ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಶಿವಮೊಗ್ಗದಲ್ಲಿ ನಡೆದ ಭಜರಂಗದಳದ ಕಾರ್ಯಕರ್ತ ಹರ್ಷನ ಕೊಲೆಯ ನಂತರದ ದಿನಗಳಲ್ಲಿ ಎರಡೂ ಕೋಮಿನ ಯುವಕರ ಮಧ್ಯೆ ಪ್ರತೀಕಾರದ ಕಿಚ್ಚು ಜೋರಾಗಿದ್ದು ಇದೀಗ ಮತ್ತೋರ್ವ ಭಜರಂಗದಳದ ಕಾರ್ಯಕರ್ತನ ಹತ್ಯೆಗೆ ರೂಪಿಸಿದ್ದ ಸಂಚನ್ನು ವಿಫಲಮಾಡುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ. 

ಇದನ್ನೂ ಓದಿ : ಬಾಳೆಹೊನ್ನೂರು : ಅರಣ್ಯ ಪ್ರದೇಶದಲ್ಲಿ ಪ್ರತ್ಯಕ್ಷವಾದ ಎರಡು ಹುಲಿಗಳ ಸಂಚಾರ

ಶಿವಮೊಗ್ಗದಲ್ಲಿ ಕೆಲ ತಿಂಗಳುಗಳ ಹಿಂದೆ ನಡೆದ ಭಜರಂಗದಳದ ಕಾರ್ಯಕರ್ತ ಹರ್ಷನ ಹತ್ಯೆಯ ನಂತರದಲ್ಲಿ ಇಡೀ ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ನಂತರದಲ್ಲಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಬಹಳಷ್ಟು ಶ್ರಮವಹಿಸಿದ್ದರು ಆ ಬಳಿಕ ಇದೀಗ ಮತ್ತೆ ಶಿವಮೊಗ್ಗದಲ್ಲಿ ಯುವಕರ ನಡುವೆ ಕೋಮುದಳ್ಳುರಿ ಹೆಚ್ಚಾಗುತ್ತಾ ಹೋಗಿದೆ. ಹರ್ಷನ ಹತ್ಯೆಯ ಬಳಿಕ ಅಲ್ಲಾವುದ್ದೀನ್ ಎಂಬಾತನನ್ನು ಹತ್ಯೆ ಮಾಡುವ ಸಲುವಾಗಿ ಹರ್ಷನ ಸ್ನೇಹಿತರು ನಡೆಸಿದ ಸಂಚನ್ನು ಪೊಲೀಸರು ವಿಫಲಗೊಳಿಸಿದ್ದರು ಆದರೆ ಆ ನಂತರದಲ್ಲಿ ಇದೀಗ ಅಲ್ಲಾವುದ್ದೀನ್ ಸ್ನೇಹಿತರು ಭಜರಂಗದಳದ ಸಹ ಸಂಚಾಲಕ ಭರತ್ ನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ. 

ಅಭ್ಯರ್ಥಿಗಳು ಈ ಕೆಳಕಂಡ ಲಿಂಕ್ ಮೂಲಕ ರಿಜಿಸ್ಟರ್ ಆಗಬಹುದು : https://forms.gle/PvypXpJerzDzsrfE9

ಭರತ್ ನನ್ನು ಹತ್ಯೆ ಮಾಡಲು ಸಂಚು ಮಾಡಿದ್ದ ಮೂವರು ಮುಸ್ಲಿಂ ಯುವಕರನ್ನು ವಶಕ್ಕೆ ಪಡೆಯುವಲ್ಲಿ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಅನೇಕ ದಿನಗಳಿಂದ ಸೇಡಿಗೆ ಸೇಡು, ಏಟಿಗೆ ಎದಿರೇಟು ಎಂಬ ಮನಸ್ಥಿತಿ ಯುವಕರಲ್ಲಿ ಎದುರಾಗಿದ್ದು ಈ ದೊಡ್ಡ ಸಮಸ್ಯೆಯನ್ನು ಹಾಗೂ ಆಗಬಹುದಾದ ಗಲಭೆಯನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ಪೊಲೀಸರು ಹೆಚ್ಚಿನ ಶ್ರಮವಹಿಸುತ್ತಿದ್ದಾರೆ. 

ಹರ್ಷನ ಗೆಳೆಯನಾದ ಭರತ್ ಬಗ್ಗೆ ಕೆಲ ಮುಸ್ಲಿಂ ಯುವಕರು ಮಾರಕಾಸ್ತ್ರಗಳನ್ನು ತೋರಿಸಿ ಭರತ್ ನ ಗೆಳೆಯನ ಬಳಿ ಅವನ ಕುರಿತು ವಿಚಾರ ತಿಳಿದುಕೊಂಡಿದ್ದಾರೆ ಹಾಗೂ ಆತನನ್ನು ಸಂಜೆಯೊಳಗೆ ಮುಗಿಸುವುದಾಗಿ ಇನ್ನೋರ್ವ ಗೆಳೆಯನಿಗೆ ತಿಳಿಸಿದ್ದು ಆತ ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಅಲರ್ಟ್ ಆಗಿ ಕೊಲೆಗೆ ರೂಪಿಸಿದ್ದ ಸಂಚನ್ನು ವಿಫಲಗೊಳಿಸುವಲ್ಲಿ  ಯಶಸ್ವಿಯಾಗಿದ್ದಾರೆ ಹಾಗೂ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗದಲ್ಲಿ ಇದೀಗ ಜನರ ಶಾಂತಿಗೆ ಭಂಗ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗಿದ್ದು ಜನರು ಆತಂಕದಲ್ಲಿ ದಿನ ಕಳೆಯುವಂತಾಗಿದೆ. 

ಗಾಂಜಾ ಮತ್ತಿನಲ್ಲಿದ್ದ ಯುವಕರು : 

ಹತ್ಯೆಗೆ ಸಂಚು ರೂಪಿಸಿದ್ದ ಯುವಕರು ಗಾಂಜಾ ಮತ್ತಿನಲ್ಲಿರುವುದು ಪೋಲಿಸರ ತನಿಖೆಯ ವೇಳೆ ತಿಳಿದುಬಂದಿದ್ದು ಇವರುಗಳ ವಯಸ್ಸು 25 ವರ್ಷದ ಒಳಗಿದ್ದು ಈ ವಯಸ್ಸಿನಲ್ಲೇ ದುಶ್ಚಟಗಳಿಗೆ ದಾಸರಾಗಿ ಕೋಮು ಸಂಘರ್ಷಕ್ಕಿಳಿದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಎಷ್ಟೇ ಕ್ರಮವಹಿಸಿದರೂ ಒಂದು ಕೋಮಿನವರ ಮೇಲೆ ಮತ್ತೊಬ್ಬರು ಸಂಚುರೂಪಿಸಿ ಕೋಮು ಸಂಘರ್ಷಕ್ಕೆ ಕಾರಣರಾಗುತ್ತಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.