಸವಿದ್ದ ವ್ಯಕ್ತಿ ಪುನೀತ್, ನಾನೊಬ್ಬ ಶ್ರೀಮಂತ ಎಂದೂ ಹಾಗೂ ಆತನ ಹೆಸರಿನಲ್ಲಿ ಶಿವಮೊಗ್ಗದ ವಿವಿಧೆಡೆಯಲ್ಲಿ ಬಂಗಲೆ ವಿವಿಧ ರೀತಿಯ ಕಾರು-ಬೈಕುಗಳಿವೆ ಎಂದು ನಂಬಿಸಿ 2017 ರಲ್ಲಿ ಭದ್ರಾವತಿ ಮೂಲದ ಜನ್ನಾಪುರ ನಿವಾಸಿ ಅನುಷಾ ಎಂಬವಳನ್ನು ಬಲೆಗೆ ಬೀಳಿಸಿಕೊಂಡಿದ್ದಾನೆ.
ಬಲೆಗೆ ಬಿದ್ದ ಅನುಷಾಳು ಆತನನ್ನು ಪ್ರೇಮ ವಿವಾಹವಾಗಿ ಕೆಲ ತಿಂಗಳುಗಳ ಕಾಲ ಸುಖ ಸಂಸಾರವನ್ನು ನಡೆಸಿದ್ದರು, 6ತಿಂಗಳ ನಂತರದಲ್ಲಿ ದಂಪತಿಗಳ ನಡುವೆ ವಿಪರೀತ ಜಗಳ ಕಲಹ ಉಂಟಾಗಿತ್ತು. ಈ ಸಂದರ್ಭದಲ್ಲಿ ಅನುಷಾಳ ಸಹೋದರಿ ಅರ್ಪಿತಾ ಬಳಿ ತೆರಳಿ ಆಕೆಯ ಸಹಾಯಕ್ಕೆ ಅಂಗಲಾಚಿದ್ದಾನೆ. ಈ ಸಂದರ್ಭದಲ್ಲಿ ತಂಗಿಯ ಉತ್ತಮ ಜೀವನಕ್ಕಾಗಿ ಅವಳ ಭವಿಷ್ಯದ ಕುರಿತಾಗಿ ಯೋಚಿಸಿದ ಸಹೋದರಿಯು ಆತನ ಕಾರು ಉದ್ಯಮಕ್ಕಾಗಿ 22.80 ಲಕ್ಷ ರೂಪಾಯಿ ಹಣವನ್ನು ಕೊಟ್ಟಿದ್ದಾರೆ.
ಅರ್ಪಿತಾ ಅವರಿಂದ ಹಣ ಪಡೆದು ತನ್ನ ಕುಟುಂಬದೊಂದಿಗೆ ಐಷಾರಾಮಿ ಜೀವನ ನಡೆಸುತ್ತಿದ್ದಾನೆ. ಹಣ ಕೇಳಿದಕ್ಕೆ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಪುನೀತ್ ಅವರಿಂದ ನಮಗೆ ಮೋಸವಾಗಿದೆ ಎಂದು ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಅರ್ಪಿತಾ ದೂರನ್ನು ದಾಖಲು ಮಾಡಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದು ಸೂಕ್ತ ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷಿಸುವ ಭರವಸೆ ನೀಡಿದ್ದಾರೆ.






0 Comments